ಶ್ರೀರಾಮಸೇನೆ ರಾಜ್ಯ ಕಾರ್‍ಯಕಾರಿಣಿಯ ಹೇಮಂತ್ ಜಾನೆಕೆರೆ ಎಚ್ಚರಿಕೆಕನ್ನಡಪ್ರಭ ವಾರ್ತೆ ಹಾಸನ
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಶ್ರೀ ರಾಮ ಸೇನಾ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಫೆ. ೧೪ ರಂದು ಗೋ ಆಲಿಂಗನ ಮತ್ತು ಮಾತಾ, ಪಿತೃ ಪ್ರಜಾ ದಿನ ಹಾಗೂ ವುಲ್ಮಾಮ ದಾಳಿಯಲ್ಲಿ ಹುತಾತ್ಮ ವೀರ ಯೋಧರಿಗೆ ಸಂತಾಪ ನಮನಗಳನ್ನು ನಡೆಸಲಾಗುತ್ತಿದೆ ಎಂದರು.
ಸನಾತನ ಹಿಂದು ಧರ್ಮದ ಉಳಿವಿಗಾಗಿ ಹಲವಾರು ವರ್ಷ ನಿರಂತರವಾಗಿ ಗುಡಿ ಗೋಪುರಗಳ ಉಳಿವಿಗಾಗಿ ಮತಾಂತರ, ಲವಜಿಹಾದ್, ಗೋ ಹತ್ಯೆ ಇಂತಹ ಹಲವಾರು ಧರ್ಮ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುತ್ತ ಶ್ರೀ ರಾಮಸೇನೆ ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತ ಬಂದಿದೆ ಎಂದು ಹೇಳಿದರು.ಸನಾತನ ಹಿಂದೂ ಧರ್ಮವು ಯುವ ಪೀಳಿಗೆಯನ್ನು ರಕ್ಷಿಸುವ ಹಾಗೂ ಧರ್ಮ ಪಾಲನೆ ಮಾಡುವಂತೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಸುತ್ತಿದ್ದೇವೆ. ಈ ಹಿನ್ನೆಲೆ ಫೆ.೧೪ರ ಬುಧವಾರ ಪ್ರೇಮಿಗಳ ದಿನ ಯುವಕರು ಗುಂಪು ಗುಂಪಾಗಿ ಆಚರಣೆ ಮಾಡಿದಲ್ಲಿ ಶ್ರೀರಾಮಸೇನೆ ಅದನ್ನು ಖಂಡಿಸಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.