ಕನ್ನಡಪ್ರಭ ವಾರ್ತೆ ಹಳೇಬೀಡುಇಲ್ಲಿನ ಹೊಯ್ಸಳ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 2ನೇ ವರ್ಷದ ಹೊಯ್ಸಳ ಕಪ್- ೨೦೨೫ ರಾಜ್ಯಮಟ್ಟದ ಪುರುಷರ ಮುಕ್ತ ಖೋ-ಖೋ ಪಂದ್ಯಾವಳಿಯನ್ನು ಇದೇ ಅ.26ರಂದು ಇಲ್ಲಿನ ಕೆ.ಪಿ.ಎಸ್ ಶಾಲಾ ಆವರಣದಲ್ಲಿರುವ ದಿ. ಅನಂತರಾಮು ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ ಎಂದು ಕ್ಲಬ್‌ನ ಅಧ್ಯಕ್ಷರಾದ ಈಶ್ವರ್ ತಿಳಿಸಿದ್ದಾರೆ.
ಕ್ಲಬ್ ಕಾರ್ಯದರ್ಶಿ ಮಹೇಶ್ ಮಾತನಾಡುತ್ತ, ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಸೋಮಶೇಖರ ಶಿವಾಚಾರ್ಯರು ಮಹಾ ಸಂಸ್ಥಾನ ಪುಷ್ಪಗಿರಿ, ಉದ್ಘಾಟನೆಯನ್ನು ಜನಪ್ರಿಯ ಶಾಸಕ ಎಚ್.ಕೆ.ಸುರೇಶ್, ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು ವಹಿಸಲಿದ್ದು, ಈ ಕ್ರೀಡಾ ಕೂಟಕ್ಕೆ ಹೆಚ್ಚಿನ ಗ್ರಾಮಸ್ಥರು, ಕ್ರೀಡಾ ಅಭಿಮಾನಿಗಳು ಬಂದು ಪಂದ್ಯಾವಳಿ ನಡೆಬೇಕೆಂದು ಕೇಳಿಕೊಂಡಿದ್ದಾರೆ.* ಹೇಳಿಕೆ1
ಹಳೇಬೀಡಿನಲ್ಲಿ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿ ನಡೆಸುತ್ತಿರುವುದು ಸಂತೋಷದ ವಿಚಾರ. ಜೊತೆಗೆ ಹಿರಿಯ ಪತ್ರಕರ್ತ ದಿ. ಎಚ್.ಜಿ.ಅನಂತರಾಮ ಹೆಸರಲ್ಲಿ ಖೋ-ಖೋ ಪಂದ್ಯಾವಳಿಯ ಕ್ರೀಡಾಂಗಣ ಹೆಸರು ಇಟ್ಟಿರುವುದು ತುಂಬಾ ಸಂತೋಷ. ಅವರು ನಿಧನರಾಗಿ ಆರು ವರ್ಷಗಳಾದರೂ ಈ ಜನತೆ ಅವರ ಹೆಸರನ್ನು ಜ್ಞಾಪಕ ಇಟ್ಟುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಅವರ ಹೆಸರಿನಲ್ಲಿ ಕ್ರೀಡಾಂಗಣವನ್ನು ಉನ್ನತ ದರ್ಜೆಗೇರಿಸಲು ಕಾರ್ಯ ನೆರೆವೇರಿಸಿ. - ಸೋಮಶೇಖರ ಶಿವಾಚಾರ್ಯರು, ಪುಷ್ಪಗಿರಿ ಮಹಾಸಂಸ್ಥಾನ* ಹೇಳಿಕೆ2ಹಳೇಬೀಡಿನ ಹೊಯ್ಸಳ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದ್ವಿತೀಯ ವರ್ಷದ ಹೊಯ್ಸಳ ಕಪ್ ೨೦೨೫ ರಾಜ್ಯಮಟ್ಟದ ಪುರುಷರ ಮುಕ್ತ ಖೋ-ಖೋ ಪಂದ್ಯಾವಳಿ ನನ್ನ ಕ್ಷೇತ್ರದಲ್ಲಿ ನೆಡೆತ್ತಿರುವುದು ತುಂಬಾ ಸಂತೋಷ. ಪ್ರಥಮ ಹಂತದಲ್ಲಿ ನನಗೆ ಕ್ಷೇತ್ರದ ಹಲವಾರ ಯೋಜನೆಗಳ ವಿಚಾರ ಹಳೇಬೀಡಿನ ಅಭಿವೃದ್ದಿ ಬಗ್ಗೆ ಮಾಹಿತಿ ನೀಡುವ ಹಿರಿಯ ಪತ್ರಕರ್ತ. ಮುಂದಿನ ದಿನಗಳಲ್ಲಿ ನನ್ನ ಅನುದಾನದಲ್ಲಿ ಶಾಶ್ವತವಾಗಿ ಈ ಕ್ರೀಡಾಂಗಣಕ್ಕೆ ಸಹಕಾರ ನೀಡುತ್ತೇನೆ. - ಎಚ್.ಕೆ.ಸುರೇಶ್, ಬೇಲೂರು ಕ್ಷೇತ್ರ ಶಾಸಕ