- ಬೀರೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ರಚನಾತ್ಮಕ ಚಟುವಟಿಕೆ ಪ್ರೋತ್ಸಾಹಿಸಲು ಸಲಹೆ
ಕನ್ನಡಪ್ರಭ ವಾರ್ತೆ, ಬೀರೂರುಮಕ್ಕಳ ರಚನಾತ್ಮಕ ಚಟುವಟಿಕೆಗಳನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದರೆ ಕ್ರೀಯಾಶೀಲ ಮನಸ್ಸುಗಳು ಮೂಡಿ ಬರಲಿವೆ. ಗುಣಾತ್ಮಕ ಕಲಿಕೆಗೆ ಶಿಕ್ಷಣ ಇಲಾಖೆ ರೂಪಿಸಿರುವ ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದು ಪುರಸಭೆ ಅಧ್ಯಕ್ಷೆ ವನಿತಾಮಧು ಹೇಳಿದರು.ಪಟ್ಟಣದಲ್ಲಿ ಬುಧವಾರ ನಡೆದ ಬೀರೂರು ಶೈಕ್ಷಣಿಕ ವಲಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಗೌರವ ಭಾವನೆ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗುವಂತೆ ಮಾಡಬೇಕಿದೆ. ಕಲೆಗೆ ಬೆಲೆಕಟ್ಟಲಾಗದು. ನಿರ್ಣಾಯಕರ ನಿರ್ಣಯ ಮಕ್ಕಳ ಮನ್ನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರ ಬಾರದು.ಮಕ್ಕಳು ಗೆಲುವಿನಷ್ಟೆ ಸೋಲನ್ನು ಸಮನಾಗಿ ಸ್ವೀಕರಿಸಬೇಕು. ಸ್ವಾರ್ಥವಿಲ್ಲದೆ ಸೇವೆ ಸಲ್ಲಿಸುವ ಏಕೈಕ ಕ್ಷೇತ್ರ ಶಿಕ್ಷಣ ಕ್ಷೇತ್ರ, ಅದು ಮೌಲ್ಯಯುತ ಕ್ಷೇತ್ರವಾಗಿದ್ದು ಎಲ್ಲರಿಂದಲೂ ಗೌರವಕ್ಕೆ ಒಳಪಟ್ಟಿದೆ. ಕಷ್ಟಪಟ್ಟು ಓದಬೇಡಿ ಇಷ್ಟಪಟ್ಟು ಓದಿ ಸಾಧನೆ ಮಾಡಿದರೆ ಮಾತ್ರ ಗೆಲುವು ಸಾಧ್ಯ ಎಂದರು.
ಎಸ್.ಡಿಎಂ.ಸಿ ಅಧ್ಯಕ್ಷೆ ಶಭಾನ ಭಾನು ಮಾತನಾಡಿ, ವಿದ್ಯಾರ್ಥಿಗಳು ಪ್ರಯತ್ನ ಪೂರ್ವಕವಾಗಿ ಪ್ರತಿಭೆ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗುತ್ತಿದೆ. ಅದನ್ನು ದುರುಪಯೋಗದೇ ಹೆಚ್ಚಾಗಿದೆ. ಆದರೆ ಈ ಸೌಲಭ್ಯವನ್ನು ವಿದ್ಯಾಭ್ಯಾಸಕ್ಕೆ ಪೂರಕವಾಗಿ ಬಳಸಿದರೆ ಸಾಧನೆಗೆ ಸಹಕಾರಿ ಎಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ಮಕ್ಕಳ ಜ್ಞಾನವಿಕಾಸಕ್ಕೆ ಬೇಕಾದ ಹಲವು ಕಾರ್ಯಕ್ರಮ ರೂಪಿಸಿ ಶಿಕ್ಷಣ ಇಲಾಖೆ ತನ್ನ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸುತ್ತಿದೆ. ಕ್ಲಸ್ಟರ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಮಕ್ಕಳನ್ನು ವೇದಿಕೆ ಮೂಲಕ ಗುರುತಿಸುವ ಕಾರ್ಯಕ್ಕೆ ಪೋಷಕರು ಸಹಕಾರ ನೀಡಿ ಎಂದರು.ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ.ಜಗದೀಶ್ ಮಾತನಾಡಿ, ಶಿಕ್ಷಕರಿಗೆ ಮಕ್ಕಳೇ ಮಾಲೀಕರು. ಖಾಸಗಿ ಶಾಲೆಗಳ ಗದಾ ಪ್ರಹಾರಕ್ಕೆ ಸಿಲುಕಿ ಸರ್ಕಾರಿ ಶಾಲೆಗಳು ನಲುಗುತ್ತಿವೆ. ಆದ್ದರಿಂದ ಸರ್ಕಾರಿ ಶಾಲೆಗಳು ಸಬಲೀಕರಣವಾಗಬೇಕು. ಸರ್ಕಾರಿ ಶಾಲೆ ಮಕ್ಕಳಿಗೆ ಕ್ರಿಯಾತ್ಮಕ ಶಕ್ತಿ ಇದೆ. ಗ್ರಾಮೀಣ ಮಕ್ಕಳ ಶಿಕ್ಷಣೇತರ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ದೊರೆಯಬೇಕು ಎಂದರು. ಪಾಲಮ್ಮ ಶಾಲೆ ಮುಖ್ಯ ಶಿಕ್ಷಕ ಲೋಹಿತೇ ಶ್ ಮಾತನಾಡಿ, ಪ್ರತಿಭಾ ಕಾರಂಜಿಗೆ ಕ್ಲಸ್ಟರ್ ಮಟ್ಟದ 13 ಶಾಲೆಗಳು ಭಾಗವಹಿಸಿದ್ದು, ತೀರ್ಪುಗಾರರು ಹಂಸ ಕ್ಷೀರ ನ್ಯಾಯ ನೀಡಬೇಕೆಂದು ಮನವಿ ಮಾಡಿದರು.ಶಿಕ್ಷಕರ ಸಂಘದ ನಿರ್ದೇಶಕ ಮರುಳಸಿದ್ದಪ್ಪ,ಬಿಆರ್.ಸಿ ಶೇಖರಪ್ಪ, ಸಿ.ಆರ್.ಪಿ ಗಳಾದ ನಾಗರತ್ನ, ವೈಶಾಲಿ, ಅರುಣ, ಶಿಕ್ಷಕರಾದ ಪೂರ್ಣಿಮ, ಭಾರತಿ, ಶಕುಂತಲ, ಎನ್,ಡಿ.ಸೀತಾಲಕ್ಷ್ಮಿ ಸೇರಿದಂತೆ ಶಿಕ್ಷಕರ, ಮಕ್ಕಳು ಪಾಲ್ಗೊಂಡಿದ್ದರು.13 ಬೀರೂರು 1ಬೀರೂರಿನ ಶ್ರೀಪಾಲಮ್ಮ ಸಹಿಪ್ರಾ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಪುರಸಭೆ ಅಧ್ಯಕ್ಷೆ ವನಿತಾಮಧುಅವರನ್ನು ಶಿಕ್ಷಣ ಇಲಾಖೆಯಿಂದ ಗೌರವಿಸಲಾಯಿತು. ಜಿಲ್ಲಾ ಪ್ರಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ.ಜಗದೀಶ್, ಬಿಇಒ ರುದ್ರಪ್ಪ, ಮುಖ್ಯ ಶಿಕ್ಷಕ ಲೋಹಿತೇ ಶ್ ಸೇರಿದಂತೆ ಮತ್ತಿತರರು ಇದ್ದರು.