ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ ರಾಜ್ಯದಲ್ಲಿ 8ನೇ ಸ್ಥಾನ

KannadaprabhaNewsNetwork |  
Published : May 03, 2025, 12:19 AM IST
ಎಚ್‌. ನವ್ಯಶ್ರೀ  (624)ಸೆಂಟ್‌ ಮೇರಿಸ್‌, ಚಿಕ್ಕಮಗಳೂರು | Kannada Prabha

ಸಾರಾಂಶ

ಚಿಕ್ಕಮಗಳೂರು, ಕಾಫಿಯ ನಾಡು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಈ ಸಾಲಿನಲ್ಲಿ 10ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಏರಿದೆ. ಚಿಕ್ಕಮಗಳೂರಿನ ಸೆಂಟ್‌ ಮೇರಿಸ್‌ ಶಾಲೆ ವಿದ್ಯಾರ್ಥಿನಿ ಎಚ್‌. ನವ್ಯಶ್ರೀ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಟಾಫ್‌ ಒನ್‌ ಸ್ಥಾನದಲ್ಲಿದ್ದರೆ, ತರೀಕೆರೆ ಅರುಣೋದಯ ಪ್ರೌಢಶಾಲೆ ವಿದ್ಯಾರ್ಥಿನಿ ಸುದೀಕ್ಷಾ ಹಾಗೂ ಕಡೂರಿನ ವೇದಾವತಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ಶ್ವೇತಾ ಅವರು 623 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷ 10ನೇ ಸ್ಥಾನ । ಸೆಂಟ್‌ ಮೇರಿಸ್‌ ಶಾಲೆಯ ನವ್ಯಶ್ರೀ 625ಕ್ಕೆ 624, ಜಿಲ್ಲೆಯಲ್ಲಿ ಶೃಂಗೇರಿ ಫಸ್ಟ್‌, ಕಡೂರು ಲಾಸ್ಟ್‌,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಫಿಯ ನಾಡು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಈ ಸಾಲಿನಲ್ಲಿ 10ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಏರಿದೆ. ಚಿಕ್ಕಮಗಳೂರಿನ ಸೆಂಟ್‌ ಮೇರಿಸ್‌ ಶಾಲೆ ವಿದ್ಯಾರ್ಥಿನಿ ಎಚ್‌. ನವ್ಯಶ್ರೀ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಟಾಫ್‌ ಒನ್‌ ಸ್ಥಾನದಲ್ಲಿದ್ದರೆ, ತರೀಕೆರೆ ಅರುಣೋದಯ ಪ್ರೌಢಶಾಲೆ ವಿದ್ಯಾರ್ಥಿನಿ ಸುದೀಕ್ಷಾ ಹಾಗೂ ಕಡೂರಿನ ವೇದಾವತಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿ ಶ್ವೇತಾ ಅವರು 623 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 12,419 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 9,565 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2,854 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಶೇ. 77.94 ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯ 8 ಬ್ಲಾಕ್‌ಗಳ ಪೈಕಿ ಶೃಂಗೇರಿ ಬ್ಲಾಕ್‌ ಪ್ರಥಮ ಸ್ಥಾನದಲ್ಲಿದ್ದರೆ, ಕೊಪ್ಪ ಎರಡನೇ ಸ್ಥಾನದಲ್ಲಿದೆ. ಕಡೂರು ಬ್ಲಾಕ್‌ಗೆ ಕೊನೆಯ ಸ್ಥಾನ ಸಿಕ್ಕಿದೆ. 625 ಅಂಕಗಳಲ್ಲಿ 620 ರವರೆಗೆ ಅಂಕಗಳನ್ನು 21 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

--- ಬಾಕ್ಸ್‌-----ಬ್ಲಾಕ್‌ ಪರೀಕ್ಷೆಗೆ ಕುಳಿತವರು ತೇರ್ಗಡೆಯಾದವರುಶೇಕಡಾ ಜಿಲ್ಲೆಯಲ್ಲಿಸ್ಥಾನ

----------------------------------------------------------------------------------------------

ಬೀರೂರು 117087874.9507

--------------------------------------------------------------------------

ಚಿಕ್ಕಮಗಳೂರು3370260177.3804

-------------------------------------------------------------

ಕಡೂರು2281153268.9408

-------------------------------------------------------------

ಕೊಪ್ಪ104194089.9102

----------------------------------------------------------------

ಮೂಡಿಗೆರೆ1283103780.74 03

--------------------------------------------------------------

ನ.ರಾ.ಪುರ 903690 76.4105

---------------------------------------------------------------

ಶೃಂಗೇರಿ563518 92.0001

------------------------------------------------------------------

ತರೀಕೆರೆ1808 136075.0506

--------------------------------------------------------------------------

ಒಟ್ಟು12419 956577.94

--------------------

ಎಚ್‌. ನವ್ಯಶ್ರೀ (624)

ಸೆಂಟ್‌ ಮೇರಿಸ್‌, ಚಿಕ್ಕಮಗಳೂರುಪೋಟೋ ಫೈಲ್‌ ನೇಮ್‌ 2 ಕೆಸಿಕೆಎಂ 2

--ಸುದೀಕ್ಷಾ (623)

ಅರುಣೋದಯ ಪ್ರೌಢಶಾಲೆ, ತರೀಕೆರೆಪೋಟೋ ಫೈಲ್‌ ನೇಮ್‌ 2 ಕೆಸಿಕೆಎಂ 3

---ಶ್ವೇತಾ (623)

ವೇದಾವತಿ ಬಾಲಕಿಯರ ಪ್ರೌಢಶಾಲೆ, ಕಡೂರುಪೋಟೋ ಫೈಲ್ ನೇಮ್‌ 2 ಕೆಸಿಕೆಎಂ 4

---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''