ಲಿಂಗಸುಗೂರು: ಭಾನುವಾರ ಬೆಂಗಳೂರಿನಲ್ಲಿ ಹೃದಯಘಾತದಿಂದ ನಿಧನ ಹೊಂದಿದ ಶಾಸಕ ಮಾನಪ್ಪ ವಜ್ಜಲ್ ಪುತ್ರ ಶ್ರೀಮಂತರಾಯ ವಜ್ಜಲ್ ರವರ ರಾಜ್ಯ ನಾನಾ ಕ್ಷೇತ್ರಗಳ ಶಾಸಕರು ಸೇರಿದಂತೆ ನಾನಾ ಮಠ, ಮಾನ್ಯಗಳ ಪೂಜ್ಯರು ಸೇರಿದಂತೆ ಕ್ಷೇತ್ರದ ಅಪಾರ ಸಂಖ್ಯೆಯ ಜನರು ಪಕ್ಷಾತೀತವಾಗಿ ಆಗಮಿಸಿ ಅಂತೀಮ ದರ್ಶನ ಪಡೆದರು.
ಪಾರ್ಥಿವ ಶರೀರವನ್ನು ಕುಟುಂಬಸ್ಥರು ಹಾಗೂ ಜನರು. ಶೋಕ ಸಾಗರದ ಮದ್ಯೆ ಭಾರದೇ ಲೋಕಕ್ಕೆ ಅಂತೀಮ ಯಾತ್ರೆ ನಡೆಸಿದರು. ಶಾಸಕ ಮಾನಪ್ಪ ವಜ್ಜಲ್ ಪುತ್ರ ಶ್ರೀಮಂತರಾಯ ವಜ್ಜಲ್ ನಿನ್ನೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದರು. ಇಂದು ಬೆಳಗ್ಗೆ ಶಾಸಕರ ಸ್ವ-ಗೃಹ ನಾಗಾ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಶ್ರೀಮಂತರಾಯ ವಜ್ಜಲ್ ಸಾವಿನ ಸುದ್ದಿ ತಿಳಿದು ಕ್ಷೇತ್ರದ ಜನರು ಪಕ್ಷಾತೀತವಾಗಿ ಆಗಮಿಸಿ ಅಂತೀಮ ದರ್ಶನ ಪಡೆದು ಶಾಸಕರ ಮಗನ ಸಾವಿನ ಕುರಿತು ತೀವ್ರ ದಿಗ್ಭ್ರಾಂತಿ ವ್ಯಕ್ತಪಡಿಸಿದರು.ಪುತ್ರನನ್ನು ಕಳೆದುಕೊಂಡ ಶಾಸಕ ಮಾನಪ್ಪ ವಜ್ಜಲ್ರಿಗೆ ಮಡುಗಟ್ಟಿದ ದುಖಃ ತಡೆದುಕೊಳ್ಳಲಾಗದೆ ಮಗನ ಅಂತೀಮ ದರ್ಶನಕ್ಕೆ ಬಂದ ಜನರ ನೋಡಿದ ಕಣ್ಣುಗಳಲ್ಲಿ ನೀರು ಹರಿದವು. ಶಾಸಕ ವಜ್ಜಲ್ ರವರ ದುಖಃದ ಕಣ್ಣೀರು ಕಂಡ ಕ್ಷೇತ್ರದ ಜನರು ಈ ಸಾವು ನ್ಯಾಯವೇ ಎಂದು ಮಮ್ಮಲ ಮರುಗಿದರು.
ಶಾಸಕರ ಕಂಬನಿ: ಹಾಲಿ ಮಾಜಿ ಶಾಸಕರು, ಸಂಸದರು, ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಮುಖಂಡರು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಅಂತೀಮ ದರ್ಶನ ಪಡೆದು ತೀವ್ರ ಸಂತಾಪ ವ್ಯಕ್ತಪಡಿಸಿದರು.ಶ್ರೀಗಳ ಸಂತಾಪ: ಶಾಸಕರ ಪುತ್ರ ಶ್ರೀಮಂತರಾಯ ನಿಧನರಾಗಿದ್ದರಿಂದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ, ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ, ಇರಕಲ್ಲಿನ ಬಸವ ಪ್ರಸಾದ ಸ್ವಾಮೀಜಿ, ಹುನಕುಂಟಿ ಶರಣಯ್ಯ ಸ್ವಾಮೀಜಿ, ಅಬಿನವ ಗಜದಂಡ ಅಂತೀಮ ದರ್ಶನ ಪಡೆದು ಶಾಸಕ ವಜ್ಜಲ್‌ಗೆ ಧೈರ್ಯ ತುಂಬಿದರು.
ಸದಾ ಜನರ ಸದ್ದು-ಗದ್ದಲದಲ್ಲಿ ಗಿಜಿಗೂಡುತ್ತಿದ್ದ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ರ ರವರ ನಾಗ ನಿವಾಸದಲ್ಲಿ ಶಾಸಕರ ಸುಪುತ್ರ ಶ್ರೀಮಂತರಾಯ ರವರ ಅಕಾಲಿಕ ನಿಧನದಿಂದ ಬಂಗಲೆಯಲ್ಲಿ ನಿರವ ಮೌನ ಆವರಿಸಿತ್ತು.