ಭಟ್ಕಳ: ಹಿಂದೂ ಸಮಾಜವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ. ಬಾಂಗ್ಲಾದ ಹಿಂದೂ ಸಮಾಜದ ರಕ್ಷಣೆಗೆ ಭಾರತದ ಹಿಂದೂಗಳು ನಿರಂತರ ಬೆಂಬಲ ಸೂಚಿಸಬೇಕು. ಬಾಂಗ್ಲಾದಲ್ಲಿ ಹಿಂದೂಗಳ ಪರಿಸ್ಥಿತಿ ಆದಂತೆ ಭಾರತದಲ್ಲಿ ಎಂದಿಗೂ ಆಗಲು ಬಿಡಬಾರದು ಎಂದು ಮಂಗಳೂರು ಗುರುಪುರದ ವಜ್ರದೇಹಿ ಸಂಸ್ಥಾನದ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದರು.
ಬಾಂಗ್ಲಾದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣ ನಡೆಯುತ್ತಿದೆ. ಹೊಸ ಅಧ್ಯಕ್ಷ ಅಧಿಕಾರ ವಹಿಸಿಕೊಂಡ ನಂತರ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಶಾಂತಿಮಂತ್ರ ಹೇಳಿದ, ಊಟ ಹಾಕಿದ ಇಸ್ಕಾನ್ ಮುಖ್ಯಸ್ಥರನ್ನೇ ಬಾಂಗ್ಲಾದಲ್ಲಿ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಿ ಬಂಧಿಸಲಾಗಿದೆ.
ಜೈಲಿನಲ್ಲಿದ್ದ ಉಗ್ರಗಾಮಿ ಸಂಘಟನೆಯ ವ್ಯಕ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಭಾರತ ಎಲ್ಲವನ್ನೂ ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದು, ಹಿಂದೂಗಳ ಮೇಲೆ ಬಾಂಗ್ಲಾದಲ್ಲಿ ದೌರ್ಜನ್ಯ ಅತಿರೇಕಕ್ಕೆ ಹೋದರೆ ಭಾರತ ಖಂಡಿತ ಸುಮ್ಮನಿರುವುದಿಲ್ಲ. ದೌರ್ಜನ್ಯ ನಡೆಸುವ ಅಲ್ಲಿನ ಜನರಿಗೆ ಮತ್ತು ಸರ್ಕಾರಕ್ಕೆ ಪಾಠ ಕಲಿಸದೇ ಬಿಡುವುದಿಲ್ಲ ಎಂದ ಸ್ವಾಮೀಜಿ, ಹಿಂದೂಗಳು ಒಗ್ಗಟ್ಟಾಗಿ ಸದೃಢರಾಗಬೇಕು. ಭಾರತದಲ್ಲಿ ನಾವು ಎಂದಿಗೂ ಅಲ್ಪಸಂಖ್ಯಾತರಾಗಬಾರದು.ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಕಾರ್ಕಳದ ಶ್ರೀಕಾಂತ ಶೆಟ್ಟಿ ಮಾತನಾಡಿ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಅತ್ಯಾಚಾರ, ಕೊಲೆ, ಸುಲಿಗೆ,ದೌರ್ಜನ್ಯ ನಡೆಯುತ್ತಿದ್ದರೂ ಮಾನವ ಹಕ್ಕು ಸಂಘಟನೆಗಳು, ಸೆಲೆಬ್ರೆಟಿಗಳು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಹಿಂದೂ ಸಂಘಟನೆಗಳು ಮಾತ್ರ ಖಂಡಿಸುತ್ತಿವೆ. ಅಲ್ಲಿನ ಹಿಂದೂಗಳಿಗೆ ಪ್ರತ್ಯೇಕ ದೇಶಕ್ಕೆ ಒತ್ತಾಯಿಸಬೇಕು ಎಂದರು.