ಸೆಂಟ್ ಆನ್ಸ್ ಪದವಿ ಕಾಲೇಜಿಗೆ ನ್ಯಾಕ್ ವತಿಯಿಂದ ಬಿ + ಗ್ರೇಡ್ ನ ಮಾನ್ಯತೆ

KannadaprabhaNewsNetwork |  
Published : Jun 01, 2025, 02:14 AM IST
ಚಿತ್ರ :  31ಎಂಡಿಕೆ4 : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜು.  | Kannada Prabha

ಸಾರಾಂಶ

ವಿರಾಜಪೇಟೆ ಪಟ್ಟಣದ ಸೆಂಟ್‌ ಆನ್ಸ್‌ ಪದವಿಗೆ ಯುಜಿಸಿ ನ್ಯಾಕ್‌ ವತಿಯಿಂದ ಬಿ ಗ್ರೇಡ್‌ನ ಮಾನ್ಯತೆ ಲಭಿಸಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಡಗು ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ವಿರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿಗೆ ಯುಜಿಸಿ ನ್ಯಾಕ್ ವತಿಯಿಂದ ಬಿ + ಗ್ರೇಡ್ ನ ಮಾನ್ಯತೆ ಲಭಿಸಿದೆ.

ಮೇ ತಿಂಗಳ 15, 16 ರಂದು ನ್ಯಾಕ್ ಸಮಿತಿಯು ಕಾಲೇಜನ್ನು ಸಂಪೂರ್ಣವಾಗಿ ಮೌಲ್ಯಂಕನ ಕ್ಕೆ ಒಳಪಡಿಸಿ ಈ ಮಾನ್ಯತೆಯನ್ನು ನೀಡಿರುತ್ತದೆ. ಈ ಕುರಿತು ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ರವರು 2007 ರಲ್ಲಿ ಆರಂಭಗೊಂಡ ನಮ್ಮ ಪದವಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುತ್ತೇವೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಎನ್ ಎಸ್ ಎಸ್, ಉದ್ಯೋಗ ಹಾಗೂ ವೃತ್ತಿ ಕೌಶಲ್ಯ ಘಟಕ, ಯುವ ರೆಡ್ ಕ್ರಾಸ್ ಇನ್ನೂ ಮುಂತಾದ ಘಟಕಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುತ್ತೇವೆ. ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಯ ಗುಣಮಟ್ಟದ ಶಿಕ್ಷಣಕ್ಕೆ ಅನುಗುಣವಾಗಿ ನುರಿತ ಉಪನ್ಯಾಸಕರು, ಸುಸಜ್ಜಿತ ಸೌಲಭ್ಯ ಗಳು, ಗ್ರಂಥಾಲಯ ವ್ಯವಸ್ಥೆಯು ಲಭ್ಯವಿದೆ. ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆಯನ್ನು ಹಲವು ಕ್ಷೇತ್ರಗಳಲ್ಲಿ ಮಾಡಿರುತ್ತಾರೆ. ಸ್ನಾತಕೋತ್ತರ ಎಂ. ಕಾಂ ವಿಭಾಗವು ಆರಂಭಿಸಲಾಗಿದ್ದು ಸಂಸ್ಥೆಯ ಗುಣಮಟ್ಟವನ್ನು ಹೆಚ್ಚಿಸಿದೆ ಎಂದರು. ನಗರಗಳಲ್ಲಿ ಸಿಗುವಂತಹ ಶಿಕ್ಷಣ ಸೌಲಭ್ಯ ಗಳನ್ನು ನಮ್ಮ ಸಂಸ್ಥೆಯಲ್ಲಿ ಸ್ಥಳೀಯವಾಗಿ ನೀಡುತ್ತಿರುವ ಹೆಮ್ಮೆ ತಮಗಿದೆ ಎಂದ ಅವರು ಇದೀಗ ಪ್ರತಿಷ್ಠಿತ ನ್ಯಾಕ್ ಸಮಿತಿಯಿಂದ ಬಿ + ಗ್ರೇಡ್ ಲಭಿಸಿದ್ದು ಸಂಸ್ಥೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ದಿವಸಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ವಿದ್ಯಾಸಂಸ್ಥೆಯನ್ನು ಮಾದರಿ ಸಂಸ್ಥೆಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಪ್ರಾಂಶುಪಾಲರು, ಸಂಚಾಲಕರು, ಸರ್ವ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''