ಎಲ್.ವಿ.ನವೀನ್ ಕುಮಾರ್
ಪಾರಂಪರಿಕ ಶ್ರೀರಂಗಪಟ್ಟಣ ದಸರಾದಲ್ಲಿ ಹಲವು ವಿಶೇಷತೆಗಳನ್ನು ಈ ಬಾರಿ ಕೈ ಬಿಟ್ಟಿದ್ದು, ಜನರ ನಿರೀಕ್ಷಿತ ಮಟ್ಟದಲ್ಲಿ ಕಾಣದ ಹಿನ್ನೆಲೆಯಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ದಸರಾ ತನ್ನ ಅರ್ಥಪೂರ್ಣತೆ ಕಳೆದುಕೊಂಡಂತೆ ಕಾಣುತ್ತಿದೆ.
ಸುಮಾರು 240 ವರ್ಷಗಳ ಹಳೆಯದಾದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಗೆ ಯಾವುದೇ ವಿದ್ಯುತ್ ದೀಪ ಅಳವಡಿಸದೆ ಈ ಬಾರಿಯ ಶ್ರೀರಂಗಪಟ್ಟಣ ದಸರಾ ಆಚರಣೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯ ಮಾಡಿದ ಪರಿಣಾಮ ವೆಲ್ಲೆಸ್ಲಿ ಸೇತುವೆ, ಬಂತೇರಿ ಕಗ್ಗತ್ತಲಿನಿಂದ ಕೂಡಿದೆ.ಕಳೆದ ಐದಾರು ವರ್ಷಗಳಿಂದ ಶ್ರೀರಂಗಪಟ್ಟಣ ದಸರಾ ಆಚರಣೆ ವೇಳೆ ವೆಲ್ಲೆಸ್ಲಿ ಸೇತುವೆ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ತೆರಳುವ ಪ್ರಯಾಣಿಕರನ್ನು ಆಕರ್ಷಿಸುವಂತೆ ಮಾಡಿ ಹೊಸ ಮೆರಗು ನೀಡಿತ್ತು. ಆದರೆ, ಈ ಬಾರಿ ದಸರಾ ಆಚರಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
ವಿಜಯನಗರದ ಕಾಲದ ಸುಮಾರು 100 ಅಡಿ ಎತ್ತರದ ಐತಿಹಾಸಿಕ ಬತ್ತೇರಿ ಸ್ಥಳವನ್ನು ಕೋವಿಡ್ ಸಮಯದ ದಸರಾ ವೇಳೆ ವಿದ್ಯುತ್ ಅಲಂಕಾರದಿಂದ ಕಂಗೊಳಿಸುವಂತೆ ಮಾಡಿ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಈ ಸ್ಥಳದಲ್ಲೇ ಆಯೋಜನೆ ಮಾಡುವ ಮೂಲಕ ಜನರನ್ನು ಆಕರ್ಷಿಸುವ ಜೊತೆಗೆ ಇತಿಹಾಸ ಸೃಷ್ಟಿಸಿತ್ತು.
ಕೋಟೆಗಳ ಬಗ್ಗೆ ನಿರ್ಲಕ್ಷ್ಯ:
ಬಿಕೋ ಎನ್ನುವ ಮಂಟಪ:
ಮರೆಯಾದ ದೇಶಿ ಕ್ರೀಡೆಗಳು:
ಪ್ರಚಾರದ ಕೊರತೆ:
2024ರ ಶ್ರೀರಂಗಪಟ್ಟಣ ದಸರಾ ಆಚರಣೆಗೆ ಸರ್ಕಾರ ನೀಡಿರುವ ಅನುದಾನದ ಬಗ್ಗೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅವರನ್ನು ಕೇಳಿದರೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಜಿಲ್ಲಾಡಳಿತದಿಂದ ಕೇಳಿ ಹೇಳುತ್ತೇನೆ ಎನ್ನುತ್ತಾರೆ. ಹಾಗಾದರೆ ದಸರಾ ಆಚರಣೆ ಪಾರದರ್ಶಕವಾಗಿ ನಡೆಯುತ್ತಿಲ್ಲವೆ ಎಂಬ ಪ್ರಶ್ನೆ ಕಾಡುತ್ತಿದೆ.
ಐತಿಹಾಸಿಕ ದಸರಾವನ್ನು ಅರ್ಥಪೂರ್ಣ, ವ್ಯವಸ್ಥಿತವಾಗಿ ಆಚರಣೆ ಮಾಡಲು ಕೋಟ್ಯಂತರ ರು. ಅನುದಾನ ಸರ್ಕಾರದಿಂದ ಬಂದಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಕ್ಷೇತ್ರದ ಶಾಸಕರು ಸಾರ್ವಜನಿಕರ ತೆರಿಗೆ ಹಣದ ರೂಪದಲ್ಲಿ ಸರ್ಕಾರ ಕೊಟ್ಟಿರುವ ಅನುದಾನ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ದಸರಾ ಆಚರಣೆಗಾಗಿ ಯಾವುದೇ ಸಮಿತಿ ರಚಿಸದ ಕಾರಣ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಶ್ರೀರಂಗಪಟ್ಟಣ ದಸರಾ ಈ ಬಾರಿ ಒಂದು ರೀತಿಯಲ್ಲಿ ಅರ್ಥಪೂರ್ಣತೆ ಕಳೆದುಕೊಂಡಿದೆ. ಇದು ಜನತೆಗೆ ಹಾಗೂ ರೈತ ಸಮುದಾಯಕ್ಕೆ ಬೇಸರ ತರಿಸಿದೆ. ಸಾರ್ವಜನಿಕರ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಮುಂದಿನ ದಿನದಲ್ಲಿ ದಸರಾಗೆ ಬಿಡುಗಡೆಯಾಗಿರುವ ಹಣ, ಖರ್ಚು-ವೆಚ್ಚಗಳನ್ನು ಸಾರ್ವಜನಿಕರ ಮುಂದಿಡಬೇಕು.
- ಕಿರಂಗೂರು ಪಾಪು, ರೈತ ಮುಖಂಡರು