ರಾಜ್ಯ ಸರ್ಕಾರದಿಂದ ಜನರ ಧಾರ್ಮಿಕ ಭಾವನೆಗೆ ಧಕ್ಕೆ: ಸಂಸದ ಜಗದೀಶ ಶೆಟ್ಟರ್

KannadaprabhaNewsNetwork |  
Published : Sep 02, 2025, 12:00 AM IST
ಜಗದೀಶ ಶೆಟ್ಟರ ಅವರೊಂದಿಗೆ ಅಂಕೋಲಾ ಬಿಜೆಪಿ ಪ್ರಮುಖರು | Kannada Prabha

ಸಾರಾಂಶ

ಸಿದ್ದರಾಮಯ್ಯ ಸರ್ಕಾರ ಮತ್ತು ಎಡಪಂಥೀಯ ಚಿಂತಕರು ಕೂಡಿಕೊಂಡು ಧರ್ಮಸ್ಥಳ ಕ್ಷೇತ್ರ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.

ಅಂಕೋಲಾ: ಸಿದ್ದರಾಮಯ್ಯ ಸರ್ಕಾರ ಮತ್ತು ಎಡಪಂಥೀಯ ಚಿಂತಕರು ಕೂಡಿಕೊಂಡು ಧರ್ಮಸ್ಥಳ ಕ್ಷೇತ್ರ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸ ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಅವರು ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಅಂಕೋಲಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಎಡಪಂಥೀಯ ವಿಚಾರಗಳಿಗೆ ಪುಷ್ಟಿ ನೀಡುವ ಕೆಲಸ ಮಾಡುತ್ತಿದೆ. ಎಡಪಂಥೀಯ ಚಿಂತನೆ ಮಾಡುವ ವ್ಯಕ್ತಿಗಳು ಒಂದೆಡೆ ಸೇರಿ ಈ ಪ್ರಕರಣ ದಾರಿ ತಪ್ಪುವ ಹಾಗೆ ಮಾಡಿದರು.

ಧರ್ಮಸ್ಥಳದ ಬಗ್ಗೆ ಲಕ್ಷಾಂತರ ಜನರಿಗೆ ಅಪಾರ ಗೌರವ, ಭಕ್ತಿ ಇದೆ. ಈ ಕ್ಷೇತ್ರದ ಕುರಿತು ಅಪಪ್ರಚಾರ ಸಲ್ಲದು. ಸಿದ್ದರಾಮಯ್ಯ ಸರ್ಕಾರ ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂ ದೇವಸ್ಥಾನಕ್ಕೆ ಅವಹೇಳನ ಮಾಡುವಂತಹ ಕೆಲಸ ಹಿಂದಿನಿಂದಲೂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅದರಲ್ಲಿ ಈಗ ಧರ್ಮಸ್ಥಳ ಕ್ಷೇತ್ರವೂ ಒಂದಾಗಿದೆ. ಅಪಾರ ಭಕ್ತ ಸಮೂಹ ಹೊಂದಿದ ಕ್ಷೇತ್ರಕ್ಕೆ ಯಾವತ್ತು ಹಾನಿಯಾಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಅಂಕೋಲಾ ಬಿಜೆಪಿ ಮುಖಂಡರಾದ ಭಾಸ್ಕರ ನಾರ್ವೇಕರ, ಗಣಪತಿ ನಾಯ್ಕ ಇದ್ದರು.

ಹಿಂದೂ ಪರಂಪರೆಗೆ ಧಕ್ಕೆ...

ಹಿಂದೂ ಪರಂಪರೆಯ ನಾಡಹಬ್ಬ ದಸರಾ ಉದ್ಘಾಟನೆಗೆ ವಿರೋಧ ಇದ್ದರೂ ಬಾನು ಮುಷ್ತಾಕ್‌ ಅವರಿಗೆ ಆಹ್ವಾನ ನೀಡಲಾಗಿದೆ. ಹಿಂದೂ ಪರಂಪರೆಗೆ ಧಕ್ಕೆ ತರುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಹಿಂದೂಗಳ ಹಿತರಕ್ಷಣೆ ಮಾಡದೆ, ಹಿಂದೂ ಸಮಾಜ ಒಡೆಯುವ, ಅಪಪ್ರಚಾರದಂತಹ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಜಗದೀಶ ಶೆಟ್ಟರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ