ಮುಂದೊಂದು ದಿನ ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ಮೇಲೆ ಬರುವೆ : ಮಾಜಿ ಸಂಸದ ಪ್ರತಾಪ್ ಸಿಂಹ

KannadaprabhaNewsNetwork |  
Published : Jan 06, 2025, 01:04 AM ISTUpdated : Jan 06, 2025, 04:52 AM IST
ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. | Kannada Prabha

ಸಾರಾಂಶ

  ಕೆಲವರು ನನ್ನ ಕಾಲೆಳೆದರು, ಮುಂದೊಂದು ದಿನ ನನ್ನ ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ಮೇಲೆ ಬರುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

  ಕೊಳ್ಳೇಗಾಲ : ಕೇಂದ್ರ ಸಚಿವ ವಿ. ಸೋಮಣ್ಣ ನನ್ನ ಹಿರಿಯಣ್ಣ ಇದ್ದಂತೆ. ಅವರ ಬಗ್ಗೆ ವಿಶ್ವಾಸವಿದೆ. ಅವರು ನನ್ನ ಕೈಹಿಡಿದು ಬೆಳೆಸಿದವರು. ನಾನು ಮೈಸೂರು ಜಿಲ್ಲೆ ಸಮಗ್ರ ಅಭಿವೖದ್ಧಿಗೆ ಸ್ಪಂದಿಸಿದೆ, ಆದರೆ ಕೆಲವರು ನನ್ನ ಕಾಲೆಳೆದರು, ಮುಂದೊಂದು ದಿನ ನನ್ನ ಕಾಲೆಳೆದವರ ತಲೆ ಮೇಲೆ ಕಾಲಿಟ್ಟು ಮೇಲೆ ಬರುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಪಟ್ಟಣದಲ್ಲಿ ದೇವಾಂಗ ಸಮಾಜ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ನಾನು ಹೊಟೇಲ್‌ಗಳಿಗೆ ಹಾಲು ಹಾಕಿ ಬೆಳೆದು ಜರ್ನಲಿಸಂ ಮಾಡಿದ ರೈತನ ಮಗ. ಸಂಸದನಾದ ಬಳಿಕ ಮೈಸೂರಿನಲ್ಲಿ ಅಭಿವೖದ್ಧಿಗೆ ಮಾತ್ರ ಆದ್ಯತೆ ನೀಡಿದೆ. ಗುತ್ತಿಗೆದಾರರ ಕಮಿಷನ್‌ಗೆ ಕೈ ಚಾಚಲಿಲ್ಲ. ಆದರೆ ಕೆಲವರು ಕಾಲೆಳೆಯುವವರಿಂದ ನನಗೆ ಹಿನ್ನೆಡೆಯಾಗಿದೆ. ಮುಂದೆ ಒಂದು ದಿನ ಕಾಲೆಳೆದವರು ತಲೆ ಮೇಲೆ ಕಾಲಿಟ್ಟು ಮುಂದೆ ಬರುವೆ, ಆ ಕಾಲ ಬಂದೆ ಬರುತ್ತದೆ ಎಂದರು.

 ಅಧಿಕಾರ ಇರಲಿ ಇಲ್ಲದಿರಲಿ ನಿಮ್ಮ ಜೊತೆಗಿರುವೆ, ಪ್ರತಿಭಾ ಪುರಸ್ಕಾರ ನೀಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಇದು ನಿರಂತರವಾಗಿ ಸಾಗಲಿ. ನಾನು ಮೈಸೂರಿಗೆ ಬಂದಾಗ ಹಣ, ಗಂಟು ತಂದಿರಲಿಲ್ಲ. ಆ ಜನ ನನ್ನ ಕೈಹಿಡಿದು ಬೆಳೆಸಿದರು. ಈ ಹಿನ್ನೆಲೆ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ಅದೊಂದು ದಾಖಲೆ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಅದನ್ನು ಉದ್ಘಾಟಣೆ ಮಾಡಿಸಿದೆ ಎಂದರು.

ಜಿಲ್ಲಾಭಿವೖದ್ಧಿಗಾಗಿ ಸಂಪರ್ಕವನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಕನಕಪುರ ಮಾರ್ಗ ಬೈಪಾಸ್ ಮಾಡಿದರೆ 70 ಕಿ.ಮೀ ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸಲಾಗಿತ್ತು. ಮೈಸೂರು ವಿಮಾನ ನಿಲ್ದಾಣ ಅಭಿವೖದ್ಧಿಗೆ ಕೇಂದ್ರದಿಂದ ಹಣ ತಂದಿದ್ದೇನೆ ಎಂದರು.

ಚಾಮರಾಜನಗರ ಜಿಲ್ಲಾ ಅಭಿವೖದ್ಧಿಗೆ ಹೆಚ್ಚು ಒತ್ತು ನೀಡಲು ಶ್ರಮಿಸುವೆ. ಮೈಸೂರು ಜಿಲ್ಲೆ ವೇಗವಾಗಿ ಅಭಿವೖದ್ಧಿಯಾಗಿದೆ. ಹಿಂದುಳಿದ ಜನರೇ ಹೆಚ್ಚು ಇರುವ ಚಾಮರಾಜನಗರ ಜಿಲ್ಲೆ ಬಹುಬೇಗ ಮುಂದುವರೆದ ಜಿಲ್ಲೆಯಾಗಬೇಕು, ಸರ್ಕಾರಗಳು ಮುಂದಿನ ದಿನಗಳಲ್ಲಾದರೂ ಈ ಜಿಲ್ಲೆ ಸಮಗ್ರ ಅಭಿವೖದ್ಧಿಗೆ ಮುಂದಾಗಬೇಕು ಎಂದು ಹೇಳಿದರು.

ಮಾಜಿ ಶಾಸಕ ಎಸ್.ಬಾಲರಾಜು, ತಹಸೀಲ್ದಾರ್ ಬಸವರಾಜು, ಶ್ರೀ ಚೌಡೇಶ್ವರಿ ದೇವಾಂಗ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆ ಅಧ್ಯಕ್ಷರು ಹಾಗೂ ನಗರಸಭೆ ಸದಸ್ಯರು ಸಿ.ಎಂ ಪರಮೇಶ್ವರಯ್ಯ, ಉಪಾಧ್ಯಕ್ಷರು ಕೆ.ಎನ್.ಸುರೇಶ್, ಕಾರ್ಯದರ್ಶಿ ಜಿ.ಶ್ರೀನಿವಾಸ್, ‌ ಆಂಧ್ರ ದೇವಾಂಗ ಮಹಾಸಭಾ ಕುಲದ ಶೆಟ್ಟಿಗಾರರು, ಆಂಧ್ರ ದೇವಾಂಗ ಸಂಘ ನಿರ್ದೇಶಕ ಎನ್.ಪಿ.ಸುರೇಶ್, ರಾಜರಾಜೇಶ್ವರಿ ಕಲ್ಯಾಣ ಮಂಟಪ ಅಧ್ಯಕ್ಷ ಎಸ್.ಮಂಜುನಾಥ್, ಕಾರ್ಯದರ್ಶಿ ವಿ.ರವೀಂದ್ರ, ಕಾರ್ಯದರ್ಶಿ ಮಹದೇವಮ್ಮ, ಗಿರೀಶ್ ಬಾಬು ಇದ್ದರು.ಜಿಲ್ಲೆ ಇನ್ನು ಹಿಂದುಳಿದೆ ಇದು ದುರಂತ. ಕೇಳಿದ್ದನ್ನು ಕೊಡುವ ಕಾಮದೇನು ನರೇಂದ್ರ ಮೋದಿಯವರು ಹಾಗಾಗಿ ಮುಂದಿನ ದಿನಗಳಲ್ಲಿ ಈ ಅಭಿವೖದ್ಧಿಗಾಗಿ ಮುಂಬರುವ ಚುನಾವಣೆಗಳಲ್ಲಿ ಬಾಲರಾಜು ಅವರಂತಹ ಸಜ್ಜನ ರಾಜಕಾರಣಿಗೆ ಆಶೀರ್ವಾದ ಮಾಡಿದ್ದರೆ ಎಲ್ಲರಿಗೂ ಒಳ್ಳೇಯದಾಗುತ್ತಿತ್ತು, ಮುಂದಿನ ದಿನಗಳಲ್ಲಾದರೂ ಅವರಿಗೆ ಅವಕಾಶ ಕಲ್ಪಿಸಿಕೊಡಿ ಎಂದು ಪ್ರತಾಪ ಸಿಂಹ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ