ವಸತಿ ನಿಲಯದಲ್ಲಿ ವಾಸ್ತವ್ಯ ಹೊಸ ಪ್ರಯೋಗ

KannadaprabhaNewsNetwork |  
Published : Sep 14, 2025, 01:06 AM IST
ಮಹೇಶ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ವಸತಿ ನಿಲಯದ ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣ ಬೆಳೆಸುವ ಮತ್ತು ಸೌಲಭ್ಯಗಳ ಪ್ರಾಯೋಗಿಕ ಪರಿಶೀಲನೆ ನಡೆಸುವ ಅವಕಾಶವನ್ನು ವಸತಿ ನಿಲಯದಲ್ಲಿ ಅಧಿಕಾರಿಗಳ ವಾಸ್ತವ್ಯ ಒದಗಿಸುತ್ತದೆ. ಇದು ಸಮಾಜ ಕಲ್ಯಾಣ ಇಲಾಖೆಯ ವಿನೂತನ ವ್ಯವಸ್ಥೆಯಾಗಿದ್ದು, ಕುಂದು ಕೊರತೆ ಸರಿಪಡಿಸಲು ಅವಕಾಶ ಕಲ್ಪಿಸುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ವಸತಿ ನಿಲಯದ ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣ ಬೆಳೆಸುವ ಮತ್ತು ಸೌಲಭ್ಯಗಳ ಪ್ರಾಯೋಗಿಕ ಪರಿಶೀಲನೆ ನಡೆಸುವ ಅವಕಾಶವನ್ನು ವಸತಿ ನಿಲಯದಲ್ಲಿ ಅಧಿಕಾರಿಗಳ ವಾಸ್ತವ್ಯ ಒದಗಿಸುತ್ತದೆ. ಇದು ಸಮಾಜ ಕಲ್ಯಾಣ ಇಲಾಖೆಯ ವಿನೂತನ ವ್ಯವಸ್ಥೆಯಾಗಿದ್ದು, ಕುಂದು ಕೊರತೆ ಸರಿಪಡಿಸಲು ಅವಕಾಶ ಕಲ್ಪಿಸುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಹೇಳಿದರು.

ತಾಲೂಕಿನ ಹಿಟ್ನಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ವಸತಿ ನಿಲಯದಲ್ಲಿ ಅಧಿಕಾರಿಗಳ ವಾಸ್ತವ್ಯ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇದು ವಿನೂತನ ಕಾರ್ಯಕ್ರಮ. ನಿಲಯದ ಮಕ್ಕಳಲ್ಲಿ ಧೈರ್ಯ ತುಂಬಲು, ಮೊಬೈಲ್ ದಾಸರಾಗದೆ, ಸ್ಪರ್ಧಾ ಮನೋಭಾವ ಬೆಳೆಸಲು ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಲು ಈ ಯೋಜನೆ ಮಹತ್ವದ್ದಾಗಿದೆ. ಮಕ್ಕಳೊಂದಿಗೆ ವಾಸ್ತವ್ಯ ನಡೆಸಿದರೆ ಅವರ ಸಮಸ್ಯೆಗಳನ್ನು ಅರಿತು ಪರಿಹಾರ ಸುಲಭವಾಗಲಿದೆ ಎನ್ನುವುದು ಉದ್ದೇಶ ಎಂದು ಹೇಳಿದರು.ಶಿಕ್ಷಕ ಹಾಗೂ ಸಾಹಿತಿ ರೇವಣಸಿದ್ದಪ್ಪ ಪಟ್ಟಣಶೆಟ್ಟಿ ಮಾತನಾಡಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಶಿಸ್ತಿನ ಜೊತೆ ಓದುವುದು ಗುರಿಯಾಗಿರಬೇಕು. ಇಲಾಖೆ ಕೊಡುವ ಸೌಲಭ್ಯಗಳನ್ನು ಬಳಸಿಕೊಂಡು ಸಾಧನೆ ಮಾಡಿ ತೋರಿಸಬೇಕು. ಸಿದ್ದೇಶ್ವರ ಸ್ವಾಮೀಜಿಗಳ ಮತ್ತು ಮಹನೀಯರು ಆದರ್ಶ ಅಳವಡಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದು ತಿಳಿಸಿದರು.ಅಧ್ಯಕ್ಷತೆಯನ್ನು ಸಿಂದಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ ವಹಿಸಿದ್ದರು. ಶುಕ್ರವಾರ ಸಂಜೆ ವಸತಿ ನಿಲಯದಲ್ಲಿಯೇ ವಾಸ್ತವ್ಯ ಮಾಡಿದ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಅಲ್ಪೋಪಹಾರ, ಊಟ ಸೇವಿಸಿದರು. ವೇದಿಕೆ ಕಾರ್ಯಕ್ರಮದ ಮೂಲಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಗುಣಮಟ್ಟ ಹೆಚ್ಚಿಸುವ ಮಾರ್ಗದರ್ಶನ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನಿಸಿದರು. ಶನಿವಾರ ವಿದ್ಯಾರ್ಥಿಗಳೊಂದಿಗೆ ಯೋಗ ಮಾಡುವ ಮೂಲಕ ದಿನ ಆರಂಭವಾಯಿತು. ಬಳಿಕ, ಶ್ರಮದಾನ ನಡೆಸಲಾಯಿತು.ಈ ವೇಳೆ ಜಗದಂಬ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ಚವ್ಹಾಣ, ಮಾಜಿ ತಾಪಂ ಅಧ್ಯಕ್ಷೆ ಲಲಿತಾ ದೊಡಮನಿ, ಕೆ.ಎಲ್.ಪೂಜಾರಿ, ನೋಡಲ್ ಅಧಿಕಾರಿ ಬಿ.ಎಸ್.ಕಾಮಗೊಂಡ, ವಾರ್ಡನ್‌ಗಳಾದ ಹಣಮಂತ ಲಾತೂರ, ಸರ್ವೇಶ್ ಆಲಮೇಲ, ಎನ್.ಎಂ.ದಫೇದಾರ್, ಮಾಯಪ್ಪ ಮಾದರ, ಎಲ್.ಬಿ.ಶೇಖ, ಕೆ.ಎ. ತಳವಾರ, ಎಂ.ಎ.ಬಗಲಿ,ಎಂ.ಎಸ್.ಹೂಗಾರ, ಪ್ರಭುಗೌಡ ಬಿರಾದಾರ, ಅಜರುದ್ದೀನ ಮುಲ್ಲಾ, ಅನೀಲ ಮೊಕಾಸಿ, ಎಂ.ಎಂ.ಬಿರಾದಾರ, ಆರ್.ಎಸ್.ಬನ್ನೆಟ್ಟಿ, ಪೂಜಾ ನಿಕ್ಕಂ, ರೇಖಾ ಹತ್ತರಕಿಹಾಳ, ಎಸ್.ಎ.ಇನಾಮದಾರ, ಪಲ್ಲವಿ ದೊಡಮನಿ, ರುದ್ರಗೌಡ ಪಾಟೀಲ, ಪ್ರಮೀಳಾ ಕೋರೆ ಸೇರಿ ಹಲವರು ಹಾಜರಿದ್ದರು

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ