ಶೃಂಗೇರಿ: ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ ಭೇಟಿ

KannadaprabhaNewsNetwork | Published : Jul 29, 2024 12:46 AM

ಸಾರಾಂಶ

ಶೃಂಗೇರಿ , ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡ ಪ್ರಭ ವಾರ್ತೆ,ಶೃಂಗೇರಿ

ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಶೃಂಗೇರಿ ಕೊಪ್ಪ ಮಾರ್ಗದ ಆನೆಗುಂದ ಬಳಿ ರಸ್ತೆ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯಲ್ಲಿ ತುಂಗಾ ನದಿ ಪ್ರವಾಹದಿಂದ ಹಾನಿಗೊಳಗಾದ ಹೊಳೆಹದ್ದು ನೆಮ್ಮಾರು ತೂಗು ಸೇತುವೆ ಪರಿಶೀಲಿಸಿಸಿ, ರಾಷ್ಟ್ರೀ ಹೆದ್ದಾರಿ 169 ರ ನೆಮ್ಮಾರು ಎಸ್ಟೇಟ್ ರಸ್ತೆಯಲ್ಲಿನ ಭೂಕುಸಿತ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗುತ್ತಿದ್ದು ತಡೆಗೋಡೆಗಳ ಅವಷ್ಯಕತೆಯಿದೆ. ಮಳೆಯಿಂದಾಗಿ ಹೆಚ್ಚಾಗಿ ಭೂಕುಸಿಯುತ್ತಿದ್ದು, ಇದರ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಯವರಿಗೆ ಪತ್ರ ಬರೆಯಬೇಕು. ಹೆದ್ದಾರಿ ಇಲಾಖೆ ಅಧಿಕಾರಿಗಳು ಅನಾಹುತಗಳು ನಡೆಯದಂತೆ ಮುಂಜಾಗರೂಕತೆ ಕ್ರಮ ವಹಿಸಬೇಕಿದೆ. ನದಿ ತೀರ, ಗುಡ್ಡಗಳು ಇರುವುದರಿಂದ ಭೂಕುಸಿತ, ರಸ್ತೆ ಕುಸಿತದಿಂದ ಅಪಾಯಗಳುಂಟಾಗುವ ಸಾದ್ಯತೆಗಳಿವೆ. ಈ ನಿಟ್ಟಿನಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಬೇಕಿದೆ ಎಂದರು.

ಮಳೆ ಹೆಚ್ಚು ಬೀಳುತ್ತಿರುವುದರಿಂದ ಅಡಕೆ, ಕಾಫಿ ತೋಟಗಳಿಗೆ ಹಾನಿಯುಂಟಾಗುತ್ತಿದ್ದು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಮಳೆ ಗಾಳಿಯಿಂದ ವ್ಯಾಪಕ ಹಾನಿಯುಂಟಾಗಿದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಅಗತ್ಯ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ತಹಸೀಲ್ದಾರ್ ಗೌರಮ್ಮ , ಸ್ಥಳೀಯ ಕಾಂಗ್ರೆಸ್‌ ಮುಖಂಡರು,ಕಂದಾಯ, ಪೊಲೀಸ್‌ ಇಲಾಖೆ ಅಧಿಕಾರಿಗಳು ಇದ್ದರು.

28 ಶ್ರೀ ಚಿತ್ರ 2-

ಶೃಂಗೇರಿ ತಾಲೂಕಿನ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾಜ್‌ ಭೇಟಿ ನೀಡಿ ಪರಿಶೀಲಿಸಿದರು.

Share this article