ಕನ್ನಡಪ್ರಭ ವಾರ್ತೆ ಮಂಡ್ಯ
ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವುದಾಗಿ ಸುಪ್ರೀಂ ಕೋರ್ಟ್ ೨೦೨೪ರ ಆಗಸ್ಟ್‌ನಲ್ಲಿಯೇ ಆದೇಶ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಯಾರ ಒತ್ತಡಕ್ಕೆ ಮಣಿದು ಒಳಮೀಸಲಾತಿ ಜಾರಿಗೊಳಿಸದೆ ನಾಟಕವಾಡುತ್ತಿದೆ ಎನ್ನುವುದನ್ನು ಬಹಿರಂಗಪಡಿಸುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈಗಾಗಲೇ ಕಾಂಗ್ರೆಸ್ ಸರ್ಕಾರದ ಬಳಿ ೩ ಆಯೋಗಗಳ ವರದಿಯಿದೆ. ಈ ಸಂಬಂಧ ಸದನದಲ್ಲಿ ಹಾಗೂ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ, ರಾಜ್ಯಪಾಲರ ಅಂಕಿತ ಪಡೆದರೂ ಯಾವ ಕಾರಣಕ್ಕೆ ತಡೆಹಿಡಿದಿದ್ದಾರೆ. ನಾಗಮೋಹನ್‌ದಾಸ್ ಅವರ ವರದಿ ಪ್ರಕಾರ ಒಳ ಮೀಸಲಾತಿ ಜಾರಿ ಮಾಡದೇ ರಾಜಕೀಯ ಲಾಭಕ್ಕಾಗಿ ೩ ಗುಂಪು ಮಾಡಿ ಬೇಕಾಬಿಟ್ಟಿಯಾಗಿ ಜಾರಿ ಮಾಡಿದೆ ಎಂದು ದೂರಿದರು.ನೆರೆ ರಾಜ್ಯ ತಮಿಳುನಾಡಿನಲ್ಲಿ ಶೇ.೫೯ ರಷ್ಟು, ಪಂಚಾಬ್‌ನಲ್ಲಿ ಶೇ.೫೬, ಹರಿಯಾಣದಲ್ಲಿ ಶೇ.೫೮ರಷ್ಟು ಮೀಸಲಾತಿಯಿದೆ. ಆದರೆ, ನಮ್ಮ ರಾಜದಲ್ಲಿ ಶೇ.೫೬ರಷ್ಟು ಮೀಸಲಾತಿ ಜಾರಿ ಮಾಡಲು ಏನು ಅಡ್ಡಿ ಎಂದು ಪ್ರಶ್ನಿಸಿದ ಅವರು, ೨೦೧೯ ಚುನಾವಣೆ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡದಿರುವುದೇ ಸೋಲಿಗೆ ಕಾರಣ ಎಂದು ಒಪ್ಪಿಕೊಂಡಿದ್ದೀರಿ. ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಮತ್ತೆ ಕಾಂಗ್ರೆಸ್‌ಗೆ ಶೋಷಿತ ಸಮುದಾಯಗಳು ತಕ್ಕ ಪಾಠ ಕಲಿಸಲಿವೆ. ಸದ್ಯದಲ್ಲಿ ನಡೆಯುವ ಉಪಚುನಾವಣೆಯಲ್ಲೂ ಕಾಂಗ್ರೆಸ್‌ನ್ನು ಸೋಲಿಸುವುದಾಗಿ ಎಚ್ಚರಿಸಿದರು.
ಗೋಷ್ಟಿಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ಪಾಪಯ್ಯ, ಶಿವಶರಣ ಮಾದರ ಚನ್ನಯ್ಯ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ, ನಾಗೇಂದ್ರ, ಪ್ರಸನ್ನ ಚಕ್ರವರ್ತಿ ಇತರರಿದ್ದರು. ಸಿದ್ದರಾಮಯ್ಯರಿಂದ ದಲಿತ ಸಮುದಾಯ ಒಡೆಯುವ ಹನ್ನಾರ: ವೆಂಕಟಗಿರಿಯಯ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಆಂಧ್ರ ಪ್ರದೇಶದಲ್ಲಿ ಒಳ ಮೀಸಲಾತಿಗಾಗಿ ಮಾಲ-ಮಾದಿಗರ ನಡುವಿನ ಸಂಘರ್ಷ ಅತಿರೇಖಕ್ಕೆ ತಿರುಗಿದೆ. ಒಬ್ಬರನ್ನೊಬ್ಬರು ಹೊಡೆದಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ನೀತಿ ಜಾರಿ ಹೋರಾಟ ನೆಪವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯವನ್ನು ವಂಚಿಸುವ ಹುನ್ನಾರ ರೂಪಿಸಿದ್ದಾರೆ. ದಲಿತರು ಒಂದಾದರೆ ದಲಿತ ಮುಖ್ಯಮಂತ್ರಿ ಆಗುವ ಅವಕಾಶವನ್ನು ತಪ್ಪಿಸುವ ಸಂಚು ಇದರ ಹಿಂದಿದೆ. ಆದ್ದರಿಂದ ಸಮುದಾಯದ ಎಲ್ಲ ಮುಖಂಡರು ಒಂದೆಡೆ ಕುಳಿತು ಪ್ರಬುದ್ಧತೆಯಿಂದ ಚರ್ಚಿಸಿ ತಮ್ಮ ಪಾಲನ್ನು ಸಮಾನವಾಗಿ ಹಂಚಿಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದರು.