ನಾಳೆ ರಾಜ್ಯಮಟ್ಟದ ಜೋಡು ಎತ್ತಿನ ತೆರ ಬಂಡಿ ಸ್ಪರ್ಧೆ

KannadaprabhaNewsNetwork |  
Published : Oct 09, 2024, 01:33 AM IST
ಜಾತ್ರಾ ಮಹೋತ್ಸವ ಬಿತ್ತಿ ಪತ್ರ ಬಿಡುಗಡೆಗೊಳಿಸಿದ ಗಣ್ಯರು. | Kannada Prabha

ಸಾರಾಂಶ

ದಸರಾ ಹಾಗೂ ಮರಗಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ಜಾತ್ರೆಯ (ಕಂಬಾರ ಓಣಿ)ನಿಮಿತ್ತ ನ್ಯೂ ಡೈಮಂಡ್ ಅಸೋಸಿಯೆಷನ್ ಸಂಯುಕ್ತ ಆಶ್ರಯದಲ್ಲಿ ಅ.೧೦ ರಂದು ಬೆಳಗ್ಗೆ ೯.೩೦ ಗಂಟೆಗೆ ರಾಜ್ಯಮಟ್ಟದ ಜೋಡು ಎತ್ತಿನ ತೆರ ಬಂಡಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಸವರಾಜ ಬೆಣ್ಣಿರೋಟ್ಟಿ ಹಾಗೂ ಹಿರಿಯರಾದ ಶ್ರೀಶೈಲ ದಳವಾಯಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ದಸರಾ ಹಾಗೂ ಮರಗಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ಜಾತ್ರೆಯ (ಕಂಬಾರ ಓಣಿ)ನಿಮಿತ್ತ ನ್ಯೂ ಡೈಮಂಡ್ ಅಸೋಸಿಯೆಷನ್ ಸಂಯುಕ್ತ ಆಶ್ರಯದಲ್ಲಿ ಅ.೧೦ ರಂದು ಬೆಳಗ್ಗೆ ೯.೩೦ ಗಂಟೆಗೆ ರಾಜ್ಯಮಟ್ಟದ ಜೋಡು ಎತ್ತಿನ ತೆರ ಬಂಡಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಸವರಾಜ ಬೆಣ್ಣಿರೋಟ್ಟಿ ಹಾಗೂ ಹಿರಿಯರಾದ ಶ್ರೀಶೈಲ ದಳವಾಯಿ ತಿಳಿಸಿದರು.ಇಲ್ಲಿನ ಪಟ್ಟಣ ಪಂಚಾಯತಿ ಪಕ್ಕದಲ್ಲಿನ ಮರಗಮ್ಮದೇವಿ ದೇವಸ್ಥಾನ ಸಭಾಭವನದಲ್ಲಿ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಳಗಿ ಪಟ್ಟಣದಲ್ಲಿ ಪ್ರಥಮ ಬಾರಿಗೆ ತೆರದ ಬಂಡಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಜಿಲ್ಲೆಗಳಿಂದ ಸುಮಾರು ೪೦ಕ್ಕೂ ಹೆಚ್ಚು ತೆರ ಬಂಡಿ ಬರಲಿದ್ದು, ಒಟ್ಟು 8 ಬಹುಮಾನಗಳನ್ನು ವಿತರಿಸಲಾಗುವುದು. ಪ್ರಥಮ ಬಹುಮಾನ ₹೪೦,೦೦೧, ದ್ವಿತೀಯ ಬಹುಮಾನ ₹೩೦,೦೦೧ ಸೇರಿದಂತೆ 8 ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಆಸಕ್ತರು ಸಮಿತಿಯ ಮೊ.೭೦೧೯೨೭೬೦೪೩, ೯೯೮೦೬೨೯೭೦೦ ನಂಬರ್‌ಗೆ ಸಂಪರ್ಕಿಸಿ. ಪ್ರತಿ ವರ್ಷದಂತೆ ದಸರಾ ಹಬ್ಬ ಹಾಗೂ ಜಾತ್ರಾ ಮಹೋತ್ಸವ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅ.೯ ರಂದು ಬೆಳಗ್ಗೆ ೧೦.೩೦ ಗಂಟೆಗೆ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವ ಸ್ಪರ್ಧೆ, ಗುಂಡುಕಲ್ಲು ಎತ್ತುವ ಸ್ಪರ್ಧೆ ಜತೆಗೆ ನಿತ್ಯ ಸಂಜೆ ೭.೩೦ ಗಂಟೆಗೆ ಪೂಜ್ಯರಿಂದ ಆಧ್ಯಾತ್ಮಿಕ ಪ್ರವಚನ, ಅನ್ನ ಪ್ರಸಾದ ನಡೆಯಲಿದೆ. ಅ.೧೧ ರಂದು ಬೆಳಗ್ಗೆ ೧೦.೩೦ ಗಂಟೆಗೆ ಕಂಬಾರ ಓಣಿಯ ಸುಮಂಗಲೆಯರಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅ.೧೨ ರಂದು ಬೆಳಗ್ಗೆಯಿಂದ ದೇವಿಗೆ ಪಂಚಾಮೃತ ಅಭಿಷೇಕ, ಅನ್ನ ಸಂತರ್ಪಣೆ, ಸಂಜೆ ಸಹಸ್ರ ದೀಪೋತ್ಸವ ಕಾರ್ಯಕ್ರಮ ಜರಲಿವೆ ಎಂದರು.ಈ ಸಂದರ್ಭದಲ್ಲಿ ಹಿರಿಯರಾದ ಶಿವಪ್ಪ ಅವಟಿ, ಎ.ಎಂ.ಸೋಲಾಪೂರ, ಬಸವರಾಜ ನಾಗನಗೌಡರ, ಉಮೇಶ ತೇಲಿ, ಸಿದ್ದು ಮಳಗಾಂವಿ, ಈರಯ್ಯ ವಸ್ತ್ರದ, ಸಂಗಪ್ಪ ಅವಟಿ, ಗಣಪತಿ ಬುಡ್ಡರ, ಶಿವು ಕುಂಬಾರ ಸೇರಿದಂತೆ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ