ದತ್ತ ವಿಜಯಾನಂದ ತೀರ್ಥರಿಗೆ ಅಭಿನಂದನೆ

KannadaprabhaNewsNetwork |  
Published : Aug 30, 2024, 01:09 AM IST
42 | Kannada Prabha

ಸಾರಾಂಶ

ಗಣಪತಿ ಸಚ್ಚಿದಾನಂದ ಆಶ್ರಮ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರದೊಂದಿಗೆ ಪರಿಸರ ಪೋಷಣೆ ಮನಃಶಾಂತಿ ಸಿಗುವ ತಾಣವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ 21ನೇ ಚಾತುರ್ಮಸ ಪ್ರಯುಕ್ತ ನಡೆದ ಶತಚಂಡಿ ಯಾಗ ಮತ್ತು ಸಂಪೂರ್ಣ ಶ್ರೀಮದ್ರಾಮಾಯಣ ಮಹಾಯಾಗ ಅಭೂತಪೂರ್ವವಾಗಿ ಸಂಪನ್ನಗೊಂಡಿದ್ದು, ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದಿಂದ ಅಭಿನಂದಿಸಲಾಯಿತು.ಬಳಿಕ ಮಾತನಾಡಿದ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಶ್ರೀ ದತ್ತ ವಿಜಯಾನಂದತೀರ್ಥರ ಜ್ಞಾನ ಸಂಪತ್ತನ್ನು ಕೊಂಡಾಡಿದರು. ಲೋಕ ಕಲ್ಯಾಣಕ್ಕಾಗಿ ಶ್ರೀಗಳು ಕೈಗೊಂಡಿರುವ ಧಾರ್ಮಿಕ ಕಾರ್ಯಳನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.ಶ್ರೀ ಗಣಪತಿ ಸಚಿದಾನಂದ ಸ್ವಾಮಿಗಳ ಆಶೀರ್ವಾದ ಮತ್ತು ಮಾರ್ಗದರ್ಶನ ದಲ್ಲಿ ಆಶ್ರಮವು ಹೀಗೆ ನೂರುಕಾಲ ಮೈಸೂರಿಗರಿಗೆ ಮತ್ತು ಇಡೀ ವಿಶ್ವಕ್ಕೆ ಸಕಲ ಸಂಮಂಗಲವನ್ನು ನೀಡಲಿ ಎಂದು ಪ್ರಾರ್ಥಿಸಿದರು.ಗಣಪತಿ ಸಚ್ಚಿದಾನಂದ ಆಶ್ರಮ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರದೊಂದಿಗೆ ಪರಿಸರ ಪೋಷಣೆ ಮನಃಶಾಂತಿ ಸಿಗುವ ತಾಣವಾಗಿದೆ. ಪ್ರವಾಸೋದ್ಯಮದಲ್ಲಿ ದೇಶ ವಿದೇಶದಿಂದ ಭಕ್ತವೃಂದವನ್ನು ಆಕರ್ಷಿಸುತ್ತದೆ. ಯಾವುದೇ ಜಾತಿ ಭೇದವಿಲ್ಲದೆ ಜನಮುಖಿ ಕೇಂದ್ರವಾಗಿದೆ. ಕಳೆದ ಕೋವಿಡ್ ವೇಳೆ ಲಕ್ಷಾಂತರ ಮಂದಿಗೆ ಪ್ರತಿನಿತ್ಯ ಅನ್ನದಾನ ಮತ್ತು ವೈದ್ಯಕೀಯ ನೆರವು ನೀಡಿ ಮಾನವೀಯತೆ ಕೆಲಸ ಮಾಡಿದ್ದಾರೆ ಎಂದರು.ಈ ವೇಳೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ್, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಹರೀಶ್, ಮುಳ್ಳೂರು ಸುರೇಶ್, ಕಡಕೋಳ ಜಗದೀಶ್, ಪ್ರಶಾಂತ್, ರಂಗನಾಥ್, ಮಿರ್ಲೆ ಪನೀಶ್, ಜ್ಯೋತಿ, ಲತಾ ಬಾಲಕೃಷ್ಣ, ನಾಗಶ್ರೀ, ಸುಚಿಂದ್ರ, ಶ್ರೀರಾಮ ಸೇನೆಯ ಸಂಜಯ್, ಸಂತೋಷ್ , ಶ್ರೀಕಾಂತ್, ಹೇಮಂತ್, ಮನು ಅಪ್ಪಿ, ಸಾಗರ್ ಚಕ್ರವರ್ತಿ, ಪುನೀತ್ ಮೊದಲದವರು ಇದ್ದರು.

PREV

Recommended Stories

‘ಫಾರಿನ್‌ ಅನ್ನಭಾಗ್ಯ’ ಕೊಟ್ಟವರಿಗೆ ಹವಾಲಾ ಮೂಲಕ ಹಣ ಪಾವತಿ?
ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ ಮಾಡಿ : ಮೊಯ್ಲಿ