ರಾಜ್ಯದ ಮಕ್ಕಳು ಎನ್‌ಇಪಿ ಶಿಕ್ಷಣದಿಂದ ವಂಚಿತ-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Dec 28, 2025, 03:30 AM IST
27ಹಾವೇರಿ-5ಹಾನಗಲ್ಲ ತಾಲೂಕಿನ ಮಹಾರಾಜಪೇಟೆ ಗ್ರಾಮದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ ನವೋತ್ಸವ- 2025 ಕಾರ್ಯಕ್ರಮದ ನಿಮಿತ್ತ ವಿದ್ಯಾಲಯದ ಆವರಣದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಸಸಿ ನೆಟ್ಟರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ಭವಿಷ್ಯಕ್ಕಾಗಿ, ವಿಕಸಿತ ಭಾರತಕ್ಕಾಗಿ ದೂರದೃಷ್ಟಿ ಇಟ್ಟುಕೊಂಡು ಎನ್‌ಇಪಿ ಜಾರಿಗೆ ತಂದಿದ್ದಾರೆ. ಯಾವ ರಾಜ್ಯದಲ್ಲಿ ಎನ್‌ಇಪಿ ಜಾರಿಯಲ್ಲಿದೆಯೋ ಆ ರಾಜ್ಯದಲ್ಲಿ ಶಿಕ್ಷಣ ಮಟ್ಟ ಎತ್ತರಕ್ಕೆ ಹೋಗುತ್ತದೆ. ದುರ್ದೈವ ಕರ್ನಾಟಕದ ಶಾಲೆಗಳಲ್ಲಿ ಎನ್‌ಇಪಿ ಜಾರಿಯಿಲ್ಲದಿರುವುದರಿಂದ ರಾಜ್ಯದ ಮಕ್ಕಳು ವಂಚಿತರಾಗಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಹಾನಗಲ್: ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ಭವಿಷ್ಯಕ್ಕಾಗಿ, ವಿಕಸಿತ ಭಾರತಕ್ಕಾಗಿ ದೂರದೃಷ್ಟಿ ಇಟ್ಟುಕೊಂಡು ಎನ್‌ಇಪಿ ಜಾರಿಗೆ ತಂದಿದ್ದಾರೆ. ಯಾವ ರಾಜ್ಯದಲ್ಲಿ ಎನ್‌ಇಪಿ ಜಾರಿಯಲ್ಲಿದೆಯೋ ಆ ರಾಜ್ಯದಲ್ಲಿ ಶಿಕ್ಷಣ ಮಟ್ಟ ಎತ್ತರಕ್ಕೆ ಹೋಗುತ್ತದೆ. ದುರ್ದೈವ ಕರ್ನಾಟಕದ ಶಾಲೆಗಳಲ್ಲಿ ಎನ್‌ಇಪಿ ಜಾರಿಯಿಲ್ಲದಿರುವುದರಿಂದ ರಾಜ್ಯದ ಮಕ್ಕಳು ವಂಚಿತರಾಗಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.ಜಿಲ್ಲೆಯ ಹಾನಗಲ್ಲ ತಾಲೂಕಿನ ಮಹಾರಾಜಪೇಟೆ ಗ್ರಾಮದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ ನವೋತ್ಸವ - 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿ ಹೊಸ ಶಿಕ್ಷಣ ನೀತಿ ಅಳವಡಿಸಿಕೊಂಡಿದ್ದೀರಿ, ಇದರಿಂದ ಮಕ್ಕಳು ವಿವಿಧ ಆಯಾಮದಲ್ಲಿ ಶಿಕ್ಷಣ ಪಡೆಯಬಹುದು. ದೇಶದಲ್ಲಿ ಇದನ್ನು ಜಾರಿಗೆ ತಂದ ಮೊದಲ ಮುಖ್ಯಮಂತ್ರಿ ನಾನು ಎಂದರು.ವಿದ್ಯಾರ್ಥಿ ಜೀವನ ಅತ್ಯಂತ ಸುಂದರವಾಗಿರುವ ಜೀವನ. ಎಲ್ಲರ ಜೀವನದಲ್ಲಿ ಇದೊಂದು ಸುವರ್ಣ ಯುಗ. ನಾವು ವಿದ್ಯಾರ್ಥಿಗಳಿದ್ದಾಗ ಯಾವಾಗ ಕಾಲೇಜು ಮುಗಿಯುತ್ತದೆ ಅಂದುಕೊಳ್ಳುತ್ತಿದ್ದೇವು. ಈಗ ನಿಮ್ಮನ್ನೆಲ್ಲಾ ನೋಡಿದಾಗ ನಾನೂ ವಿದ್ಯಾರ್ಥಿ ಆಗಬೇಕು ಅನಿಸುತ್ತದೆ. ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎನಿಸುತ್ತದೆ. ನವೋದಯ ಶಾಲೆಯ ವಿದ್ಯಾರ್ಥಿಗಳಾಗಿ ನೀವು ಅದೃಷ್ಟವಂತರು, ನಿಮಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ, ಕೆರಿಯರ್ ಗೈಡನ್ ಸಿಗುತ್ತದೆ. ನಿಮಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿ ಶಿಕ್ಷಣ ಕೊಡುವ ವ್ಯವಸ್ಥೆ ಎಲ್ಲಿಯೂ ಇಲ್ಲ. ಇಲ್ಲಿರುವ ಎಲ್ಲ ವಿದ್ಯಾರ್ಥಿಗಳು ಅದೃಷ್ಟವಂತರು. ಈ ಶಾಲೆಗಳು ನವ ಭಾರತದ ಶಿಲ್ಪಿಗಳನ್ನು ತಯಾರು ಮಾಡುವಂತಹ ನವೋದಯ ಶಾಲೆಗಳು ಎಂದು ಹೇಳಿದರು.ಪ್ರತಿಭೆ ಎಲ್ಲಿ ಬೇಕಾದರೂ ಹುಟ್ಟುತ್ತದೆ. ಕೇವಲ ಶ್ರೀಮಂತರ ಮನೆಯಲ್ಲಿ ಹುಟ್ಟಬೇಕಂತಿಲ್ಲ. ಜ್ಞಾನ ದೇವರ ಆಶೀರ್ವಾದ, ಗ್ರಾಮೀಣ ಪ್ರದೇಶದಲ್ಲಿ, ಬಡವರ ಮನೆಯಲ್ಲಿ, ಕೂಲಿಕಾರರ ಮನೆಯಲ್ಲಿ ವೈದ್ಯರ ಮನೆಯಲ್ಲಿ ಎಲ್ಲಿ ಬೇಕಾದರೂ ಹುಟ್ಟಬಹುದು. ಆ ಬುದ್ಧಿಶಕ್ತಿಗೆ ಸರಿಯಾದ ಜ್ಞಾನ ಮಕ್ಕಳಿಗೆ ಕೊಟ್ಟರೆ ನಮ್ಮ ಭಾರತದ ಮಕ್ಕಳು ಇಡೀ ಜಗತ್ತನ್ನು ಗೆಲ್ಲಬಹುದು. ನಾನು ಅಮೆರಿಕದ ಶಾಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ನಾವೆಲ್ಲ ಅಮೆರಿಕಾ ಬಹಳ ಅಡ್ವಾನ್ಸ್ ಇದೆ ಅಂತ ತಿಳಿದುಕೊಂಡಿದ್ದೇವೆ. ಅಮೆರಿಕಾದ ನಾಸಾದಲ್ಲಿ ಶೇ. 30ಕ್ಕಿಂತ ಹೆಚ್ಚು ಭಾರತೀಯ ವಿಜ್ಞಾನಿಗಳಿದ್ದಾರೆ. ಅಮೆರಿಕಾದ ಶಾಲೆಗಳಲ್ಲಿ ಆರನೇ ತರಗತಿಯಲ್ಲಿ ಭಾಗಿಸುವುದು, ಗುಣಿಸುವುದನ್ನು ಕಲಿಸುತ್ತಾರೆ. ನಮ್ಮ ವಿದ್ಯಾರ್ಥಿಗಳು ಎರಡನೇ ಕ್ಲಾಸಿನಲ್ಲಿಯೇ ಕಲಿತಿರುತ್ತಾರೆ. ನಮ್ಮ ವಿದ್ಯಾರ್ಥಿಗಳ ಐಕ್ಯೂ ಲೇವಲ್ ಜಾಸ್ತಿ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಕುರಿಯನ್ ಥಾಮಸ್, ನಿವೃತ್ತ ಪ್ರಾಚಾರ್ಯರಾದ ವಿಜಯ ಕೃಷ್ಣನ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ