ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ವಿಭಾಗ, ಕಡೆಕೊಪ್ಪಲ ಪ್ರತಿಷ್ಠಾನ, ಸಹ್ಯಾದ್ರಿ ಕಲಾ ತಂಡ ಸಹಯೋಗದಲ್ಲಿ ಗುರುವಾರ ಪುರುಷರ ಹೊಸ ಸ್ನಾತಕೋತ್ತರ ಹಾಸ್ಟಲ್‍ನಲ್ಲಿ ಆಯೋಜಿಸಿದ್ದ ಮೂರು ದಿನಗಳ ರಂಗ ಗೀತೆ ಕಲಿಕಾ ಶಿಬಿರದಲ್ಲಿ ಅವರು ಮಾತನಾಡಿದರು.ಸಾಹಿತ್ಯದ ಒಲವು ಎಲ್ಲಾ ವಿದ್ಯಾರ್ಥಿಗಳಲ್ಲೂ ಇರಬೇಕು. ರಂಗ ಗೀತೆಗಳನ್ನು ಕೇಳಿದರಷ್ಟೆ ಸಾಲದು. ಅರ್ಥ ಮಾಡಿಕೊಳ್ಳಬೇಕು. ರಂಗ ಗೀತೆಗಳು ಎಂದಿಗೂ ಮರೆಯಾಗುವುದಿಲ್ಲ. ಅವು ಪಾತ್ರಗಳಿಗೆ ಜೀವ ತಂದುಕೊಡುತ್ತವೆ. ಮಾತು ಹಾಡಾಗುವ ಪರಿಯೇ ರಂಗ ಗೀತೆ ಎಂದರು.ಪ್ರಸ್ತಾವಿಕವಾಗಿ ಮಾತನಾಡಿದ ಶಿಬಿರದ ಸಂಚಾಲಕ ಡಾ. ಲವ ಜಿ.ಆರ್., ರಂಗ ಗೀತೆಗಳು ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಚರಿತ್ರೆ ಮತ್ತು ಚಾರಿತ್ರ್ಯದ ಪ್ರತಿಬಿಂಬವೇ ರಂಗ ಗೀತೆಗಳಾಗಿವೆ. ಭಾರತೀಯ ನಾಟಕಗಳಲ್ಲಿ ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರಂಗ ಗೀತೆಗಳು ಸಾಂಸ್ಕೃತಿಕ ವಾತವರಣವನ್ನು ನೀಡುತ್ತವೆ ಎಂದು ಹೇಳಿದರು.
ವಿಕಾರಗಳ ವಿದ್ಯಾಮಾನಗಳ ನಡುವೆ ಹೊಸ ಭರವಸೆಯನ್ನು ರಂಗ ಗೀತೆಗಳು ಮೂಡಿಸುತ್ತವೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಠಿಸಿ ಸಮುದಾಯವನ್ನು ಗ್ರಹಿಸುವಂತೆ ಮಾಡುತ್ತವೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಅವಿನಾಶ್ ಮಾತನಾಡಿ, ವೈಯುಕ್ತಿಕ ನೆಲೆಯಿಂದ ಸಮುದಾಯದತ್ತ ಅಲೋಚನೆಗಳನ್ನು ತಲುಪಿಸುವ ಮಾರ್ಗವೇ ರಂಗ ಗೀತೆಗಳಾಗಿವೆ. ರಂಗ ಗೀತೆಗಳು ಪ್ರೇಕ್ಷಕರ ಆಕರ್ಷಣೆಯ ಬಹುಮುಖ್ಯ ಭಾಗವಾಗಿದೆ. ರಂಗ ಗೀತೆಗಳನ್ನು ಜನಪದರು ಉಳಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ಸಿಂಚನ ನಿರೂಪಿಸಿ, ಪವಿತ್ರ ವಂದಿಸಿದರು.