ರಾಮನಗರ: ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಆರ್ಥಿಕವಾಗಿ ಅವಶ್ಯವಾಗಿರುವ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣಾ ಅವಕಾಶಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು ಸಂಘಟನೆಯ ಉದ್ದೇಶವಾಗಿರಲಿ ಎಂದು ಅಖಿಲ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಉಮಾ ಸಾಯಿರಾಮ್ ಕರೆ ನೀಡಿದರು.
ನಗರದ ಶ್ರೀ ಕನ್ನಿಕಾಮಹಲ್‌ನಲ್ಲಿ ಆಯೋಜಿಸಿದ್ದ ವಾಸವಿ ವನಿತಾ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ಮಂಡಳಿಯ ಉದ್ಯೋಗ ಮಿತ್ರ ಯೋಜನೆಯಡಿ ಆರ್ಥಿಕವಾಗಿ ಸದೃಢರಾಗಲು ಅವಕಾಶವಿದೆ. ಸದ್ಯ 3 ಸಾವಿರ ಮಂದಿ ಈ ಯೋಜನೆಗಳ ಉಪಯೋಗ ಪಡೆದುಕೊಂಡಿದ್ದಾರೆ. ವ್ಯಾಪಾರ ಆರಂಭಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಈ ಯೋಜನೆಗಳ ಮೂಲಕ ಮಾಸಿಕ ಕನಿಷ್ಠ 25 ಸಾವಿರ ರು.ಗಳಿಸುವ ಅವಕಾಶವಿದೆ. ಇಂತಹ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.ಸಂಘಟನೆಯಡಿ ಬ್ಯೂಟಿ ಪಾರ್ಲರ್, ಕೇಕ್ ತಯಾರಿಕೆ, ವಿವಿಧ ವಿಷಯಗಳಲ್ಲಿ ವೃತ್ತಿ ಕೌಶಲ್ಯಗಳ ತರಬೇತಿ ಕಾರ್ಯಾಗಳನ್ನು ಆಯೋಜಿಸಿದ್ದು, 100ಕ್ಕೂ ಹೆಚ್ಚು ಮಂದಿ ಉಪಯೋಗ ಪಡೆದು, ಅನೇಕರಿಗೆ ಉದ್ಯೋಗವೂ ಸಿಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾದ ಕೆ.ಎನ್.ಶಾಂತ ಮಾತನಾಡಿದರು. ನಿರ್ಗಮಿತ ಅಧ್ಯಕ್ಷೆ ನಾಗಮಣಿ, ಕಾರ್ಯದರ್ಶಿ ಹೇಮಾ, ಎಸ್.ಗಾಯತ್ರಿ, ಮಧುರ, ರತ್ನಶ್ರೀ , ಮಧುಶ್ರಿ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್ ...................ನೂತನ ಕಾರ್ಯಕಾರಿ ಸಮಿತಿ:
ಉಪಾಧ್ಯಕ್ಷರಾಗಿ ಪುಷ್ಪ, ಖಜಾಂಚಿ ಜಲಜಾಕ್ಷಿ, ಸಹ ಕಾರ್ಯದರ್ಶಿ ಅಶ್ವಿನಿ, ನಿರ್ದೇಶಕರಾಗಿ ಅಂಕಿತ, ಅನುಷಾ, ಭಾಗ್ಯ, ಭಾರತಿ, ಕಲ್ಪನಾ, ಕವಿತಾ, ಲಕ್ಷ್ಮಿ, ಮಧುಶ್ರೀ, ಮಧುರಾ, ನಿರ್ಮಲ, ಪದ್ಮಶ್ರಿ, ಪುಷ್ಪ, ರತ್ನಶ್ರೀ, ಸುಮನಾ, ವಾಣಿಶ್ರೀ ಆಯ್ಕೆಯಾಗಿದ್ದಾರೆ. 6ಕೆಆರ್ ಎಂಎನ್ 5.ಜೆಪಿಜಿರಾಮನಗರದ ಶ್ರೀ ಕನ್ನಿಕಾಮಹಲ್‌ನಲ್ಲಿ ವಾಸವಿ ವನಿತಾ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು.