ಮೂಡುಬಿದಿರೆ ಸಾವಿರ ಕಂಬದ ಬಸದಿ ಆವರಣದ ಮದ್ರಬೆಟ್ಟು ನಲ್ಲೂರು ದಿ.ಭುಜಬಲಿ ಅಧಿಕಾರಿ ವೇದಿಕೆಯಲ್ಲಿ ಭಾನುವಾರ ಸಂಜೆ 5.30 ರಿಂದ ಯಕ್ಷಗಾನ ಅರ್ಥಧಾರಿ ಎಂ. ಶ್ರೀಧರ ಪಾಂಡಿ ಸಾಣೂರು 14ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ಸಾವಿರ ಕಂಬದ ಬಸದಿ ಆವರಣದ ಮದ್ರಬೆಟ್ಟು ನಲ್ಲೂರು ದಿ.ಭುಜಬಲಿ ಅಧಿಕಾರಿ ವೇದಿಕೆಯಲ್ಲಿ ಭಾನುವಾರ ಸಂಜೆ 5.30 ರಿಂದ ಯಕ್ಷಗಾನ ಅರ್ಥಧಾರಿ ಎಂ. ಶ್ರೀಧರ ಪಾಂಡಿ ಸಾಣೂರು 14ನೇ ವರ್ಷದ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಮೂಡುಬಿದಿರೆ ಶ್ರೀ ಜೈನ ಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದರು.ಕಾರ್ಯಕ್ರಮದ ಸಂಯೋಜಕ ಮಹಾವೀರ ಪಾಂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಧರ ಪಾಂಡಿ ಸಂಸ್ಮರಣೆ ಮತ್ತು ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ ಕಣಿಯೂರು ಸೂರ್ಯನಾರಾಯಣ ಭಟ್ ಅವರಿಗೆ ನೀಡಿ ಗೌರವಿಸಲಾಗುವುದು.ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಕೆ. ಎಂ. ರಾಘವ ನಂಬಿಯಾರ್, ಶ್ರೀ ಆದಿನಾಥ ಸ್ವಾಮಿ ಬಸದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೊ.ಕೆ. ಗುಣಪಾಲ ಕಡಂಬ, ನಿವೃತ್ತ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು ಉಪಸ್ಥಿತರಿರುತ್ತಾರೆ. ಸಮಾರಂಭದಲ್ಲಿ ವಾಗ್ಮಿ ಮುನಿರಾಜ ರೆಂಜಾಳ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.ಪ್ರಪ್ರಥಮ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನ ಸಂಸ್ಮರಣಾ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಎಂ. ಶ್ರೀಧರ ಪಾ೦ಡಿ ಸಾಣೂರು ಅವರು ರಚಿಸಿದ ಪ್ರಸಂಗವಾದ ಜಿನಕಥೆಯ ದೊಂದಿ ಬೆಳಕಿನ ಯಕ್ಷಗಾನ ‘ಶ್ರೀ ಪಾರ್ಶ್ವನಾಥ ಚರಿತೆ’ಯನ್ನು ಪ್ರಪ್ರಥಮ ಬಾರಿಗೆ ಪ್ರದರ್ಶಿಸಲಾಗುವುದು. ಅಜಿತ್ ಜೈನ ನಾರಾವಿ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.ಪ್ರದರ್ಶನದ ಹಿಮ್ಮೇಳ ಮತ್ತು ಪಾತ್ರವರ್ಗದಲ್ಲಿ ಖ್ಯಾತ ಕಲಾವಿದರಾದ ಭಾಗವತರು-ದೇವಿಪ್ರಸಾದ್ ಆಳ್ವ ಮದ್ದಳೆ- ಪದ್ಮನಾಭ ಉಪಾಧ್ಯಾಯ, ಚೆಂಡೆ- ಚೈತನ್ಯ ಕೃಷ್ಣ ಪದ್ಯಾಣ, ಚಕ್ರತಾಳ- ವೆಂಕಟೇಶ್, ಕಾರ್ಕಳ ಹಾಗೂ ಸ್ತ್ರೀ ಪಾತ್ರಧಾರಿಗಳಾದ ಅಕ್ಷಯ್ ಮಾರ್ನಾಡ್ ಮತ್ತು ಸುಷ್ಮಾ ಮೈರ್ಪಾಡಿ ಇರಲಿದ್ದಾರೆ.
ಮುನಿರಾಜ ರೆಂಜಾಳ, ಶ್ರೀರಮಣಾಚಾರ್, ಚಂದ್ರಶೇಖರ ಧರ್ಮಸ್ಥಳ, ಡಾ.ಶ್ರುತಕೀರ್ತಿರಾಜ ಉಜಿರೆ, ಗಣೇಶ್ ಶೆಟ್ಟಿ ಮಹಾವೀರ ಪಾಂಡಿ, ಡಾ.ಪ್ರಭಾತ್ ಬಲ್ನಾಡ್ ಸೇರಿದಂತೆ ಹಲವು ಕಲಾವಿದರು ಪಾತ್ರವರ್ಗದಲ್ಲಿ ಸಹಕರಿಸಲಿದ್ದಾರೆ. ಸಮಗ್ರ ಕಾರ್ಯಕ್ರಮ ನಿರ್ವಹಣೆಯಲ್ಲಿ ಡಾ.ಪ್ರಭಾತ್ ಬಲ್ನಾಡ್ ಮತ್ತು ಜಯಶ್ರೀ ಅಧಿಕಾರಿ ಸಹಕರಿಸಲಿದ್ದಾರೆ ಎಂದರು.ಬಸದಿಗಳ ಮೊತ್ತೇಸರ ಪಟ್ಟಶೆಟ್ಟಿ ಸುಧೇಶ್ ಕುಮಾರ್, ಶ್ರೀಧರ್ ಪಾಂಡಿ ಅವರ ಪುತ್ರ ಶ್ರೀಕಾಂತ್ ಪಾಂಡಿ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.