ಪ್ರಭು ಶ್ರೀರಾಮನ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು.
ಧಾರವಾಡ: ರಾಮನವಮಿ ಅಂಗವಾಗಿ ನಗರದ ಅನೇಕ ಕಡೆಗಳಲ್ಲಿ ಶ್ರೀರಾಮನಿಗೆ ಪೂಜೆ-ಸಂಭ್ರಮ ನಡೆಯಿತು. ಇಲ್ಲಿಯ ಮಹಾತ್ಮ ಬಸವೇಶ್ವರ ನಗರದಲ್ಲಿ ಪ್ರಭು ಶ್ರೀರಾಮನ ಭಾವಚಿತ್ರಕ್ಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಪೂಜೆ ಸಲ್ಲಿಸುವ ಮೂಲಕ ಶ್ರೀರಾಮನವಮಿ ಆಚರಿಸಲಾಯಿತು.
ಈರೇಶ ಅಂಚಟಗೇರಿ ಮಾತನಾಡಿ, ಪ್ರಭು ಶ್ರೀರಾಮನ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು. ಅಂದಾಗ ಮಾತ್ರ ನಾವು ಶ್ರೀರಾಮನ ತತ್ವ ಪಾಲಿಸಿದಂತೆ ಆಗುತ್ತೆ. ನಾಡಿನ ಸಮಸ್ತ ಜನರಿಗೆ ಶ್ರೀರಾಮನವಮಿ ಶುಭಾಶಯಗಳು ಎಂದರು.
ಬಸವರಾಜ ಕಡಕೊಳ, ಹಂಜಿ ಶ್ರೀಕಾಂತ್ ಕ್ಯಾತಪ್ಪನವರ, ಶೇಕರ ಕವಳಿ, ರಾಜೇಶ್ವರಿ ಅಳಗವಾಡಿ, ಶಂಕರ ಪುರಲಿ, ಜಯಶ್ರೀ ಪಾಟೀಲ, ಪ್ರೇಮಾ ಶೆಟ್ಟಿ ಹಾಗೂ ಮಹಾತ್ಮ ಬಸವೇಶ್ವರ ನಗರದ ಗುರುಹಿರಿಯರು ಇದ್ದರು. ಅದೇ ರೀತಿ ಕೆಲಗೇರಿ, ಶ್ರೀನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಆಚರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.