ಸೇತುವೆ ಮೇಲೆ ನಿಂತು ಕುಟುಂಬಸ್ಥರಿಂದ ಮೃತರ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ

KannadaprabhaNewsNetwork |  
Published : Jul 24, 2024, 12:29 AM IST
23ಕೆಎಂಎನ್ ಡಿ24 | Kannada Prabha

ಸಾರಾಂಶ

ಶ್ರೀರಂಗಪಟ್ಟಣದ ಕಾವೇರಿ ನದಿ ತಟದ ಪ್ರಮುಖ ಶ್ರಾದ್ಧಕಾರ್ಯ ನಡೆಸುತ್ತಿದ್ದ ಪಶ್ಚಿಮವಾಹಿನಿ, ಪಟ್ಟಣದ ಸ್ನಾನಘಟ್ಟ, ಸಂಗಮ ಹಾಗೂ ಘೋಸಾಯ್ ಘಾಟ್ ಪ್ರವಾಹದಿಂದ ಜಲಾವೃತವಾಗಿವೆ. ವಿವಿಧೆಡೆಯಿಂದ ಪಿಂಡ ಪ್ರದಾನ, ಅಸ್ಥಿ ವಿಸರ್ಜನೆ ಮಾಡಲು ಬರುವವರಿಗೆ ಸ್ಥಳಗಳಿಲ್ಲದೆ ಎಲ್ಲಂದರಲ್ಲೇ ನದಿ ಸಮೀಪದ ದಡದಲ್ಲೇ ನೀತು ಪಿಂಡ ತರ್ಪಣೆ ನಡೆಸು ಹೋಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿ ಮೂಲಕ 50 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹರಿಬಿಟ್ಟ ಹಿನ್ನೆಲೆ ಕಾವೇರಿ ನದಿ ಪ್ರವಾಹದಿಂದಾಗಿ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ ನಡೆಸಲು ಸ್ಥಳಗಳಿಲ್ಲದೆ ಸೇತುವೆ ಮೇಲೆ ನಿಂತು ಕುಟುಂಬಸ್ಥರು ಮೃತರ ಅಸ್ತಿ ಬಿಸಾಡಿ ಹೋಗುತ್ತಿದ್ದಾರೆ.

ಪಟ್ಟಣದ ಕಾವೇರಿ ನದಿ ತಟದ ಪ್ರಮುಖ ಶ್ರಾದ್ಧಕಾರ್ಯ ನಡೆಸುತ್ತಿದ್ದ ಪಶ್ಚಿಮವಾಹಿನಿ, ಪಟ್ಟಣದ ಸ್ನಾನಘಟ್ಟ, ಸಂಗಮ ಹಾಗೂ ಘೋಸಾಯ್ ಘಾಟ್ ಪ್ರವಾಹದಿಂದ ಜಲಾವೃತವಾಗಿವೆ. ವಿವಿಧೆಡೆಯಿಂದ ಪಿಂಡ ಪ್ರದಾನ, ಅಸ್ಥಿ ವಿಸರ್ಜನೆ ಮಾಡಲು ಬರುವವರಿಗೆ ಸ್ಥಳಗಳಿಲ್ಲದೆ ಎಲ್ಲಂದರಲ್ಲೇ ನದಿ ಸಮೀಪದ ದಡದಲ್ಲೇ ನೀತು ಪಿಂಡ ತರ್ಪಣೆ ನಡೆಸು ಹೋಗುತ್ತಿದ್ದಾರೆ.

ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳೀಯ ಪೊಲೀಸರು ನಿಷೇಧ ಹೇರಿ ನದಿ ಬಳಿಗೆ ತೆರಳದಂತೆ ಅಡ್ಡಲಾಗಿ ಬ್ಯಾರಿಕೇಡ್ ನಿರ್ಮಿಸಿ, ತಂತಿ ಬೇಲಿಗಳನ್ನು ಹಾಕಿ ಜೊತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಹಾಗಾಗಿ ನದಿಗೆ ಇಳಿದು ಶ್ರದ್ಧಾಕಾರ್ಯ ಮಾಡಲು ಹೋಗುವ ಮಾರ್ಗಗಳನ್ನ ಮುಚ್ಚಿರುವುದರಿಂದ ಪಿಂಡ ಪ್ರದಾನ ಮಾಡಲು ಬೇರೆ ಬೇರೆ ಊರುಗಳಿಂದ ಬರುವ ಜನರಿಗೆ ಕಾವೇರಿ ನದಿಯಲ್ಲಿ ಪಿಂಡ ಪ್ರದಾನ ಮಾಡಲು ಸಾಧ್ಯವಾಗದೆ, ನದಿ ತಟದಲ್ಲೇ ದೂರದಿಂದ ಪಿಂಡ ಎಸೆದು ಹೋಗುತ್ತಿದ್ದಾರೆ.

ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಪ್ರಮುಖ: ಶಿವಪ್ಪ

ಕೆ.ಆರ್.ಪೇಟೆ:ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಮನ ಸಲ್ಲಿಸಲಾಯಿತು.

ಜಯಂತಿಯಲ್ಲಿ ತಾಲೂಕು ನಯನಜ ಕ್ಷತ್ರಿಯ ಸಮಾಜದ ಅಧ್ಯಕ್ಷ ಶಿವಪ್ಪ ಮಾತನಾಡಿ, ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ತತ್ವ, ಆದರ್ಶ ಇಂದಿಗೂ ಅನನ್ಯವಾಗಿವೆ ಎಂದರು.ಅಪ್ಪಣ್ಣನವರ ಜೀವನ, ತತ್ವ, ಸಿದ್ಧಾಂತಗಳನ್ನು ಎಲ್ಲರಿಗೂ ತಿಳಿಸಲು ಜಯಂತಿ ಆಚರಿಸಲಾಗುತ್ತಿದೆ. ಶರಣರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಬದುಕು ರೂಪಿಸಿಕೊಳ್ಳಬೇಕು. ಅಪ್ಪಣ್ಣನವರು ಒಬ್ಬ ಸೇವಾಯೋಗಿ, ಕಾಯಕನಿರತ ಶರಣರಾಗಿದ್ದಾರೆ. ಅಂಥಹ ಮಹಾನ್ ಶರಣರು ನಡೆದು ಬಂದ ದಾರಿಯಲ್ಲಿ ಸಾಗಿದರೆ ಜೀವನ ಸಾರ್ಥಕ ಸಾರ್ಥಕವಾಗುತ್ತದೆ. ಅವರ ಸ್ಮರಣೆಗೂ ಅರ್ಥಪೂರ್ಣತೆ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಸವಿತಾ ಸಮಾಜದ ಅಧ್ಯಕ್ಷ ಸಂತೇಬಾಚಹಳ್ಳಿ ಮಂಜುನಾಥ್, ಉಪಾದ್ಯಕ್ಷ ಎಂ.ಕೆ.ಶೇಖರ್, ಎಚ್.ಕೆ.ಸಿದ್ದರಾಜು, ಕಾರ್ಯಾಧ್ಯಕ್ಷ ಪಾಪಣ್ಣ, ಲೆಕ್ಕಪರಿಶೋಧಕ ವಸಂತಕುಮಾರ್, ಶಿಕ್ಷಣ ಸಂಯೋಜಕಿ ನೀಲಾಮಣಿ, ಆರೋಗ್ಯ ನಿರೀಕ್ಷಕ ಸತೀಶ್ ಸೇರಿದಂತೆ ಹಲವರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌