ಮೇಲುಕೋಟೆ:
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ದರ್ಶನ್ ಪುಟ್ಟಣ್ಣಯ್ಯರ ಮೂಲಕ ಈಗಾಗಲೇ ಹಲವು ಭಕ್ತಸ್ನೇಹಿ ಕೆಲಸ ಮಾಡಿದ ಮೆಡಿಮಿಕ್ಸ್ ಕಂಪನಿ ಪರವಾಗಿ ಹಾಜರಿದ್ದ ಹಿರಿಯ ವ್ಯವಸ್ಥಾಪಕ ಸರವಣನ್ ಸ್ಟೀಲ್ ಬ್ಯಾರಕೇಡ್‌ಗಳನ್ನು ಸಾಂಕೇತಿಕವಾಗಿ ಹಸ್ತಾಂತರ ಮಾಡಿದರು.
ಮೆಡಿಮಿಕ್ಸ್ ಕಂಪನಿ ಸಿಆರ್ ಎಸ್ ಚಟುವಟಿಕೆ ಮೂಲಕ ದೇವಾಲಯದ ಮುಂಭಾಗ ಸರದಿ ಸಾಲು ನಿರ್ವಹಿಸಲು ಸ್ಟೀಲ್ ಬ್ಯಾರಕೇಡ್ ಸ್ಯಾರಿ ಸ್ಟಾಂಡ್ ದೇವಾಲಯದ ನಾಮಫಲಕಗಳು ಕಲ್ಯಾಣಿಯ ಬಳಿ ಮಹಿಳಾ ಭಕ್ತರು ಸ್ನಾನಮಾಡಿ ಬಟ್ಟೆ ಬದಲಿಸುವ 6 ಕ್ಯಾಬಿನ್, ಯೋಗಾನರಸಿಂಹಸ್ವಾಮಿ ಬೆಟ್ಟದ ಲಾಡುಕೌಂಟರ್ ಸುತ್ತಲು ಗುಡಿಗಳ ನಾಮಫಲಕಗಳು ಸೇರಿದಂತೆ 10 ಲಕ್ಷರೂ ವೆಚ್ಚದಲ್ಲಿ ಭಕ್ತಸ್ನೇಹಿ ಕಾರ್ಯಗಳನ್ನು ಮಾಡಿದ್ದೇವೆ. ಮತ್ತಷ್ಟು ಸಾರ್ವಜನಿಕ ಕಾರ್ಯಗಳನ್ನು ಮಾಡಲು ಯೋಜಿಸಿದ್ದೇವೆ ಎಂದು ಮೆಡಿಮಿಕ್ಸ್ ಕಂಪನಿಯ ವ್ಯವಸ್ಥಾಪಕ ಶರವಣನ್ ಮಾಹಿತಿ ನೀಡಿದರು.ಈ ವೇಳೆ ಸಚಿವರ ಧರ್ಮಪತ್ನಿ ಧನಲಕ್ಷ್ಮಿಚೆಲುವರಾಯಸ್ವಾಮಿ, ಪಾಂಡವಪುರ ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಶ್ರೀನಿವಾಸ್, ಇಒ, ತಹಸೀಲ್ದಾರ್ ಬಸವರೆಡ್ಡಪ್ಪ ದೇವಾಲಯದ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಮೈಸೂರು ಮೂಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್, ಹೈಕೋರ್ಟ್ ವಕೀಲ ಕಾಡೇನಹಳ್ಳಿ ಸತೀಶ್, ಇತಿಹಾಸ ತಜ್ಞ ಪ್ರೊ. ಶಲ್ವಪ್ಪಿಳ್ಳೆ ಅಯ್ಯಂಗಾರ್, ಹೊನ್ನಾವರ ರಾಜಗೋಪಾಲ್, ಸ್ಥಾನೀಕಂ ಸಂತಾನರಾಮನ್ ಸೇರಿದಂತೆ ಇತರ ಗಣ್ಯರು ಇದ್ದರು.
ಕಿಡಿಗೇಡಿಗಳಿಂದ ಬಾಳೆಗಿಡ ಧ್ವಂಸ
ಕಿಕ್ಕೇರಿ: ಜಮೀನಿನಲ್ಲಿ ರೈತ ಬೆಳೆದಿದ್ದ ಬಾಳೆ, ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ನಾಶ ಮಾಡಿರುವ ಘಟನೆ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ನಡೆದಿದೆ.ರೈತ ರವಿ ಅವರಿಗೆ ಸೇರಿದ ಬಾಳೆ ಗಿಡವನ್ನು ಕಿಡಿಗೇಡಿಗಳು ದ್ವಂಸ ಮಾಡಿದ್ದಾರೆ. ಈ ಕೃತ್ಯಕ್ಕೆ ವೈಯಕ್ತಿಕ ದ್ವೇಷವೇ ಕಾರಣ ಎನ್ನಲಾಗಿದೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ರವಿ ತೋಟದಲ್ಲಿದ್ದ ಫಲ ಬಿಡುತ್ತಿದ್ದ 500 ಬಾಳೆಗಿಡ ಹಾಗೂ ಅಡಿಕೆ ಗಿಡಗಳನ್ನು ಕಡಿದು ಧ್ವಂಸ ಮಾಡಿದ್ದಾರೆ. ಜಮೀನಿಗೆ ನೀರು ಹಾಯಿಸಲು ಬಳಸಿಕೊಳ್ಳುತ್ತಿದ್ದ ಗೇಟ್ ವಾಲ್ವ್‌ಗಳನ್ನು ಕೂಡಹಾಳು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳಲು ನಷ್ಟಕ್ಕೊಳಗಾದ ರೈತರವಿ ಕಿಕ್ಕೇರಿ ಪೊಲೀಸರಲ್ಲಿ ದೂರು ನೀಡಿದ್ದಾರೆ.