ಭಕ್ತರು ಎಷ್ಟೇ ಬುದ್ಧಿವಂತರು, ಮುಗ್ಧರು ಆಗಿದ್ದರೂ ದೇವರ ಮೇಲಿನ ನಂಬಿಕೆ ಕಳೆದುಕೊಳ್ಳುವುದಿಲ್ಲ. ಹೀಗಾಗಿ ದೇಗುಲಗಳಲ್ಲಿ ಕಾಣಿಕೆ ಹುಂಡಿಗೆ ಹಣ ಬಂದು ಬೀಳುತ್ತದೆ. ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಐತಿಹಾಸಿಕ ಶ್ರೀ ರೇಣುಕಾಂಬಾ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ನವೆಂಬರಲ್ಲಿ ₹31,35,360 ಸಂಗ್ರಹವಾಗಿದೆ.
ನ ಹಣ ಎಣಿಕೆ ಕಾರ್ಯ ದೇವಸ್ಥಾನ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆಯಿತು.ಹುಂಡಿ ಎಣಿಕೆ ಸ್ಥಳಕ್ಕೆ ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಭೇಟಿ ನೀಡಿ ಪರಿಶೀಲಿಸಿದರು. ಅನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಭಕ್ತರ ಮೂಲಕ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಸಾಕಷ್ಟು ದವಸ ಧಾನ್ಯಗಳು ಬರುತ್ತದೆ. ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಬೇಕು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ ಅವರು, ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ಚರ್ಚೆ ನಡೆಸಿದರು.
ಇದಕ್ಕೂ ಮೊದಲು ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿ ದರ್ಶನ ಪಡೆದರು. ಸಾಗರ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಗೊಂಡು ಮೊದಲ ಬಾರಿಗೆ ಚಂದ್ರಗುತ್ತಿ ಕ್ಷೇತ್ರಕ್ಕೆ ಆಗಮಿಸಿದ ಆರ್.ಯತೀಶ್ ಅವರನ್ನು ತಾಲೂಕು ದಂಡಾಧಿಕಾರಿಗಳು ಹಾಗೂ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅವರು ಸನ್ಮಾನಿಸಿ ಗೌರವಿಸಿದರು.ಕಳೆದ ಅಕ್ಟೋಬರ್‌ನಲ್ಲಿ ಕಾಣಿಕೆ ಹುಂಡಿ ಎಣಿಸಿದಾಗ ₹25,08,680 ಸಂಗ್ರಹವಾಗಿತ್ತು. ನವೆಂಬರಿನಲ್ಲಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ₹31,35,360 ಸಂಗ್ರಹವಾಗಿತ್ತು. 1 ತಿಂಗಳಿನಲ್ಲಿ ₹6,26,680 ಹೆಚ್ಚುವರಿಯಾಗಿ ಸಂಗ್ರಹವಾಗಿದೆ.
ಹುಂಡಿ ಹಣ ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮೆರಾ ಆಳವಡಿಸಲಾಗಿತ್ತು. ಸ್ಥಳೀಯ ಗ್ರಾ.ಪಂ. ಸದಸ್ಯ ಎಂ.ಪಿ. ರತ್ನಾಕರ್ ಎಣಿಕೆ ಕಾರ್ಯಕ್ಕೆ ಭೇಟಿ ನೀಡಿದರು.ತಹಸೀಲ್ದಾರ್ ಹುಸೇನ್ ಸರಕಾವಸ್, ಶಿರಸ್ತೇದಾರ್ ಎಸ್. ನಿರ್ಮಲ ಪ್ರಭಾಕರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್, ಮುಜರಾಯಿ ಇಲಾಖೆ ವಿಷಯ ನಿರ್ವಾಹಕಿ ಎಂ. ಶೃತಿ, ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ದೇವಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.
- - - -29ಕೆಪಿಸೊರಬ03: