ಗ್ಯಾರಂಟಿಗೆ ರಾಜ್ಯ ಸರ್ಕಾರ ದಿವಾಳಿಯಾಗಿ ಬೆಲೆ ಏರಿಕೆ: ಸೋಮನಾಯಕ

KannadaprabhaNewsNetwork |  
Published : Oct 08, 2026, 01:30 AM IST
ಕರ್ನಾಟಕ ರಾಜ್ಯರೈತ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಆರೋಪಿಸಿದರು. | Kannada Prabha

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ವಿಫಲವಾಗಿ ವಿವಿಧ ಬೆಲೆಗಳನ್ನು ಮನಸ್ಸಿಗೆ ಬಂದಂತೆ ಏರಿಕೆ ಮಾಡುತ್ತಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಕರ್ನಾಟಕ ರಾಜ್ಯರೈತ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಅಣಕವಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ವಿಫಲವಾಗಿ ವಿವಿಧ ಬೆಲೆಗಳನ್ನು ಮನಸ್ಸಿಗೆ ಬಂದಂತೆ ಏರಿಕೆ ಮಾಡುತ್ತಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಕರ್ನಾಟಕ ರಾಜ್ಯರೈತ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ ಅಣಕವಾಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2026ರ ಅ. 1ರಿಂದ ಪೋಡಿ, ಹದ್ದುಬಸ್ತು, 11ಇ ಮತ್ತು ಅಲಿನೇಷನ್ ಸೇರಿದಂತೆ ಇತರೆ ಜಮೀನು ಅಳತೆಗಳಿಗಾಗಿ ಸಲ್ಲಿಸಿರುವ ಅರ್ಜಿಗಳಿಗೆ ಅನ್ವಯವಾಗುವಂತೆ ದರ ಪರಿಷ್ಕರಿಸಿ, ಸರ್ಕಾರ ಆದೇಶ ಹೊರಡಿಸಿದೆ. ರೈತರ ಜೇಬಿಗೆ ಕತ್ತರಿ ಹಾಕಿದ್ದಾರೆ. ಭೂಮಾಪನ ಇಲಾಖೆ ಆಯುಕ್ತರು ಪ್ರಸ್ತಾವನೆ ಹಿನ್ನೆಲೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ-ಭೂಮಾಪನ) ಎಂ.ಎ.ಮಹಾಲಕ್ಷ್ಮಿ ಸೆ. 19ರಂದು ಆದೇಶ ಹೊರಡಿಸಿದ್ದಾರೆ. ಪ್ರತ್ಯೇಕ ದರ ರಾಜ್ಯದ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕ ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದರು.

ಹಿಂದಿನ ದರಕ್ಕಿಂತ ಸರಾಸರಿ ಒಂದು ಸಾವಿರ ರುಪಾಯಿಗಳನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿದೆ. 11ಇ ಅಲಿನೇಷನ್ ಪೂರ್ವ ನಕ್ಷೆ ತತ್ಕಲ್ ಪೋಡಿಗೆ ಸಂಬಂಧಿಸಿದ 2 ಎಕರೆ ವರೆಗಿನ ಜಮೀನುಗಳಿಗೆ ನಗರ ಪ್ರದೇಶದಲ್ಲಿ 3,200 ರು. ನಿಗದಿ ಮಾಡಿದ್ದಾರೆ. ಇದುವರೆಗೆ 2000 ರು. ಇತ್ತು. ಗ್ರಾಮೀಣ ಪ್ರದೇಶದಲ್ಲಿ 1500.ರು. ಇದ್ದುದ್ದನ್ನು 2300 ರು.ಗೆ ಹೆಚ್ಚಿಸಲಾಗಿದೆ. 2 ಎಕರೆಗೆ ಮೇಲ್ಪಟ್ಟು ಪ್ರತಿ ಎಕರೆ ಜಮೀನಿಗೆ ನಗರ ಪ್ರದೇಶದಲ್ಲಿ 1000 ರು., ಗ್ರಾಮೀಣ ಪ್ರದೇಶದಲ್ಲಿ 400 ರು. ಹೆಚ್ಚುವರಿ ಕಟ್ಟಬೇಕು ಎಂದು ಹೇಳಿದರು.

ಕಂದಾಯ ಸಚಿವರಾದ ಕೃಷಭೈರೇಗೌಡರು ಒಂದು ಸರ್ವೆ ನಂಬರಿನ ಅಟ್ಲಾಸ್, ಟಿಪ್ಪಣಿ, ಎಡಬಲ ಕಾಪಿ ಸಂಬಂಧಪಟ್ಟ ಎಲ್ಲಾ ದಾಖಲಾತಿಗೆ ಕೇವಲ ಬರೀ 35 ರು. ಎಂದು ವಿಧಾನಸಭೆಯಲ್ಲಿ ಘೋಷಣೆ ಮಾಡಿದರು. ಆದರೆ ಈಗ ನಗರ ಪ್ರದೇಶಗಳಿಗೆ ಹದ್ದುಬಸ್‌ಗೆ 3500 ರು. ಮತ್ತು ಗ್ರಾಮೀಣ ಪ್ರದೇಶಗಳಿಗೆ 2300 ರು. ಹೆಚ್ಚಿಸಲಾಗಿದೆ. ಆದ್ದರಿಂದ ರೈತರು ಬದುಕುವುದು ಕಷ್ಟಕರವಾಗಿದೆ ಎಂದರು.

ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಯನ್ನು ಸರಿಯಾಗಿ ಜನರಿಗೆ ತಲುಪಿಸದೆ ಸಂಪೂರ್ಣ ವಿಫಲವಾಗಿದೆ. ರಾಜ್ಯ ಸರ್ಕಾರವು ಬಸ್‌ನ ದರವನ್ನು ಹಾಗೂ ಹಾಲಿನ ದರವನ್ನು ಹೆಚ್ಚಳ ಮಾಡುತ್ತಿರುವುದು ಗ್ರಾಹಕರಿಗೆ ಮಾಡುತ್ತಿರುವ ಅನ್ಯಾಯ ಎಂದರು.

ಹಾಲಿನ ದರವನ್ನು ಹೆಚ್ಚಳ ಮಾಡುತ್ತಿರುವುದರಿಂದ ಗ್ರಾಹಕ ಹಾಗೂ ರೈತರಿಗೆ ಸಮನಾಗಿ ಅನುಕೂಲವಾಗುವಂತೆ ಮಾಡಬೇಕೆಂದು ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ಜಿಲ್ಲಾಡಳಿತ ಭವನದ ಮುಂದೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಎ.ಎಂ.ಮಲ್ಲಿಕಾರ್ಜುನಸ್ವಾಮಿ (ಆಲೂರುಮಲ್ಲು), ಮುಖಂಡರಾದ ಜಿ.ಎಂ.ಶಂಕರ್, ಪಣ್ಯದಹುಂಡಿ ರಾಜಣ್ಣ, ಕಾಳನಹುಂಡಿ ಮಲ್ಲಿಕ್, ರಾಮಸಮುದ್ರ ಲಿಂಗರಾಜು, ಹೆಗ್ಗೋಠಾರ ಮಂಜು, ಪ್ರವೀಣ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಂದ್ರ ಮೋದಿ ಆಡಳಿತ ಕುರಿತು ಬೀದಿ ನಾಟಕ
ಕುರುಹಿನಶೆಟ್ಟಿ ಭಜನಾ ಮಂಡಳಿಯಿಂದ ಭಕ್ತಿಗೀತೆ