ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕುಂಬಾರಗಡಿಗೆಯ ಮೃತಳ ಮನೆಗೆ ತೆರಳಿದ ಅವರು, ಮೀನಾಳ ಪೋಷಕರಾದ ಸುಬ್ರಮಣಿ ಹಾಗೂ ಜಾನಕಿ ಅವರಿಗೆ ವೈಯುಕ್ತಿಕವಾಗಿ ಸಹಾಯ ಹಸ್ತ ಚಾಚಿದರು.
ಇಂತಹ ಪೈಶಾಚಿಕ ಕೃತ್ಯ ಎಸಗಿದ ಆರೋಪಿಗೆ ತಕ್ಕ ಶಿಕ್ಷೆಯಾಗಲೇಬೇಕು. ಮುಂದೆ ಇಂತಹ ಕೃತ್ಯಗಳು ಎಲ್ಲೂ ನಡೆಯಬಾರದು ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭ ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪವಲ್ಲಿ ಉಪಸ್ಥಿತರಿದ್ದರು.----------------
ಮೊಬೈಲ್ ಪತ್ತೆ ಹಚ್ಚಿದ ಸೈಬರ್ ಅಪರಾಧ ಠಾಣೆ ಪೊಲೀಸರುಮಡಿಕೇರಿ: ಆಟೋರಿಕ್ಷಾದಲ್ಲಿ ಕಳೆದು ಹೋಗಿದ್ದ ಮೊಬೈಲ್ ಫೋನ್ ನ್ನು ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಎರಡು ತಿಂಗಳ ಹಿಂದೆ ಮಡಿಕೇರಿ ಮಾರುಕಟ್ಟೆ ವ್ಯಾಪಾರಿ ಎಂ.ಎ.ರಜಾ಼ಕ್ ಅವರು ಶ್ರೀ ರಾಜರಾಜೇಶ್ವರಿ ನಗರದ ರಸ್ತೆಯಲ್ಲಿ ಆಟೋರಿಕ್ಷಾವೊಂದರಲ್ಲಿ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ಈ ಬಗ್ಗೆ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎರಡು ತಿಂಗಳ ತನಿಖೆಯ ನಂತರ ಮೊಬೈಲ್ ಫೋನ್ ಪತ್ತೆಯಾಗಿದ್ದು, ಠಾಣಾಧಿಕಾರಿ ಶ್ರೀಕಾಂತ್ ಅವರು ಶನಿವಾರ ಎಂ.ಎ.ರಜಾ಼ಕ್ ಅವರಿಗೆ ಹಸ್ತಾಂತರಿಸಿದರು.ಪೊಲೀಸರ ಕಾರ್ಯದಕ್ಷತೆಯ ಬಗ್ಗೆ ರಜಾ಼ಕ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೈಬರ್ ಅಪರಾಧ ಠಾಣೆಯ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.