ಭಟ್ಕಳ ರಿಕ್ಷಾ ಗಣಪತಿ ಪೆಂಡಾಲ್ ಮೇಲೂ ಕಲ್ಲೆಸೆತ

KannadaprabhaNewsNetwork |  
Published : Sep 19, 2026, 02:15 AM IST
ಭಟ್ಕಳ ಆಟೋ ರಿಕ್ಷಾ ಚಾಲಕರು, ಮಾಲೀಕರ ಗಣೇಶನ ಮೂರ್ತಿ ಪೆಂಡಾಲ್ ಮೇಲೆ ಕಲ್ಲೆಸೆದಿರುವುದನ್ನು ಖಂಡಿಸಿ ಎಸ್ಪಿ ಅವರಿಗೆ ಆಟೋ ಚಾಲಕರು, ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಲ್ಲೆಸೆದಿರುವುದಕ್ಕೆ ರಿಕ್ಷಾ ಚಾಲಕರು ಮತ್ತು ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 43 ವರ್ಷಗಳಿಂದ ನಾವು ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದರೂ ಯಾವುದೇ ಅಹಿತಕರ ಘಟನೆ ಆಗಿರಲಿಲ್ಲ. ಆದರೆ ಕಲ್ಲೆಸೆತ ಘಟನೆಯಿಂದ ಬೇಸರ ಆಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.

ಭಟ್ಕಳ: ತಾಲೂಕಿನ ತಲಾಂದ ಗಣೇಶನ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಅನ್ಯಕೋಮಿನ ಮಕ್ಕಳಿಂದ ಕಲ್ಲು ಎಸೆತದ ಪ್ರಕರಣದ ಬಿಸಿ ಇರುವಾಗಲೇ ಶುಕ್ರವಾರ ಬೆಳಗ್ಗೆ ಪಟ್ಟಣದ ಅಟೋ ರಿಕ್ಷಾ ಚಾಲಕರ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟಿನ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿ ಇರುವ ಪೆಂಡಾಲ್‌ಗೂ ಕಲ್ಲೆಸೆದ ಘಟನೆ ನಡೆದಿದೆ.

ಕಲ್ಲೆಸೆದಿರುವುದಕ್ಕೆ ರಿಕ್ಷಾ ಚಾಲಕರು ಮತ್ತು ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 43 ವರ್ಷಗಳಿಂದ ನಾವು ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದರೂ ಯಾವುದೇ ಅಹಿತಕರ ಘಟನೆ ಆಗಿರಲಿಲ್ಲ. ಆದರೆ ಕಲ್ಲೆಸೆತ ಘಟನೆಯಿಂದ ಬೇಸರ ಆಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.

ಈ ಕುರಿತು ರಿಕ್ಷಾ ಚಾಲಕರ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದವರು ಎಸ್ಪಿ ದೀಪನ್ ಅವರಿಗೆ ಘಟನೆ ಬಗ್ಗೆ ವಿವರಿಸಿದ್ದು, ಕಲ್ಲು ಎಸೆದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಮನವಿಯಲ್ಲಿ ಶುಕ್ರವಾರ ಬೆಳಗ್ಗೆ 7.20 ಗಂಟೆಗೆ ಗಣೇಶನ ಮಂಟಪದ ಹಿಂಬದಿಯಿಂದ ಯಾರೋ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಕಲ್ಲು ಗಣೇಶನ ಮಂಟಪದ ಚಾವಣಿಯ ಶೀಟಿನಲ್ಲಿ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ತಿಳಿಸಿದ್ದಾರೆ.

ಕಲ್ಲೆಸೆತ ಪ್ರಕರಣದಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ರಿಕ್ಷಾ ಚಾಲಕರು, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಆಟೋ ಯುನಿಯನ್ ಅಧ್ಯಕ್ಷ ವೆಂಕಟೇಶ ನಾಯ್ಕ ಹಾಗೂ ಪದಾಧಿಕಾರಿಗಳು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಎಸ್ಪಿ ದೀಪನ್ ಅವರು ಘಟನೆಯನ್ನು ಕೂಲಂಕಷವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಭಟ್ಕಳದಲ್ಲಿ ಪೊಲೀಸರ ಪಥಸಂಚಲನ

ಭಟ್ಕಳ: ಪಟ್ಟಣದಲ್ಲಿ ಗಣೇಶನ ವಿಸರ್ಜನೆ ಹಿನ್ನೆಲೆ ಶುಕ್ರವಾರ ಪೊಲೀಸರು ಮತ್ತು ವಿಶೇಷ ಪೊಲೀಸ್ ಪಡೆಗಳಿಂದ ಪಟ್ಟಣದಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಧೈರ್ಯ ತುಂಬಲಾಯಿತು.ನಗರ ಪೊಲೀಸ್ ಠಾಣೆಯಿಂದ ಹೊರಟ ಪೊಲೀಸರ ಪಥಸಂಚಲನ ಮುಖ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆಯಲ್ಲಿ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಎಎಸ್ಪಿ ರಾಣು ಗುಪ್ತ, ಇನ್ಸಪೆಕ್ಟರ್ ದಿವಾಕರ ಪಿ.ಎಂ. ಸೇರಿದಂತೆ ಸ್ಥಳೀಯ ಮತ್ತು ಹೊರಗಿನಿಂದ ಬಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿಶೇಷ ಪೊಲೀಸ್ ಪಡೆಯವರು ಪಥ ಸಂಚಲನ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧತೆ: ಮಲ್ಲಿಕಾರ್ಜುನ ನಾಗಪ್ಪ
ಎಲ್ಲರಿಗೂ ಕಾನೂನು ದೊರೆಯಲಿ: ಹುಲ್ಲೂರ ಹೇಮಲತಾ ಬಸಪ್ಪ