ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅ.18ರಂದು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಕಾಟಾ ಕುಸ್ತಿ ಪಂದ್ಯಾವಳಿಗೆ ಜೋಡಿ ಕಟ್ಟಿ ಮಾತನಾಡಿದ ಅವರು, ಐತಿಹಾಸಿಕ ಶ್ರೀರಂಗಪಟ್ಟಣ ದಸರಾಕ್ಕೆ ಒಂದು ಮೆರಗು ಬರಲು ಪೈಲ್ವಾನರುಗಳೇ ಕಾರಣ. ಈ ಹಿಂದೆ ಮೈಸೂರು ಅರಸರ ಕಾಲದಲ್ಲಿ ಜಟ್ಟಿ ಕಾಳಗ ನಡೆದಂತೆ ಇದೀಗ ಕುಸ್ತಿಗಳು ನಡೆಯುತ್ತಿವೆ ಎಂದರು.
ಮೈಸೂರು, ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಮನೆಗೆ ಒಬ್ಬಬ್ಬರಂತೆ ಪೈಲ್ವಾನರು ಇದ್ದರು. ಪ್ರತಿ ದಿನ ಗರಡಿ ಮನೆಯಲ್ಲಿ ಅವರಿಗೆ ತಾಕತ್ ಬರುವಂತೆ ವ್ಯಾಯಾಮ ಮಾಡಿಸಿ ಅವರ ಬೆಳವಣಿಗೆಗೆ ಸಹಕಾರ ಕೊಡುತ್ತಿದ್ದರು. ಆದರೆ, ಇದೀಗ ಅವೆಲ್ಲವೂ ಕಡಿಮೆಯಾಗಿದೆ. ಈಗ ಕಾಂಗ್ರೆಸ್ ಸರ್ಕಾರ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಹಲವು ಯೋಜನೆಗಳ ರೂಪಿಸಿಕೊಂಡಿದೆ ಎಂದರು.ಶ್ರೀರಂಗ ಕುಸ್ತಿ ಅಭಿಮಾನಿಗಳ ಸಂಘದ ಸಮಿತಿ ಆಯೋಜಕ ಬಾಲಸುಬ್ರಮಣ್ಯ ಮಾತನಾಡಿ, ಪುರುಷ ವಿಭಾಗ ಮತ್ತು ಮಹಿಳಾ ವಿಬಾಗದಲ್ಲಿ ಈ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಹೆಸರಾಂತ ಪೈಲ್ವಾನರು ಈ ಬಾರಿ ಅಖಾಡಕ್ಕೆ ಆಗಮಿಸಿ ನೋಂದಾವಣೆ ಮಾಡಿಕೊಳ್ಳಲಿದ್ದಾರೆ ಎಂದರು.
ಯುವಜನ ಕ್ರೀಡೆ ಹಾಗೂ ಸಬಲೀಕರಣ ಇಲಾಖೆ ನಿರ್ದೇಶಕಿ ಮನುಜಾಶ್ರೀ ಹಾಗೂ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಕುಸ್ತಿ ಪಟುಗಳ ಜೋಡಿಗೆ ಬೆನ್ನು ತಟ್ಟಿ ಶುಭ ಹಾರೈಸಿದರು. ಈ ವೇಳೆ ಹೊಸಹಳ್ಳಿ ಶಿವು, ಬಾಲಸುಬ್ರಮಣ್ಯ, ಪ್ರಕಾಶ್, ನಾರಾಯಣ, ಮಲ್ಲು ಸ್ವಾಮಿ, ರವಿಪ್ರಸಾದ್, ಕುಬೇರ, ನಾರಾಯಣ್, ಟಿ. ಕೃಷ್ಣ, ಕೆ.ಬಿ. ಬಸವರಾಜು ಸೇರಿದಂತೆ ಇತರರಿದ್ದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಂದ ಗಣೇಶಮೂರ್ತಿಗೆ ಪೂಜೆ ಸಲ್ಲಿಕೆ
ಗಣಪತಿ ಹಬ್ಬದೊಂದು ಜಕ್ಕನಹಳ್ಳಿ ಸರ್ಕಲ್‌ನಲ್ಲಿರುವ ಗಣಪತಿ ದೇವಸ್ಥಾನದ ಒಳಗೆ ಶ್ರೀವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ್ದು, ಪೂಜೆ ಸಲ್ಲಿಸಿದ ಮಾಜಿ ಸಚಿವರನ್ನು ಬಳಗದಿಂದ ಅಭಿನಂದಿಸಲಾಯಿತು.ಈ ವೇಳೆ ಸಿ.ಎಸ್.ಪುಟ್ಟರಾಜು ಮಾತನಾಡಿ, ಜಕ್ಕನಹಳ್ಳಿ ಸರ್ಕಲ್‌ನಲ್ಲಿ ಶ್ರೀವಿನಾಯಕ ಗೆಳೆಯರ ಬಳಗದ ಯುವಕರು ಗಣಪತಿ ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಎಲ್ಲರು ಒಗ್ಗಟ್ಟಿನಿಂದ ಗಣಪತಿ ಮಹೋತ್ಸವ ಆಚರಣೆ ಮಾಡಬೇಕು ಎಂದರು.