ಕನ್ನಡಪ್ರಭ ವಾರ್ತೆ ಚವಡಾಪುರ
ಮುಖ್ಯಗುರು ಮಹಾಂತೇಶ ಹಾಲಗಡ್ಲಿ, ಶಿಕ್ಷಕ ಯಲ್ಲಾಲಿಂಗ ತಳವಾರ ಮಾತನಾಡಿ ಈ ಹಿಂದೆ ಅಫಜಲ್ಪುರ ತಾಲೂಕು ದಂಡಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಯಲ್ಲಪ್ಪ ಸುಬೇದಾರ ಅವರು ಬಹಳ ಸರಳ ಮತ್ತು ಜನಸ್ನೇಹಿ ಅಧಿಕಾರಿಯಾಗಿದ್ದಾರೆ. ಅವರು ಆಡಳಿತದಲ್ಲಿದ್ದಷ್ಟು ಸಮಯ ತಾಲೂಕಿನ ರೈತರು, ಹಿರಿಯರು, ಸಾರ್ವಜನಿಕರು ತಹಸೀಲ್ ಕಚೇರಿಗೆ ಯಾವುದೇ ಭಯವಿಲ್ಲದೆ ಬಂದು ಹೋಗುವಂತ ವಾತಾವರಣ ಸೃಷ್ಟಿಸಿದ್ದರು. ಅದರಲ್ಲೂ ರೈತರು, ಹಿರಿಯ ನಾಗರಿಕರಿಗೆ ಉತ್ತಮ ರೀತಿಯಲ್ಲಿ ಕಂದಾಯ ಇಲಾಖೆ ಸೇವೆಗಳು ತಲುಪುವಂತೆ ಮಾಡುತ್ತಿದ್ದರು. ಅಲ್ಲದೆ ಯಾವುದೇ ಸಮಸ್ಯೆಗಳ ಕುರಿತು ಸಾರ್ವಜನಿಕರು ಸಂಪರ್ಕ ಮಾಡಿದರೆ ಅದಕ್ಕೆ ಉತ್ತಮವಾಗಿ ಸ್ಪಂದಿಸಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡುತ್ತಿದ್ದರು. ಈಗ ಆಳಂದ ತಹಸೀಲ್ದಾರರಾಗಿ ಉತ್ತಮ ಆಡಳಿತ ನಡೆಸುತ್ತಿದ್ದು ಅವರ ಕಾರ್ಯವೈಖರಿಯನ್ನು ಗುರುತಿಸಿ ಸರ್ಕಾರದ ಮಟ್ಟದ ರಾಜ್ಯ ಪ್ರಶಸ್ತಿ ಲಭಿಸಿದೆ. ಇದು ಅವರ ಕಾರ್ಯವೈಖರಿಗೆ ಸಿಕ್ಕ ಪ್ರಶಸ್ತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಬಸವರಾಜ ಪುಲಾರಿ, ಭೀಮರಾಯ ಬಿಜಾಪುರ, ರಾಜಶೇಖರ ಧೂಳಬಾ, ಶಿವಶರಣ ವಾಲೆ, ಅಂಬಿಕಾರ ಆರಬಳ್, ಕಾವೇರಿ ಬಟಗೇರಿ ಇದ್ದರು.