ವಿವಿಧೆಡೆ ಗುಡ್ಡ, ಭೂಕುಸಿತ । ಪಶ್ಚಿಮ ಘಟ್ಟಗಳ ತಪ್ಪಲು ಗಂಗಾಮೂಲ ಎಸ್.ಕೆ ಬಾರ್ಡರ್, ಕೆರೆಕಟ್ಟೆಯಲ್ಲಿ ಭಾರೀ ಮಳೆ
ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಮಳೆ ಆರ್ಭಟ ಭಾನುವಾರವೂ ಮುಂದುವರಿದಿತ್ತು.
ಗುರುವಾರದಿಂದ ಅಬ್ಬರಿಸುತ್ತಿರುವ ಪುನರ್ವಸು ಮಳೆ ಶುಕ್ರವಾರ, ಶನಿವಾರವೂ ಹಗಲು ರಾತ್ರಿ ಎಡಬಿಡದೆ ನಿರಂತರವಾಗಿ ಮುಂದುವರಿದಿತ್ತು. ತುಂಗಾ ನದಿ ಉಗಮ ಸ್ಥಾನವಾದ ಪಶ್ಚಿಮ ಘಟ್ಟಗಳ ತಪ್ಪಲು ಗಂಗಾಮೂಲ ಎಸ್.ಕೆ ಬಾರ್ಡರ್, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಮೀನು, ತೋಟಗಳು ಮುಳುಗಡೆಯಾಗಿವೆ. ಮಳೆ ಮುಂದುವರಿದಲ್ಲಿ ಪ್ರವಾಹದ ಭೀತಿ ಉಂಟಾಗಲಿದೆ.ಎಡಬಿಡದೇ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ವಿವಿಧೆಡೆ ಗುಡ್ಡ ಕುಸಿತ, ಭೂಕುಸಿತ ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 169 ರ ಮಂಗಳೂರು ಶೃಂಗೇರಿ ಶಿವಮೊಗ್ಗ ಸಂಪರ್ಕ ಕಲ್ಪಿಸುವ ಶೃಂಗೇರಿ ಸಮೀಪದ ಆನೆಗುಂದ ಬಳಿ ಗುಡ್ಡದ ಮಣ್ಣು ಕುಸಿದು ರಸ್ತೆಯತ್ತ ಬರುತ್ತಿದೆ. ತ್ಯಾವಣ ಕೆಎಸ್ಆರ್‌ಟಿಸಿ ಡಿಪೋ ಬಳಿ ಗುಡ್ಡ ಕುಸಿದು ಮಣ್ಣು ರಸ್ತೆ ಮೇಲೆ ಬೀಳುತ್ತಿದೆ. ತ್ಯಾವಣ ಶಾಲೆ ಸಮೀಪ ರಸ್ತೆ ಪಕ್ಕದಲ್ಲಿ ಗುಡ್ಡ ಕುಸಿದು ಮಣ್ಣು ರಸ್ತೆಯತ್ತ ಬೀಳುತ್ತದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಬೃಹತ್ ಮರಗಳು ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿ ಬೀಳುವ ಆತಂಕವಿದ್ದು, ನೆಮ್ಮಾರು ಸಾಲ್ಮರ ಬಳಿಯೂ ರಾ.ಹೆ.ಪಕ್ಕದ ಗುಡ್ಡ ಕುಸಿದು ಜಾರುತ್ತಿದೆ. ಗಿಡ ಮರಗಳು ಸಹಿತ ಮಣ್ಣು ರಸ್ತೆಯ ಮೇಲೆ ಬೀಳುತ್ತಿದ್ದು ಮಳೆಗೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಕೃಷಿ ಚುಟುವಟಿಕೆಗಳು ಚುರುಕು:
ಬಾಕ್ಸ್.... ಪ್ರವಾಸಿಗರ ದಂಡುಒಂದೆಡೆ ಮಳೆ ಸುರಿಯುತ್ತಿದ್ದರೆ ಇನ್ನೊಂದೆಡೆ ಶೃಂಗೇರಿಯತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ವೀಕೆಂಡ್ ಭಾನುವಾರ ಶೃಂಗೇರಿ ಪಟ್ಠಣ ಶ್ರೀಮಠದಲ್ಲಿ ಪ್ರವಾಸಿಗರ ಗುಂಪು ಕಂಡುಬಂದಿತು. ಶ್ರೀ ಮಠದ ಆವರಣ, ಶಾರದಾಂಬಾ ದೇವಾಲಯ, ನರಸಿಂಹ ವನ ,ಶೃಂಗೇರಿ ಪಟ್ಟಣ, ಭಾರತೀ ಬೀದಿ ಎಲ್ಲೆಡೆ ಬೆಳಿಗ್ಗೆಯಿಂದಲೇ ಜನಜಂಗುಳಿ ಕಂಡುಬಂದಿತು. ವಸತಿ ಗೃಹಗಳು ತುಂಬಿವೆ. ವಾಹನ ನಿಲುಗಡೆ ಪ್ರದೇಶವಾಗಿರುವ ಗಾಂಧಿ ಮೈದಾನ, ಭಾರತೀ ಬೀದಿಯಲ್ಲಿ ವಾಹನ ದಟ್ಟಣೆಯಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ತುಂಬಿ ಹರಿಯುತ್ತಿರುವ ತುಂಗಾ ನದಿ.
ಶೃಂಗೇರಿ ತ್ಯಾವಣ ಬಳಿ ಗುಡ್ಡಕುಸಿತ, ಬೃಹತ್ ಮರ ಬೀಳುವ ಸ್ಥಿತಿಯಲ್ಲಿದೆ.