ಈ ಬಾರಿಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಉಡುಪಿ ಜಿಲ್ಲೆ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ಜಿಲ್ಲೆ ಒಟ್ಟು ಶೇ 89.96 ಫಲಿತಾಂಶ ಸಾಧಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಈ ಬಾರಿಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಉಡುಪಿ ಜಿಲ್ಲೆ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ಜಿಲ್ಲೆ ಒಟ್ಟು ಶೇ 89.96 ಫಲಿತಾಂಶ ಸಾಧಿಸಿದೆ.ರಾಜ್ಯದಲ್ಲಿ ಶೇ.100ರಷ್ಟು ಪೂರ್ಣ ಅಂಕಗಳನ್ನು ಗಳಿಸಿದ 24 ಮಂದಿ ಟಾಪರ್‌ಗಳ ಪೈಕಿ ಕಾರ್ಕಳ ತಾಲೂಕಿನ ಜ್ಞಾನಸುಧಾ ಪಿಯು ಕಾಲೇಜಿನ ಸ್ವಸ್ತಿ ನಾಯಕ್ ಕೂಡ ಒಬ್ಬರಾಗಿ ಜಿಲ್ಲೆಗೆ ಹೆಮ್ಮೆಯನ್ನುಂಟು ಮಾಡಿದ್ದಾರೆ.ಉಡುಪಿ ಜಿಲ್ಲೆ ಕಳೆದ ಬಾರಿ ಶೇ.94 ಫಲಿತಾಂಶ ಸಾಧಿಸಿತ್ತು. 2023ರಲ್ಲಿ ಉಡುಪಿ ಜಿಲ್ಲೆ ಅಚ್ಚರಿ ಎಂಬಂತೆ 14ನೇ ಮತ್ತು 2022ರಲ್ಲಿ 13ನೇ ಸ್ಥಾನಕ್ಕೆ ಕುಸಿದಿತ್ತು. 2021ರಲ್ಲಿ ಕೊರೋನಾ ಸಾಂಕ್ರಮಿಕದ ಕಾರಣಕ್ಕೆ ಶೇ.100 ಫಲಿತಾಂಶ ನೀಡಲಾಗಿತ್ತು. 2020ರಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಅದಕ್ಕೂ ಹಿಂದಿನ 5 ವರ್ಷಗಳಲ್ಲಿ ಉಡುಪಿ ಜಿಲ್ಲೆ ತನ್ನ ಸಹೋದರಿ ಜಿಲ್ಲೆ ದಕ್ಷಿಣ ಕನ್ನಡದೊಂದಿಗೆ ಪ್ರಥಮ ಅಥವಾ ದ್ವಿತೀಯ ಸ್ಥಾನಗಳನ್ನು ಹಂಚಿಕೊಳ್ಳುತ್ತಿತ್ತು.ಇದೀಗ ಮತ್ತೆ ಉಡುಪಿ ಜಿಲ್ಲೆ ತನ್ನ ಹಿಂದಿನ ವೈಭವವನ್ನು ಮರಳಿ ಗಳಿಸಿದ್ದಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಶಾಸಕ ಯಶ್ಪಾಲ್ ಸುವರ್ಣ ಮೊದಲಾದವರು ಸಂತಸ ವ್ಯಕ್ತಪಡಿಸಿದ್ದು, ಈ ಫಲಿತಾಂಶಕ್ಕೆ ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ಪೋಷಕರನ್ನು ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.