ಕನ್ನಡಪ್ರಭ ವಾರ್ತೆ ಮಂಗಳೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇತುವೆ ಶಿಥಿಲವಾಗಿ ಘನ ವಾಹನಗಳನ್ನು ನಿಷೇಧಿಸಿರುವುದು ಮರಳು ದಂಧೆಕೋರರಿಗೆ ವರವಾಗಿ ಪರಿಣಮಿಸುತ್ತಿದೆ. ಇಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ಅನೇಕ ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿದರು.ಅಡ್ಡೂರು ಸೇತುವೆ ತಳ ಭಾಗದಲ್ಲಿಯೇ ನಡೆಯುತ್ತಿರುವ ಮರಳುಗಾರಿಕೆ ಮಾಫಿಯಾಕ್ಕೆ ರಕ್ಷಣೆ ನೀಡುತ್ತಿರುವವರು ಯಾರು ಎಂಬುದು ಬಯಲಾಗಬೇಕು. ಸೇತುವೆಯಡಿ ಮರಳುಗಾರಿಕೆ ನಿಲ್ಲದಿದ್ದರೆ ಸೇತುವೆಗೂ ಅಪಾಯ ತಪ್ಪಿದ್ದಲ್ಲ. ಇಲ್ಲಿ ಮಾತ್ರವಲ್ಲ ಯಾವೊಂದು ಸೇತುವೆಯ 100 ಮೀ. ವ್ಯಾಪ್ತಿಯೊಳಗೆ ಮರಳುಗಾರಿಕೆ ನಡೆಸಬಾರದು. ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಒತ್ತಾಯಿಸಿದರು.ಅಡ್ಡೂರು ಬಳಿ ಹೊಸ ಸೇತುವೆ ಆದಷ್ಟು ಶೀಘ್ರ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಿ ತಕ್ಷಣ ಕೆಲಸ ಆರಂಭವಾಗಲಿ ಎಂದರು.ಬಿಜೆಪಿ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಠಾರಿ, ಪ್ರಮುಖರಾದ ಸಂದೀಪ್ ಪಚ್ಚನಾಡಿ, ಭರತ್ ರಾಜ್ ಕೃಷ್ಣಾಪುರ, ಶ್ರವಣ್ ಶೆಟ್ಟಿ, ಆಶ್ರಿತ್ ನೋಂಡಾ ಇದ್ದರು.