ಎಲ್ಲ ವಾರ್ಡುಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಲು ಕ್ರಮ

KannadaprabhaNewsNetwork |  
Published : May 08, 2025, 12:33 AM IST
ಎಲ್ಲಾ ವಾರ್ಡುಗಳಲ್ಲಿ  ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲು ಕ್ರಮ : ಸುರೇಶ್  | Kannada Prabha

ಸಾರಾಂಶ

ಚಾಮರಾಜನಗರ ನಗರಸಭೆ ವ್ಯಾಪ್ತಿಯ ರಾಮಸಮುದ್ರದ ೩೦ನೇ ವಾರ್ಡಿನ ಕುರುಬರ ಬೀದಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನಗರಸಭೆ ಅಧ್ಯಕ್ಷ ಸುರೇಶ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರಸಭೆ ವ್ಯಾಪ್ತಿಯ ೩೧ ವಾರ್ಡುಗಳು ಹಾಗೂ ಜನನಿಬಿಡ ಪ್ರದೇಶದಲ್ಲಿ ನಗರಸಭೆ ಹಾಗೂ ಇತರೇ ಅನುದಾನಗಳಡಿಯಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಮಾಡಿ, ಶುದ್ಧೀಕರಿಸಿದ ನೀರು ಸೇವಿಸಿ ಆರೋಗ್ಯವಂತ ಜೀವನ ನಡೆಸಲು ನಗರಸಭೆಯಿಂದ ಎಲ್ಲ ರೀತಿಯ ಕ್ರಮವನ್ನು ವಹಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಸುರೇಶ ತಿಳಿಸಿದರು. ನಗರದ ೩೦ನೇ ವಾರ್ಡಿನ ರಾಮಸಮುದ್ರ ಬಡಾವಣೆಯಲ್ಲಿ ನಗರಸಭೆ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ೧೦ ಲಕ್ಷ ರು.ವೆಚ್ಚದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರು ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ನಗರಸಭೆಯಿಂದ ಶೇ.೮೦ರಷ್ಟು ಶುದ್ಧ ಕುಡಿಯುವ ನೀರು ಘಟಕವನ್ನು ನಿರ್ಮಾಣ ಮಾಡಿ, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತದೆ. ನೀರು ಪೊರೈಕೆ ಇಲ್ಲದ ಕಡೆ ಪ್ರತ್ಯೇಕವಾಗಿ ಬೋರ್‍ವೆಲ್ ಕೊರೆಸಿ ನೀರು ಕಲ್ಪಿಸಲಾಗುತ್ತಿದೆ ಎಂದರು. ಸ್ಥಳೀಯ ಶಾಸಕರ ಅನುದಾನದಲ್ಲಿ ನಗರದಲ್ಲಿ ಅನೇಕ ಕಡೆ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ. ನಗರ ವ್ಯಾಪ್ತಿಯಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೊರೈಕೆ ಮಾಡುವುದು ನಮ್ಮ ಗುರಿಯಾಗಿದೆ. ಕಾವೇರಿ ಕುಡಿಯುವ ನೀರನ್ನು ಸಹ ಆಯಾ ವಾರ್ಡುಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು. ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರು, ಮೂಲ ಸೌಲಭ್ಯ ಹಾಗೂ ಒಳಚರಂಡಿ ವಿಸ್ತರಣೆಗಾಗಿ ವಿಶೇಷ ಅನುದಾನ ನೀಡಿದ್ದಾರೆ. ಹೀಗಾಗಿ ನಗರಸಭೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಚುಡಾ ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ, ನಗರಸಭಾ ಮಾಜಿ ಸದಸ್ಯರಾದ ಗೋವಿಂದು, ಕುಮಾರಸ್ವಾಮಿ. ಯುವ ಮುಖಂಡ ರಾಮಸಮುದ್ರ ಶಿವಣ್ಣ ಕುರುಬರ ಬೀದಿ ಯಜಮಾನರಾದ ಸಣ್ಣಕ್ಕಿ ಗೌಡ, ಸೋಮೇಶ, ಶಿವಣ್ಣ, ಯುವ ಮುಖಂಡರಾದ ಸಿದ್ದು, ಶಿವಮಲ್ಲೆಗೌಡ್ರು, ಯಜಮಾನರಾದ ಗಾರೆ ನಿಂಗಣ್ಣ, ಚಿನ್ನಸ್ವಾಮಿ, ಲಿಂಗರಾಜು, ಮಹೇಶ ಮೊದಲಾದವರು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ