ನಮ್ಮ ಹಿರಿಯ ತಲೆಮಾರಿನಿಂದ ಬಂದ ಪೌರಾಣಿಕ ರಂಗ ಕಲೆ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವೇ ಆಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮುಂತಾದವುಗಳಿಂದ ನಮ್ಮ ರಂಗ ಕಲೆ ಕ್ಷಿಣಿಸುತ್ತಿದೆ ಎಂದು ಹಿರಿಯ ಕಲಾವಿದ ಶಿವರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ನಮ್ಮ ಹಿರಿಯ ತಲೆಮಾರಿನಿಂದ ಬಂದ ಪೌರಾಣಿಕ ರಂಗ ಕಲೆ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವೇ ಆಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮುಂತಾದವುಗಳಿಂದ ನಮ್ಮ ರಂಗ ಕಲೆ ಕ್ಷಿಣಿಸುತ್ತಿದೆ ಎಂದು ಹಿರಿಯ ಕಲಾವಿದ ಶಿವರಾಮಯ್ಯ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಹೊನ್ನವಳ್ಳಿ ಹೋಬಳಿ ವಾಸುದೇವರಹಳ್ಳಿಯಲ್ಲಿ ಕಲ್ಪ ಕುಸುಮ ಕಲಾ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದ ವತಿಯಿಂದ ಶ್ರೀ ಹುಚ್ಚಮ್ಮ ದೇವಿ ಮತ್ತು ಬಸವೇಶ್ವರ ಸ್ವಾಮಿಯವರ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪೌರಾಣಿಕ ರಂಗಗೀತೆ ಮತ್ತು ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಹಳ್ಳಿಗಳ್ಳಿ ಊರಿನ ಹಬ್ಬ, ಜಾತ್ರಾ ಉತ್ಸವಗಳಲ್ಲಿ ಹಳ್ಳಿಯ ಯುವಕರೆಲ್ಲ ಸೇರಿ ಸಮಾಜಕ್ಕೆ ಸಂದೇಶ ಕೊಡುವಂತ ಅನೇಕ ರಂಗ ನಾಟಕಗಳನ್ನು ಅಭಿನಯಿಸಿ ವರ್ಷದಲ್ಲಿ ಎರಡು ಮೂರು ಬಾರಿ ಪ್ರದರ್ಶಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮುಂತಾದವುಗಳಿಂದ ನಮ್ಮ ರಂಗ ಕಲೆ ಕ್ಷಿಣಿಸುತ್ತಿದೆ. ನಮ್ಮ ನೆಲದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಗ್ರಾಮದ ಎಲ್ಲ ಜನರು ಒಗ್ಗಟ್ಟಿನಿಂದಿರಲು ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು. ಪ್ರಾಸ್ತವಿಕ ನುಡಿಗಳನ್ನಾಡಿದ ಸಾಹಿತಿ ಹಾಗೂ ಕಲಾವಿದ ಸಾರ್ಥವಳ್ಳಿ ಶಿವಕುಮಾರ್, ಕಲಾ ಸಂಘದ ಹುಟ್ಟು ಮತ್ತು ಸಂಘದಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಎಲ್ಲ ಕಲಾವಿದರ ಸಹಕಾರದಿಂದ ಸಂಘವು ಅನೇಕ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ ಎಂದರು. ಸಂಘದ ಅಧ್ಯಕ್ಷ ಹರಚನಹಳ್ಳಿ ದಯಾನಂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ರಾಜಶೇಖರಯ್ಯ, ಸಂಘದ ಉಪಾಧ್ಯಕ್ಷ ಉಮೇಶ್, ಖಜಾಂಜಿ ಸದಸ್ಯರಾದ ವಿ.ಎನ್ ಸಿದ್ದಲಿಂಗಯ್ಯ, ರಾಜು, ಉದಯಕುಮಾರ್, ಮಲ್ಲಿಕಾರ್ಜುನಯ್ಯ, ಶ್ರೀಧರ್, ರಾಜಣ್ಣ ಮತ್ತಿತರರಿದ್ದರು. ಹಾರ್ಮೋನಿಯಂ ಆಲದಹಳ್ಳಿ ಪರಮೇಶ್ವರಯ್ಯ, ತಬಲ ರಾಯಚಾರ್‌ರವರ ಸಂಗೀತದಲ್ಲಿ ಕಲ್ಪ ಕುಸುಮ ಕಲಾ ಮತ್ತು ಸಾಂಸ್ಕೃತಿಕ ಕಲಾವಿದರಿಂದ ರಂಗ ಗೀತೆ ಮತ್ತು ವಾಸುದೇವರಹಳ್ಳಿ ಶ್ರೀ ರಾಮ ಮಹಿಳಾ ಭಜನಾ ತಂಡ ಮತ್ತು ಹರಚನಹಳ್ಳಿ ತ್ರಿಲಿಂಗೆಶ್ವರ ಮಹಿಳಾ ಭಜನಾ ತಂಡದಿಂದ ಭಜನೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.