ತಪೋಕ್ಷೇತ್ರ ಮಠದ ಜಾತ್ರೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Apr 04, 2026, 02:45 AM IST
ಪೋಟೋ:- ಮೂರು ದಿನ ನಡೆಯಲಿರುವ ಮನೆಹಳ್ಳಿ ಮಠದ ಜಾತ್ರೋತ್ಸವಕ್ಕೆ ಮಠಾದೀಶರು ಚಾಲನೆ ನೀಡುತ್ತಿರುವುದು | Kannada Prabha

ಸಾರಾಂಶ

ಸಮಿಪದ ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಅಂಕನಹಳ್ಳಿ ಬಳಿಯ ತಪೋಕ್ಷೇತ್ರ ಮನಹಳ್ಳಿ ಮಠದ ಆವರಣದಲ್ಲಿ ಗುರುವಾರ ಮಠಾಧೀಶ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ ಅವರು ಮಠದ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಸಮಿಪದ ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಅಂಕನಹಳ್ಳಿ ಬಳಿಯ ತಪೋಕ್ಷೇತ್ರ ಮನಹಳ್ಳಿ ಮಠದ ಆವರಣದಲ್ಲಿ ಗುರುವಾರ ಮಠಾಧೀಶ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ ಅವರು ಮಠದ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಗುರುವಾರ ಬೆಳಗ್ಗೆ ಸ್ವಾಮೀಜಿ ಅವರು ಕ್ಷೇತ್ರದ ಆರಾಧ್ಯ ದೇವರುಗಳಾದ ಶ್ರೀ ವೀರಭದ್ರೇಶ್ವರ, ಭದ್ರಕಾಳಿ, ಶ್ರೀ ಗುರುಸಿದ್ದೇಶರ್ವ ಹಾಗೂ ತಪೋವನೇಶ್ವರಿ ದೇವಿಯವರಿಗೆ ರುದ್ರಭಿಷೇಕ, ಅಷ್ಟೋತ್ತರ ನಂತರ ಮಹಾಮಂಗಳಾರತಿ ನೆರವೇರಿಸಿದರು. ತದನಂತರ ಕಲ್ಯಾಣಿ ಸಮೀಪದ ಶಟಸ್ಥಲ ಧ್ವಜರೋಹಣ ನೆರವೇರಿಸುವ ಮೂಲಕ ಶುಕ್ರವಾರ ಮತ್ತು ಶನಿವಾರ ನಡೆಯಲಿರುವ 2026ನೇ ಸಾಲಿನ ಮಠದ ಜಾತ್ರೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಶ್ರೀ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜಾತ್ರಾಮಹೋತ್ಸವವು ಶ್ರದ್ದಾಭಕ್ತಿಯಿಂದ ಮತ್ತು ಸಂಭ್ರಮದಿಂದ ನಡೆಯುತ್ತದೆ, ಮೂರು ದಿನಗಳು ನಡೆಯಲಿರುವ ಜಾತ್ರಾಮಹೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಲಿದ್ದು ಏ. 4 ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಸಮಾರಂಭವು ನಡೆಯುತ್ತದೆ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸುತ್ತಾರೆ. ಅಂದು ಸಂಜೆ 7 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸ್ವಾಮಿಯವರ ಮಹಾರಥೋತ್ಸವ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರು ವರ್ಷದಲ್ಲಿ 2809 ಜನ ರೈತರ ಸಾವು: ಕೇಂದ್ರ ಸಚಿವ ಸೋಮಣ್ಣ
ಕಾಂಗ್ರೆಸ್‌ನಷ್ಟು ಲಜ್ಜೆಗೇಡಿ ಸರ್ಕಾರ ನಾನು ನೋಡಿಲ್ಲ: ಸಂಸದ ಜಿಗಜಿಣಗಿ