ಕೆಆರ್‌ಎಸ್‌ ಪಕ್ಷದ ವಿರುದ್ಧ ಕೆರಳಿದ ಕೈ ಪಡೆ

KannadaprabhaNewsNetwork |  
Published : Apr 13, 2026, 01:15 AM IST
 | Kannada Prabha

ಸಾರಾಂಶ

ಕೆ.ಆರ್.ಎಸ್ ಪಕ್ಷದ ಕಾರ‍್ಯಕರ್ತರು ಉದ್ದೇಶ ಪೂರ್ವಕವಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಕೆಟ್ಟ ಹೆಸರು ತರಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇದು ಹೀಗೆ ಮುಂದುವರೆದರೆ ಆ ಪಕ್ಷದ ಕಾರ್ಯಕರ್ತರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಕೆ.ಆರ್.ಎಸ್ ಪಕ್ಷದ ಕಾರ‍್ಯಕರ್ತರು ಉದ್ದೇಶ ಪೂರ್ವಕವಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಕೆಟ್ಟ ಹೆಸರು ತರಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇದು ಹೀಗೆ ಮುಂದುವರೆದರೆ ಆ ಪಕ್ಷದ ಕಾರ್ಯಕರ್ತರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ ಎಚ್ಚರಿಕೆ ನೀಡಿದ್ದಾರೆ.

ತುಮಕೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 8 ರಂದು ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ 750ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಕೊನೆಯಲ್ಲಿ ಬಂದ ಕೆ.ಆರ್.ಎಸ್ ಪಕ್ಷದ ಕೆಲವರು ಉದ್ದೇಶಪೂರ್ವಕವಾಗಿಯೇ ಸಚಿವರನ್ನು ಕೆರಳಿಸುವಂತೆ ಪ್ರಶ್ನೆ ಮಾಡಿದಲ್ಲದೆ, ಅರ್ಜಿ ಪಡೆದ ಸಂಬಂಧಪಟ್ಟವರಿಗೆ ನೀಡಿದ ನಂತರ ಹೊರಡಲು ಮುಂದಾದಾಗ ಉಢಾಪೆಯಾಗಿ ವರ್ತಿಸಿ, ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ. ಇದು ಖಂಡನೀಯ ಎಂದರು.

ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿ ಇಲ್ಲಸಲ್ಲದ ಸುಳ್ಳು ಹೇಳಿ ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೆ.ಆರ್.ಎಸ್ ಪಕ್ಷದವರ ನಡವಳಿಕೆ ಇದೇ ರೀತಿ ಮುಂದುವರೆದರೆ ನಾವು ಕೂಡ ಎಲ್ಲೆಂದರಲ್ಲಿ ಕೆ.ಆರ್.ಎಸ್.ಪಕ್ಷದವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಸ್ಯೆಗಳ ಬಗ್ಗೆ ಮನವಿ ನೀಡಲು ಬಂದವರು, ಅದನ್ನು ವೀಡಿಯೋ ಮಾಡುವ ಅಗತ್ಯವೆನಿತ್ತು?, ತುಮಕೂರಿನ ಜನಸ್ಪಂದನ ಕಾರ‍್ಯಕ್ರಮಕ್ಕೆ ಮೈಸೂರಿನ ವ್ಯಕ್ತಿ ಬಂದ ಮನವಿ ನೀಡುವ ಅಗತ್ಯವಿದೆಯೇ? ಇದೊಂದು ಷಡ್ಯಂತ್ರವಾಗಿದೆ. ಗೃಹ ಮಂತ್ರಿಗಳಿಗೆ ಕೆಟ್ಟ ಹೆಸರು ತರಬೇಕೆಂದು ನಡೆಸಿರುವ ಹುನ್ನಾರವಾಗಿದೆ. ಇಡೀ ದಿನ ಮಧ್ಯಾಹ್ನದ ಊಟವನ್ನು ಮಾಡದೆ ಜನರ ಸಂಕಷ್ಟ ಆಲಿಸಿ ಪರಿಹಾರ ಒದಗಿಸಿದ್ದರೂ, ಸಭೆ ಮುಗಿಸಿ ಹೊರಡುವಾಗ ಬಂದು ಕಿತಾಪತಿ ತೆಗೆದು ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಪ್ರಜಾಪ್ರಭುತ್ವದ ಅಡಿಯಲ್ಲಿ ಸರ್ಕಾರ ದ ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶವಿದೆ. ಆದರೆ ಕೆ.ಆರ್.ಎಸ್ ಪಕ್ಷದವರು ಉದ್ದೇಶ ಪೂರ್ವಕವಾಗಿಯೇ ಮೊಬೈಲ್ ಹಿಡಿದು, ಬೇಕಾಬಿಟ್ಟಿ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಎಲ್ಲರಿಗೂ ಸಮಸ್ಯೆ ಪರಿಹಾರಕ್ಕೆ ಅವಕಾಶವಿದೆ. ಆದರೆ ಕೆ.ಆರ್.ಎಸ್ ಪಕ್ಷದ ದುಂಡಾ ವರ್ತನೆಯನ್ನು ಸಹಿಸುವುದಿಲ್ಲ. ನಮ್ಮ ಪಕ್ಷಕ್ಕೆ 140 ವರ್ಷಗಳ ಇತಿಹಾಸವಿದೆ. ಲಕ್ಷಾಂತರ ಕಾರ‍್ಯಕರ್ತರಿದ್ದೇವೆ, ತಕ್ಕ ಪಾಠ ಕಲಿಸುವುದು ಅನಿವಾರ‍್ಯ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸರ್ಕಾರದ ಕೆಲಸವಾಗಿರುವ ಜನಸಂಪರ್ಕ ಸಭೆ ವ್ಯವಸ್ಥಿತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ 750 ಜನರಿಗೆ ಆಗದ ತೊಂದರೆ ಇವರಿಗೆ ಮಾತ್ರ ಆಗಿತ್ತೇ?, ಕೆ.ಆರ್.ಎಸ್ ಪಕ್ಷದ್ದು ಕೇವಲ ಗಿಮಿಕ್, ಮುಖ್ಯಮಂತ್ರಿಗಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಸಚಿವರು, ಕಾರ್ಮಿಕ ಸಚಿವರು ಎಲ್ಲರ ಜನಸ್ಪಂದನ ಸಭೆಯಲ್ಲಿಯು ಇದೇ ರೀತಿ ವರ್ತಿಸಿದ್ದಾರೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ‍್ಯದರ್ಶಿ ಆರ್.ರಾಮಕೃಷ್ಣ , ಮುಖಂಡ ಎನ್.ಗೋವಿಂದರಾಜು, ಸುವರ್ಣಮ್ಮ, ಎಚ್.ಸಿ.ಹನುಮಂತಯ್ಯ, ರೇವಣ್ಣ ಸಿದ್ದಯ್ಯ ಮಾತನಾಡಿದರು. ಅಲ್ಪಸಂಖ್ಯಾತರ ಘಟಕದ ರ‍್ಫಾನ್ ಅಹಮದ್, ಎಸ್ಸಿ ಸೇಲ್‌ನ ಲಿಂಗರಾಜು, ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಮಹೇಶ, ಫೈಯಾಜ್, ನಾಗಲಕ್ಷ್ಮಿ ವಿಜಯಲಕ್ಷ್ಮಿ, ಸುಜಾತ, ಪಿ.ಶಿವಾಜಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಚಂಡಿಕಾ ಹೋಮ
ಭಾರತದ ನರ್ಸಿಂಗ್‌ಗೆ ವಿಶ್ವಾದ್ಯಂತ ಬೇಡಿಕೆ: ದಿನೇಶ್‌