ಗ್ಯಾರಂಟಿ ಯೋಜನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆ: ಗೌತಂ

KannadaprabhaNewsNetwork |  
Published : Apr 04, 2024, 01:02 AM IST
ಸುದ್ದಿ ಚಿತ್ರ ೧ ಮಾಜಿ ಸಚಿವವಿ.ಮುನಿಯಪ್ಪ  ಕೆಪಿಸಿಸಿ ಉಪಾಧ್ಯಕ್ಷಸ್ಥಾನಕ್ಕೆ ಆಯ್ಕೆ ಯಾಗಿರುವ  ಸಂದರ್ಭದಲ್ಲಿ  ಅವರ ಸ್ವಗೃಹಕ್ಕೆಆಗಮಿಸಿ ಮುನಿಯಪ್ಪ ಅವರಿಗೆ  ಅಭಿನಂದನೆ ಸಲ್ಲಿಸಿದ ಗಣ್ಯರು  | Kannada Prabha

ಸಾರಾಂಶ

ಪಕ್ಷ ನೀಡಿರುವ ಅವಕಾಶದಿಂದ ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದೇನೆ, ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆ ಗೆಲುವು ಸಿಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ನನ್ನ ಮೂಲ ಬೆಂಗಳೂರು ಆದರೂ ನನಗೆ ಕೋಲಾರ ಜಿಲ್ಲೆ ಅತ್ಯಂತ ಚಿರಪರಿಚಿತವಾಗಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಹಂಬಲ ನನ್ನದಾಗಿದ್ದು, ಪಕ್ಷ ನೀಡಿರುವ ಅವಕಾಶದಿಂದ ಈ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದೇನೆ, ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆ ಗೆಲುವು ಸಿಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಹಂಡಿಗನಾಳ ಗ್ರಾಮದ ಮಾಜಿ ಸಚಿವ ವಿ.ಮುನಿಯಪ್ಪ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದರಿಂದ ಅವರ ಸ್ವಗೃಹಕ್ಕೆ ಆಗಮಿಸಿ ಮುನಿಯಪ್ಪನವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ನಾನು ರಾಜಕೀಯ ಹಿನ್ನೆಲೆಯಿಂದ ಬಂದವನು , ನಮ್ಮ ತಂದೆ ಯುವ ಕಾಂಗ್ರೆಸ್ ನಲ್ಲಿದ್ದಾಗ ಬೆಂಗಳೂರಿನಲ್ಲಿ ನಗರ ಪಾಲಿಕೆಯ ಸದಸ್ಯರಾಗಿ, ನಂತರ ಮೇಯರ್ ಆದರು. 1991 ರಲ್ಲಿ ಮೇಯರ್ ಆದ ಬಳಿಕ ಕಾಂಗ್ರೆಸ್ ಗೆ ಸ್ವಂತ ಜಾಗ ಇರಲಿಲ್ಲ, ಅಂದು ಜಾಗ ಕೊಡಿಸಿದ್ದು ನಮ್ಮ ತಂದೆಯವರು ಎಂದರು.

ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ನನ್ನನ್ನು ಗುರುತಿಸಿ ಕೋಲಾರ ಮೀಸಲು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿರುವ ಎಲ್ಲಾ ರಾಜ್ಯಮಟ್ಟದ ನಾಯಕರಿಗೆ ಅಭಾರಿಯಾಗಿದ್ದೇನೆ, ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿಂದ ನನಗೆ ಬಯಸದೇ ಬಂದಿರುವ ಭಾಗ್ಯ. ಈ ಭಾಗದ ಮುಖಂಡರು ಮಾಜಿ ಸಚಿವ ವಿ.ಮುನಿಯಪ್ಪನವರ ಮಾರ್ಗದರ್ಶನದಲ್ಲಿ ಈ ಚುನಾವಣೆಯನ್ನು ಎದುರಿಸಬೇಕಿದೆ. ಕೇವಲ 20 ದಿನಗಳು ಬಾಕಿ ಉಳಿದಿದ್ದು, ತಾವೆಲ್ಲರೂ ಒಗ್ಗಟ್ಟಿನಿಂದ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಕಾಂಗ್ರೆಸ್ ನ ಐದು ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಮತಗಳನ್ನಾಗಿ ಪರಿವರ್ತಿಸಿ ಆರ್ಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

ಇಂದು ನಾಮಪತ್ರ ಸಲ್ಲಿಕೆಗೆ ಬರುವಂತೆ ಮನವಿ: ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು , ನಾಯಕರು ಪಾಲ್ಗೊಳ್ಳುವಂತೆ ಕೋರಿದ ಗೌತಮ್, ಶಿಡ್ಲಘಟ್ಟ ಕ್ಷೇತ್ರದಲ್ಲಿ ವಿ.ಮುನಿಯಪ್ಪ ನಾಯಕತ್ವದಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ ಎಂದರು.ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಮುಖಂಡರಾದ ಪುಟ್ಟು ಆಂಜಿನಪ್ಪ , ಕೋಚಿಮುಲ್ ನಿರ್ದೇಶಕ ಆರ್ .ಶ್ರೀನಿವಾಸ್ , ಮಾಜಿ ಜಿಪಂ ಅಧ್ಯಕ್ಷ ಸುಬ್ರಮಣಿ , ಯಾಸ್ ಮಿನ್ ತಾಜ್ , ಪರಿಸರ ಪ್ರೇಮಿ ಸಂತೋಷ್ , ಸದ್ದಹಳ್ಳಿ ಗೋಪಿ , ರಾಜ್ ಕುಮಾರ್ , ಆನೂರು ದೇವರಾಜ್, ಸಾದಿಕ್ , ಗುಡಿ ಹಳ್ಳಿ ಚಂದ್ರು ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ