ಬೃಂದಾವನದ ಸಂಗೀತಾ ಕಾರಂಜಿಯ ವಿಶೇಷ ದೀಪಾಂಲಕಾರ ಅ.11 ರಿಂದ 22 ರವರೆಗೆ ಪ್ರತಿ ದಿನ ಸಂಜೆ 6.30 ರಿಂದ ರಾತ್ರಿ 9.30 ತನಕ ಇರಲಿದೆ ಮತ್ತು ಅ.16 ರಿಂದ ಕಳೆದ ವರ್ಷದಂತೆ ಈ ಬಾರಿ ಕೂಡ ದೋಣಿ ವಿಹಾರ ಕೇಂದ್ರದಲ್ಲಿ ಕಾವೇರಿ ಆರತಿ ಕಾರ್ಯಕ್ರಮ, ಅ.22ರ ತನಕ 6 ದಿನಗಳ ಕಾಲ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೃಷ್ಣರಾಜಸಾಗರದ ವಿಶ್ವ ವಿಖ್ಯಾತ ಬೃಂದಾವನದಲ್ಲಿ ದಸರಾ ಹಿನ್ನೆಲೆಯಲ್ಲಿ 11 ದಿನಗಳ ವಿಶೇಷ ದೀಪಾಲಂಕಾರಕ್ಕೆ ಶಾಸಕ ಹಾಗೂ ಸೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಈ ಬಾರಿ ಕೆಆರ್‌ಎಸ್ ಬೃಂದಾವನದಲ್ಲಿ ಸುಮಾರು 7 ಕೋಟಿ ರು. ವೆಚ್ಚದಲ್ಲಿ ವಿಶೇಷ ದೀಪಾಲಂಕಾರದ ಜೊತೆ ಕಾವೇರಿ ಆರತಿ ಕಾರ್ಯಕ್ರಮ, ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮ ಜರುಗಲಿವೆ. ಸುಮಾರು 5 ಕಿ.ಮೀ. ದೂರ ಕೆಆರ್‌ಎಸ್ ಬೃಂದಾವನಕ್ಕೆ ಬರುವ ರಸ್ತೆಯುದ್ದಕ್ಕೂ ಅಕರ್ಷಣೆ ದೀಪಾಂಲಕಾರ ಮಾಡಲಾಗಿದೆ. ಮೈಸೂರು ದಸರಾ ನೋಡಲು ಬರುವ ಪ್ರವಾಸಿಗರು, ಸ್ಥಳೀಯ ಗ್ರಾಮಸ್ಥರು ಸಾರ್ವಜನಿಕರು ತಪ್ಪದೆ ಕೆಆರ್‌ಎಸ್ ಬೃಂದಾವನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುವಂತೆ ಅವರು ಮನವಿ ಮಾಡಿದರು.
ಕಾವೇರಿ ಆರತಿ ಕಾರ್ಯಕ್ರಮ:
ಬೃಂದಾವನದ ಸಂಗೀತಾ ಕಾರಂಜಿಯ ವಿಶೇಷ ದೀಪಾಂಲಕಾರ ಅ.11 ರಿಂದ 22 ರವರೆಗೆ ಪ್ರತಿ ದಿನ ಸಂಜೆ 6.30 ರಿಂದ ರಾತ್ರಿ 9.30 ತನಕ ಇರಲಿದೆ ಮತ್ತು ಅ.16 ರಿಂದ ಕಳೆದ ವರ್ಷದಂತೆ ಈ ಬಾರಿ ಕೂಡ ದೋಣಿ ವಿಹಾರ ಕೇಂದ್ರದಲ್ಲಿ ಕಾವೇರಿ ಆರತಿ ಕಾರ್ಯಕ್ರಮ, ಅ.22ರ ತನಕ 6 ದಿನಗಳ ಕಾಲ ನಡೆಯಲಿದೆ. ಇದರ ಪಕ್ಕದಲ್ಲಿ ವಿಶಾಲ ವೇದಿಕೆ ನಿರ್ಮಿಸಿದ್ದು ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜಿಲ್ಲೆ ವಿವಿಧ ಕಲಾವಿದರಿಂದ ಜನಪದ ಸೇರಿ ಸ್ಥಳೀಯ ಕಲಾತಂಡಗಳ ಪ್ರದರ್ಶನ ಕೂಡ ನಡೆಯಲಿದೆ ಎಂದರು.
ಬೃಂದಾವನದಲ್ಲಿನ ಪ್ರಸ್ತುತ ಇರುವ ಸಂಗೀತ ಕಾರಂಜಿ ಹಾಗೂ ದೀಪಾಲಂಕರದ ಜೊತೆ ಮೈಸೂರು ದಸಾರ ಹಿನ್ನೆಲೆಯಲ್ಲಿ ಬೃಂದಾವನ ಅರ್ಕಷಣೆ ಹೆಚ್ಚಿಸಲು ಶಾರ್ಪಿಸ್, ಪಾರಕನ್ಸ್, ಎಲ್.ಇ.ಡಿ ಡ್ರಾಪ್ ಡೌನ್, ಘೋಕಸ್, ಫೆಡ್‌ಲೈಟ್ಸ್, ಸೇರಿದಂತೆ ವಿವಿಧ ಬಣ್ಣಬಣ್ದ ಆಕರ್ಷಣೆಯ ದೀಪಾಂಲಕಾರ ಮಾಡಲಾಗಿದೆ.
ಅ.11ರಿಂದ 22ರ ತನಕ ಪ್ರತಿ ದಿನ6.30 ರಿಂದ ರಾತ್ರಿ 9.30 ರ ತನಕ ಕರ್ನಾಟಕ ಪ್ರಸಿದ್ದ ಗಾಯಕ/ಗಾಯಕಿಯರಿಂದ ವಿವಿಧ ರೀತಿ ಸಂಗೀತದ ಸಾಂಸ್ಕೃತಿಕ ಕಾರ್ಯಕ್ರಮಗಳು ದೋಣಿ ವಿಹಾರ ಕೇಂದ್ರ ಸಮೀಪದ ವೇದಿಕೆಯಲ್ಲಿ ನಡೆಯಲಿದೆ ಎಂದರು.
ಈ ವೇಳೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ, ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್ ವೆಂಕಟರವಣಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ವೇತಾ, ಸಹಾಯಕ ಎಂಜಿನಿಯರ್ ಸೇರಿದಂತೆ ಗುತ್ತಿಗೆದಾರರು ಇತರರು ಇದ್ದರು.
ಶ್ರೀರಂಗಪಟ್ಟಣ ದಸರಾಗೆ ಧನಂಜಯ ಆನೆ ಆಯ್ಕೆ
ಕನ್ನಡಪ್ರಭ ವಾರ್ತೆ ಮೈಸೂರುಈ ಬಾರಿಯ ಶ್ರೀರಂಗಪಟ್ಟಣ ದಸರಾದಲ್ಲಿ ಧನಂಜಯ ಆನೆಯು ಅಂಬಾರಿ ಹೊರಲು ಆಯ್ಕೆಯಾಗಿದೆ. ಇದರೊಂದಿಗೆ ಕುಮ್ಕಿಗಳಾಗಿ ಲಕ್ಷ್ಮೀ ಮತ್ತು ರೂಪಾ ಆನೆಗಳು ಭಾಗಿಯಾಗುತ್ತಿವೆ ಎಂದು ಮೈಸೂರು ವಲಯದ ಸಿಎಫ್ ರವಿಶಂಕರ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬಾರಿ ಹೊರುವ ಆನೆಯನ್ನು ಜಂಬೂ ಸವಾರಿ ಮೆರವಣಿಗೆ ಮೂರು ದಿನ ಬಾಕಿ ಇರುವಾಗ ಆಯ್ಕೆ ಮಾಡುತ್ತೇವೆ. ಪ್ರಶಾಂತ, ಸುಗ್ರೀವ, ಧನಂಜಯ ಆನೆಗಳಲ್ಲಿ ಒಂದು ಫೈನಲ್ ಆಗಬಹುದು. ಏಕಲವ್ಯ ಕೂಡ ಸಮರ್ಥನಿದ್ದಾನೆ. ಈ ನಾಲ್ಕು ಆನೆಯ ಪೈಕಿ ಏಕಲವ್ಯ ಕಿರಿಯ ಆನೆಯಾಗಿದ್ದಾನೆ ಎಂದು ಹೇಳಿದರು. ಆನೆಗಳ ನಡಿಗೆ, ತಾಲೀಮಿನ ಸಮಯ, ಮಾವುತನ ಕಮಾಂಡ್ ಆನೆ ಹೇಗೆ ಸ್ವೀಕರಿಸುತ್ತದೆ ಅನ್ನೋದನ್ನು ಗಮನಿಸುತ್ತೇವೆ. ಯಶಸ್ವಿ ಜಂಬೂ ಸವಾರಿಗೆ ಅರಣ್ಯ ಇಲಾಖೆ ಹಾಗೂ ಆನೆಗಳು ಸನ್ನದ್ದವಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.