ಇಂದು, ನಾಳೆ ಕಿನ್ನಿಗೋಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

KannadaprabhaNewsNetwork | Published : Dec 23, 2023 1:45 AM

ಸಾರಾಂಶ

ಕೆಎಫ್‌ಸಿ ಕಿನ್ನಿಗೋಳಿ ನೇತ್ರತ್ವದಲ್ಲಿ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶವಾದ ಕಿನ್ನಿಗೋಳಿ ಪರಿಸರದಲ್ಲಿ ಡಿ. 23, 24ರಂದು ಐಕಳ ಪೊಂಪೈ ಕಾಲೇಜು ಮೈದಾನದಲ್ಲಿ ಮಹಿಳೆಯರ ಕಿನ್ನಿಗೋಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಜರಗಲಿದೆ. ರಾಜ್ಯ ಮತ್ತು ಹೊರ ರಾಜ್ಯಗಳ 8 ಪ್ರತಿಷ್ಠಿತ ಮಹಿಳಾ ಕ್ರಿಕೆಟ್ ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಕೆಎಫ್‌ಸಿ ಕಿನ್ನಿಗೋಳಿ ನೇತ್ರತ್ವದಲ್ಲಿ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶವಾದ ಕಿನ್ನಿಗೋಳಿ ಪರಿಸರದಲ್ಲಿ ಡಿ. 23, 24ರಂದು ಐಕಳ ಪೊಂಪೈ ಕಾಲೇಜು ಮೈದಾನದಲ್ಲಿ ಮಹಿಳೆಯರ ಕಿನ್ನಿಗೋಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಜರಗಲಿದೆ ಎಂದು ಕಿನ್ನಿಗೋಳಿ ಪ್ರಿಮಿಯರ್‌ ಲೀಗ್‌ ನ ಗೌರವಾಧ್ಯಕ್ಷ ಈಶ್ವರ್‌ ಕಟೀಲು ಹೇಳಿದರು.

ಕಿನ್ನಿಗೋಳಿಯಲ್ಲಿ ಜರಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರಿಕೆಟ್ ಹಾಗೂ ಸಂಘಟನೆಯ ಮೂಲಕ ಮನೆಮಾತಾಗಿರುವ 25 ವರ್ಷಗಳಿಂದ ಜನಪ್ರಿಯತೆ ಗಳಿಸಿರುವ ಕೆ.ಎಫ್.ಸಿ ತಂಡದ ನೇತೃತ್ವದಲ್ಲಿ ಆಹ್ವಾನಿತ ಮಹಿಳಾ ತಂಡಗಳಿಗಾಗಿ ಲೀಗ್ ಮಾದರಿಯ ಕಿನ್ನಿಗೋಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ 23 ಹಾಗೂ 24 ರಂದು ಐಕಳ ಪೊಂಪೈ ಕಾಲೇಜು ಮೈದಾನದಲ್ಲಿ ನಡೆಯಲಿದೆ.ರಾಜ್ಯ ಮತ್ತು ಹೊರ ರಾಜ್ಯಗಳ 8 ಪ್ರತಿಷ್ಠಿತ ಮಹಿಳಾ ಕ್ರಿಕೆಟ್ ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದೆ. ಯಾವುದೇ ಡೊನೇಶನ್, ಪ್ರವೇಶ ಶುಲ್ಕಗಳನ್ನು ಪಡೆಯದೇ ಕೇವಲ ಕ್ರಿಕೆಟನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಲ್ಲಿ ಪುರುಷರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯುಳ್ಳ ಕೆಎಫ್‌ಸಿ ತಂಡದ ನೇತೃತ್ವದಲ್ಲಿ ಈ ಪಂದ್ಯಾಟ ನಡೆಯಲಿದೆ.

23 ರಂದು ಬೆಳಗ್ಗೆ 8ಕ್ಕೆ ಮೂಲ್ಕಿ- ಮೂಡಬಿದ್ರೆ ಶಾಸಕ ಉಮಾನಥ ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಟೂರ್ನಿ ಉದ್ಘಾಟಿಸಲಿದ್ದಾರೆ. ಐಕಳ ಪೊಂಪೈ ಕಾಲೇಜಿನ ಸಂಚಾಲಕ ರೆ.ಫಾ|ಒಸ್ವಾಲ್ಡ್ ಮೊಂತೆರೋ ಆಶೀರ್ವಚನ ನೀಡಲಿದ್ದು ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

24ರಂದು ಸಂಜೆ 5ಕ್ಕೆ ಸಮಾರೋಪ, ಹಾಗೂ ವಿಜೇತರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ. ಬೆಂಗಳೂರಿನ ಬಸವೇಶ್ವರ ನಗರದ ಕಾನೂನು ಕಾಲೇಜಿನ ಪ್ರಾಚಾರ್ಯೆ ದೇವಿಕಾ ಎಸ್.ಅಜಿಲ ಕವತ್ತಾರ್‌ರವರ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಐಕಳ ಪೊಂಪೈ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜೇಮ್ಸ್ ಒಲಿವರ್ ಸಹಿತ ಇತರ ಕ್ರೀಡಾ ಸಾಧಕರ ಸನ್ಮಾನ ನಡೆಯಲಿದೆ ಎಂದು ಕೆಎಫ್‌ಸಿಯ ಸಂಸ್ಥಾಪಕ ಅಧ್ಯಕ್ಷ ಗಣೇಶ್ ಎಸ್., ಹಾಲಿ ಅಧ್ಯಕ್ಷ ಅರುಣ್ ಕುಮಾರ್, ಗೌರವಾಧ್ಯಕ್ಷರಾದ ಪ್ರಮೋದ್ ಕುಮಾರ್, ಈಶ್ವರ್ ಕಟೀಲ್, ಸಂಘಟಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಆರ‍್ಯನ್ ಪಿಂಕ್ ಪ್ಯಾಂಥರ್ಸ್, ಬ್ರಹ್ಮಾವರದ ಎಸ್‌ಎಂಎಸ್ ಪ್ಯಾಂಥರ್ಸ್, ಎಕ್ಕಾರ್‌ನ ವಿಜಯಾ ಯುವ ಸಂಗಮ, ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು, 11 ಸ್ಟ್ರೈಕರ್ಸ್ ಬೆದ್ರ, ಆಂಜನೇಯ ಸಸಿಹಿತ್ಲು, ಮಂಗಳೂರಿನ ಸಂತ ಅಲೋಶಿಯಸ್ ಆಕಾಡೆಮಿ, ಪಂಜಿನಡ್ಕದ ಜೋಲ್ಲಿ ಫ್ರೆಂಡ್ಸ್ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 8 ಪ್ರಬಲ ಮಹಿಳಾ ಕ್ರಿಕೆಟ್ ತಂಡಗಳಾಗಿವೆ.ಕಿನ್ನಿಗೋಳಿ: ಕ್ರಿಕೆಟ್ ಹಾಗೂ ಸಂಘಟನೆಯ ಮೂಲಕ ಮನೆಮಾತಾಗಿರುವ 25 ವರ್ಷಗಳಿಂದ ಜನಪ್ರಿಯತೆ ಗಳಿಸಿರುವ ಕೆ.ಎಫ್.ಸಿ ತಂಡದ ನೇತೃತ್ವದಲ್ಲಿ ಆಹ್ವಾನಿತ ಮಹಿಳಾ ತಂಡಗಳಿಗಾಗಿ ಲೀಗ್ ಮಾದರಿಯ ಕಿನ್ನಿಗೋಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಡಿ. 23 ಹಾಗೂ 24 ರಂದು ಐಕಳ ಪೊಂಪೈ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಆರ‍್ಯನ್ ಪಿಂಕ್ ಪ್ಯಾಂಥರ್ಸ್, ಬ್ರಹ್ಮಾವರದ ಎಸ್‌ಎಂಎಸ್ ಪ್ಯಾಂಥರ್ಸ್, ಎಕ್ಕಾರ್‌ನ ವಿಜಯಾ ಯುವ ಸಂಗಮ, ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು, 11 ಸ್ಟ್ರೈಕರ್ಸ್‌ ಬೆದ್ರ, ಆಂಜನೇಯ ಸಸಿಹಿತ್ಲು, ಮಂಗಳೂರಿನ ಸಂತ ಅಲೋಶಿಯಸ್ ಆಕಾಡೆಮಿ, ಪಂಜಿನಡ್ಕದ ಜಾಲಿ ಫ್ರೆಂಡ್ಸ್ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳ 8 ಪ್ರತಿಷ್ಠಿತ ಮಹಿಳಾ ಕ್ರಿಕೆಟ್ ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿದೆ. ಯಾವುದೇ ಡೊನೇಶನ್, ಪ್ರವೇಶ ಶುಲ್ಕಗಳನ್ನು ಪಡೆಯದೇ ಕೇವಲ ಕ್ರಿಕೆಟನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಲ್ಲಿ ಪುರುಷರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯುಳ್ಳ ಕೆಎಫ್‌ಸಿ ತಂಡದ ನೇತೃತ್ವದಲ್ಲಿ ಈ ಪಂದ್ಯಾಟ ನಡೆಯಲಿದೆ.

23 ರ ಬೆಳಗ್ಗೆ 8ಕ್ಕೆ ಶಾಸಕ ಉಮಾನಾಥ ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ದ.ಕ. ಜಿಲ್ಲಾ ಪಂಚಾಯಿತಿನ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಟೂರ್ನಿ ಉದ್ಘಾಟಿಸಲಿದ್ದಾರೆ. ಐಕಳ ಪೊಂಪೈ ಕಾಲೇಜಿನ ಸಂಚಾಲಕ ರೆ.ಫಾ|ಒಸ್ವಾಲ್ಡ್ ಮೊಂತೆರೋ ಆಶೀರ್ವಚನ ನೀಡಲಿದ್ದು ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

24ರಂದು ಸಂಜೆ 5ಕ್ಕೆ ಸಮಾರೋಪ, ಹಾಗೂ ವಿಜೇತರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ. ಬೆಂಗಳೂರಿನ ಬಸವೇಶ್ವರ ನಗರದ ಕಾನೂನು ಕಾಲೇಜಿನ ಪ್ರಾಚಾರ್ಯೆ ದೇವಿಕಾ ಎಸ್.ಅಜಿಲ ಕವತ್ತಾರ್‌ ಅವರ ಅಧ್ಯಕ್ಷತೆಯಲ್ಲಿ ಗಣ್ಯರ ಉಪಸ್ಥತಿಯಲ್ಲಿ ಐಕಳ ಪೊಂಪೈ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜೇಮ್ಸ್ ಒಲಿವರ್ ಸಹಿತ ಇತರ ಕ್ರೀಡಾ ಸಾಧಕರ ಸಮ್ಮಾನ ನಡೆಯಲಿದೆ ಎಂದು ತಿಳಿಸಿದರು.

ಕೆಎಫ್‌ಸಿಯ ಸಂಸ್ಥಾಪಕ ಅಧ್ಯಕ್ಷ ಗಣೇಶ್ ಎಸ್.ಮಮತಾ ಗಣೇಶ್‌, ಅಧ್ಯಕ್ಷ ಅರುಣ್ ಕುಮಾರ್, ಗೌರವಾಧ್ಯಕ್ಷರಾದ ಪ್ರಮೋದ್ ಕುಮಾರ್, ದಾಮೋದರ್ ಶೆಟ್ಟಿ ಕೊಡೆತ್ತೂರು ಗುತ್ತು, ಶ್ರೀಶ ಸರಾಫ್‌ ಐಕಳ, ಸಂತೋಷ್‌, ಸಂಘಟಕ ಪ್ರವೀಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Share this article