ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಹೊಸಹಳ್ಳಿ-ರಾಮನಹಳ್ಳಿ ವೃತ್ತದಲ್ಲಿ ಗ್ರಾಮ ದೇವತೆ ಶ್ರೀಬಿಸಿಲುಮಾರಮ್ಮ ದೇವಿಗೆ ತಂಪು ತೋರಿಸಿ, ಪೂಜಾ ಕೈಂಕರ್ಯಗಳೊಂದಿಗೆ ಬಿಸಿಲುಮಾರಮ್ಮನ ಹಬ್ಬವನ್ನು ಗ್ರಾಮಸ್ಥರು ಆಚರಿಸಿದರು.ಗ್ರಾಮದ ದೇವಾಲಯಕ್ಕೆ ತಮಟೆ ನಗಾರಿ ಸದ್ದಿನಲ್ಲಿ ಸಾಮೂಹಿಕವಾಗಿ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಮೆರವಣಿಗೆ ಸಾಗಿದರು. ದೇವಾಲಯದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿ, ಪೂಜಾ ವಿಧಿವಿಧಾನಗಳನ್ನು ಮುಗಿಸಿದರು.
ಸ್ಥಳೀಯ ಯಜಮಾನರು ಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು. ಬಳಿಕ ದೇವಾಯದ ಸುತ್ತ ಪ್ರದಕ್ಷಿಣೆ ಹಾಕಿದರು. ಅರ್ಚಕರು ಪೂಜೆ ಸಲ್ಸಿಸಿದರು. ದೇವಾಲಯ ಮತ್ತು ದೇವತೆ ಮೂರ್ತಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಮೆರವಣಿಗೆ ಮೂಲಕ ಮನೆ ಮನಗೆ ತೆರಳಿದರು.ಈ ವೇಳೆ ಸ್ಥಳೀಯ ಯಜಮಾನರಾದ ಪಾಪೇಗೌಡ, ಎಚ್.ಎಂ.ಸುರೇಶ್, ನಿಂಗಣ್ಣ, ಜೋಗಪ್ಪ, ರಾಮಣ್ಣ, ಶಿವಲಿಂಗು,ಚಿಕ್ಕಮಾದು, ನಾಗರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಯುವ ಮುಖಂಡರಾದ ಹೊಸಹಳ್ಳಿಶಿವು, ಶೇಖರ್, ಶ್ರೀಕಾಂಕ್ ಜೆಕೆ, ರವಿಕುಮಾರ್, ಮಾಧು ಮತ್ತಿತರರಿದ್ದರು.
ಶ್ರೀಬಿಸಿಲು ಮಾರಮ್ಮ ದೇವಿ ಪೂಜಾ ಮಹೋತ್ಸವಮಂಡ್ಯ:
ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಶ್ರೀಬಿಸಿಲು ಮಾರಮ್ಮ ದೇವಿಯ ಪೂಜಾ ಮಹೋತ್ಸವವು ಬುಧವಾರ ಸಂಭ್ರಮ ಸಡಗರದಿಂದ ನಡೆಯಿತು.ಗ್ರಾಮದ ಮಹಿಳೆಯರು ಪೂಜಾ ಸಾಮಗ್ರಿ ಇರುವ ತಂಬಿಟ್ಟು ಆರತ ಸಮೇತವಿರುವ ಬುಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡು ಗ್ರಾಮದ ಹೊರವಲಯದ ಜಮೀನಿನಲ್ಲಿ ಸಂಪ್ರದಾಯದಂತೆ ಪೂಜಾ ವಿವಿಧಾನಗಳನ್ನು ಬಿಸಿಲ ಮಾರಮ್ಮ ದೇವಿಗೆ ನೆರವೇರಿಸಲಾಯಿತು.
ಹರಕೆ ಮರಿಗಳು ಹಾಗೂ ಕೋಳಿಗಳನ್ನು ತಂದು ದೇವಿಗೆ ಒಪ್ಪಿಸಿದರು. ಬಾಳೆ ಹಣ್ಣುಗಳು ಹಾಗೂ ಕಬ್ಬಿನ ಸೀಳುಗಳನ್ನು ಬಾನೆತ್ತರಕ್ಕೆ ಎಸೆಯುವ ಮೂಲಕ ಭಕ್ತಿ ಮೆರೆಯಲಾಯಿತು. ಜೊತೆಗೆ ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಹಬ್ಬದ ನೇತೃತ್ವ ವಹಿಸಿದ್ದರು.