ವಿಜೃಂಭಣೆಯಿಂದ ನಡೆದ ಶ್ರೀಸಿದ್ದೇಶ್ವರಸ್ವಾಮಿ ಬಂಡಿ ಉತ್ಸವ, ಪಟ್ಟೋತ್ಸವ

KannadaprabhaNewsNetwork | Published : May 7, 2025 12:50 AM
Follow Us

ಸಾರಾಂಶ

ಮಹಿಳೆಯರು ತಬ್ಬಿಂಟು ಆರತಿ ಬೆಳಗಿದರು. ಆರಕ್ಕೆ ಹೋತ್ತಿರುವ ಮಹಿಳೆಯರು ಬಾಯಿಬೀಗ ಹಾಕಿ ಪೂಜೆ ಸಲ್ಲಿಸಿದರು.ಸೋಮವಾರ ಬೆಳಿಗ್ಗೆ ಆಯಾ ದೇವಸ್ಥಾನಗಳಿಗೆ ದೇವರ ಮೂರ್ತಿಯನ್ನು ಕೂರಿಸಲಾಯಿತು. ನಂತರ ಈಶ್ವರಸ್ವಾಮಿ ದೇವಸ್ಥಾನದಲ್ಲಿ ಬಂಡಿಕನ್ನಂಕಾಡಿ ಉತ್ಸವ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಮಂಗಳವಾರ ಶ್ರೀಸಿದ್ದೇಶ್ವರಸ್ವಾಮಿ ಬಂಡಿ ಉತ್ಸವ, ಪಟ್ಟೋತ್ಸವ ವಿಜೃಂಭಣೆಯಿಂದ ನಡೆಯಿತು.

ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಗ್ರಾಮದೇವತೆ ಮಾರಮ್ಮನ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಭಾನುವಾರ ರಾತ್ರಿ ಮಾರಮ್ಮನ ಹಬ್ಬದ ಅಂಗವಾಗಿ ಗ್ರಾಮಸ್ಥೆರು ಗ್ರಾಮದೇವತೆಗಳಾದ ಮಾರಮ್ಮ, ದೊಡ್ಡಮ್ಮ ತಾಯಿ, ಶನೇಶ್ವರ ಸ್ವಾಮಿ ಉತ್ಸವ ನಡೆಸಲಾಯಿತು. ಉತ್ಸವದ ಜತೆಗೆ ದೊಡ್ಡಮ್ಮ ತಾಯಿ ಹಾಗೂ ಶ್ರೀಸಿದ್ದೇಶ್ವರ ಸ್ವಾಮಿ ಪೂಜಾಕುಣಿತ, ನಂದಿಧ್ವಜ, ಮಾರಿಕುಣಿತ ಮೆರವಣಿಗೆ, ವೀರಮಕ್ಕಳ ಕುಣಿತ ನಡೆಸಲಾಯಿತು.

ಬಳಿಕ ರಾತ್ರಿ ಗ್ರಾಮದ ಹೊರವಲಯದ ಮಾರಮ್ಮ ಕೊಳದ ಬಳಿ ದೇವರ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ಪೂಜೆ ನಡೆಸಿ ರಾತ್ರಿ 9.40ರ ಸುಮಾರಿಗೆ ಅಲ್ಲಿಂದ ದೇವರನ್ನು ಗ್ರಾಮಕ್ಕೆ ತಂದು ಬೆಳಗಿನ ಜಾವ 3 ಗಂಟೆ ವರೆಗೆ ನಡೆಸಿದರು. ಮಹಿಳೆಯರು ತಬ್ಬಿಂಟು ಆರತಿ ಬೆಳಗಿದರು. ಆರಕ್ಕೆ ಹೋತ್ತಿರುವ ಮಹಿಳೆಯರು ಬಾಯಿಬೀಗ ಹಾಕಿ ಪೂಜೆ ಸಲ್ಲಿಸಿದರು.ಸೋಮವಾರ ಬೆಳಿಗ್ಗೆ ಆಯಾ ದೇವಸ್ಥಾನಗಳಿಗೆ ದೇವರ ಮೂರ್ತಿಯನ್ನು ಕೂರಿಸಲಾಯಿತು. ನಂತರ ಈಶ್ವರಸ್ವಾಮಿ ದೇವಸ್ಥಾನದಲ್ಲಿ ಬಂಡಿಕನ್ನಂಕಾಡಿ ಉತ್ಸವ ನಡೆಸಲಾಯಿತು.

ಮಂಗಳವಾರ ಬೆಳಗ್ಗೆ ಗ್ರಾಮದ ಎಲ್ಲ ಸಮುದಾಯದವರು, ದಲಿತ ಸಮುದಾಯದ ಮುಖಂಡರು ಹಾಗೂ ತೆಂಡೆ ಯಾಜಮಾನರು ಹಣ್ಣಿನ ಹೊಸ ಎಡಿಗೆಯೊಂದಿಗೆ ಗ್ರಾಮದ ಹೊರವಲಯದ ಶ್ರೀಸಿದ್ದೇಶ್ವರಸ್ವಾಮಿ ದೇವಸ್ಥಾನದ ಬಳಿಗೆ ಬಂಡಿ ಉತ್ಸವದ ಮೂಲಕ ತೆರಳಿ ಅಲ್ಲಿ ಶ್ರೀಸಿದ್ದೇಶ್ವರ ಬಂಡಿ ಉತ್ಸವ, ಪಟ್ಟೋತ್ಸವ ನಡೆಸಲಾಯಿತು. ದೇವಸ್ಥಾನದ ಬಳಿ ಸಮಾರು ಐದು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ಮೂರು ದಿನಗಳ ಮಾರಮ್ಮನ ಹಬ್ಬ, ಶ್ರೀಸಿದ್ದೇಶ್ವರ ಸ್ವಾಮಿಯ ಉತ್ಸವದ ಅಂಗವಾಗಿ ಗ್ರಾಮದಲ್ಲಿ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ದರ್ಶನ್‌ಪುಟ್ಟಣ್ಣಯ್ಯ, ಮುನ್ಮುಲ್ ನಿದೇರ್ಶಕ ಸಿ.ಶಿವಕುಮಾರ್ ಹಾಗೂ ಮಾಜಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯಶಂವತ್‌ಕುಮಾರ್ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ವೇಳೆ ಯ.ಬಿ.ಜಿ.ನಾಗೇಗೌಡ, ಶಿವೇಗೌಡ, ಬಿ.ಡಿ.ಹುಚ್ಚೇಗೌಡ, ಬಿ.ಪಿ.ಶ್ರೀನಿವಾಸ್, ಬಿ.ಕೆ.ರೇವಣ್ಣ, ಕರೀಗೌಡ, ಬಾಲರಾಮಶೇಟ್ಟಿ, ಯೋಗೀಶ್, ಬಿ.ಜೆ.ಸ್ವಾಮಿ, ಪ್ರಭಣ್ಣ, ತಮ್ಮೇಗೌಡ, ಬಿ.ಜಿ.ಪ್ರಕಾಶ್, ಬಿ.ಎಂ.ವೆಂಕಟೇಶ್, ಮರಿಸಿದ್ದಯ್ಯ, ಕೃಷ್ಣಯ್ಯ ಸೇರಿದಂತೆ ಹಲವು ತೆಂಡೆ ಯಾಜಮಾನರು ಹಾಜರಿದ್ದರು.