ರಾಜ್ಯ ಮಟ್ಟದ ಟೇಕ್ವಾಂಡೋ ಪಂದ್ಯಾವಳಿ ಸಂಪನ್ನ

KannadaprabhaNewsNetwork |  
Published : Feb 08, 2026, 03:15 AM IST
ಉಡುಪಿಯಲ್ಲಿ ರಾಜ್ಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿಯನ್ನು ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಕರ್ನಾಟಕ ಟೇಕ್ವಾಂಡೋ ಅಸೋಸಿಯೇಶನ್‌ ಮತ್ತು ಯಕ್ಷಿತ್ ಯುವ ಫೌಂಡೇಷನ್ ಅಶ್ರಯದಲ್ಲಿ ಉಡುಪಿ ಜಿಲ್ಲಾ ಟೆಕ್ವಾಂಡೋ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಸಬ್ ಜೂನಿಯರ್, ಕ್ಯಾಡೆಟ್, ಜೂನಿಯರ್ ಮತ್ತು ಸೀನಿಯರ್ ವಿಭಾಗದ ಎರಡನೇ ಆವೃತ್ತಿಯ ಕರಾವಳಿ ಟೇಕ್ವಾಂಡೋ ಚಾಂಪಿಯನ್ ಶಿಪ್- 2026ನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.

ಉಡುಪಿ: ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಕರ್ನಾಟಕ ಟೇಕ್ವಾಂಡೋ ಅಸೋಸಿಯೇಶನ್‌ ಮತ್ತು ಯಕ್ಷಿತ್ ಯುವ ಫೌಂಡೇಷನ್ ಅಶ್ರಯದಲ್ಲಿ ಉಡುಪಿ ಜಿಲ್ಲಾ ಟೆಕ್ವಾಂಡೋ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಸಬ್ ಜೂನಿಯರ್, ಕ್ಯಾಡೆಟ್, ಜೂನಿಯರ್ ಮತ್ತು ಸೀನಿಯರ್ ವಿಭಾಗದ ಎರಡನೇ ಆವೃತ್ತಿಯ ಕರಾವಳಿ ಟೇಕ್ವಾಂಡೋ ಚಾಂಪಿಯನ್ ಶಿಪ್- 2026ನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷೆ ರಮ್ಯಾ ವಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶಾರೀರಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಡಾ. ಜಗದೀಶ್ ಗಸ್ತಿ, ಓಪುಲಾ ಸಾಫ್ಟವೇರ್ ಸಿಇಓ ಸುಭಾಷ್ ಸಾಲ್ಯಾನ್, ಲಯನ್ಸ್ 317ಸಿ ಜಿಲ್ಲಾ ಮಾಜಿ ಗವರ್ನರ್ ಟಿಎಂಜೆಎಫ್ ಸುರೇಶ್ ಪ್ರಭು, ಪತ್ರಕರ್ತ ಸಂತೋಷ ನಾಯಕ್ ಅತಿಥಿಗಳಾಗಿ ಭಾಗವಹಿಸಿದ್ದರು.

ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಗೌರವಾಧ್ಯಕ್ಷ ವಾದಿರಾಜ ರಾವ್ ಮತ್ತು ಯಕ್ಷಿತ್ ಯುವ ಫೌಂಡೇಷನ್ ಅಧ್ಯಕ್ಷ ಇಂಟರ್ ನ್ಯಾಷನಲ್ ಐಕಾನ್ ಅರ್ವಾಡ್ ಪುರಸ್ಕೃತ ಶ್ರೀಪಾದ ಆರ್. ರಾವ್, ಕರ್ನಾಟಕ ಟೇಕ್ವಾಂಡೋ ಸಂಸ್ಥೆಯ ಉಪಾಧ್ಯಕ್ಷ ವಿಶ್ವಕರ್ಮ ಆಚಾರ್ಯ, ಉಡುಪಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಸಂಸ್ಥಾಪಕ ರಾಜಶೇಖರ ಕೆ.ಪಿ. ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 350ಕ್ಕಿಂತಲೂ ಹೆಚ್ಚಿನ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಅಕ್ಷಯ್ ಹೆಗಡೆ ಮತ್ತು ಗೀತಾ ವಾದಿರಾಜ ರಾವ್ ಕಾರ್‍ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು