ಹಿಂದೂ ಕಾರ್ಯಕರ್ತರ ಮೇಲಿನ ಕಾನೂನು ದುರುಪಯೋಗ ನಿಲ್ಲಲಿ

KannadaprabhaNewsNetwork |  
Published : Oct 01, 2026, 02:15 AM IST
ಹಗರಿಬೊಮ್ಮನಹಳ್ಳಿಯಲ್ಲಿ ಬುಧವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ರಾಜ್ಯಾದ್ಯಂತ ಕಾನೂನುಗಳ ಪಾಲನೆಯಲ್ಲಿ ಹಿಂದೂಗಳ ಹಿತಾಸಕ್ತಿಯ ಕಡೆಗಣನೆ ಖಂಡಿಸಿ ಹಿಂದೂಗಳ ಸಂವಿಧಾನಬದ್ಧ ಹಕ್ಕುಗಳು ಹಾಗೂ ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಾಜ್ಯಾದ್ಯಂತ ಕಾನೂನುಗಳ ಪಾಲನೆಯಲ್ಲಿ ದುರುಪಯೋಗ ನಡೆಯುತ್ತಿದೆ.

ಹಗರಿಬೊಮ್ಮನಹಳ್ಳಿ: ಹಿಂದೂ ಹಿತಾಸಕ್ತಿಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಅವರ ಎಲ್ಲ ನ್ಯಾಯ ಸಮ್ಮತ ಬೇಡಿಕೆ ಈಡೇರಿಸಬೇಕು ಜತೆಗೆ ಹಿಂದೂ ಕಾರ್ಯಕರ್ತರ ಮೇಲಿನ ಕಾನೂನು ದುರುಪಯೋಗ ನಿಲ್ಲಿಸಬೇಕು ಎಂದು ಹಿಂದೂ ರಾಷ್ಟ್ರಸಮನ್ವಯ ಸಮಿತಿಯ ರಾಜ್ಯ ಸಮನ್ವಯಕ ಮೋಹನಗೌಡ್ ಆಗ್ರಹಿಸಿದರು.

ರಾಜ್ಯಾದ್ಯಂತ ಕಾನೂನುಗಳ ಪಾಲನೆಯಲ್ಲಿ ಹಿಂದೂಗಳ ಹಿತಾಸಕ್ತಿಯ ಕಡೆಗಣನೆ ಖಂಡಿಸಿ ಹಿಂದೂಗಳ ಸಂವಿಧಾನಬದ್ಧ ಹಕ್ಕು ಹಾಗೂ ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಆಗ್ರಹಿಸಿ ಸೋಮವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ತಾಲೂಕು ಘಟಕ ತಹಸೀಲ್ದಾರ್ ಕಚೇರಿ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯಾದ್ಯಂತ ಕಾನೂನುಗಳ ಪಾಲನೆಯಲ್ಲಿ ದುರುಪಯೋಗ ನಡೆಯುತ್ತಿದೆ. ಹಿಂದೂಗಳು ಸಾಮಾಜಿಕವಾಗಿ ಅಪಾಯದಲ್ಲಿದ್ದಾರೆ. ಹಿಂದೂಗಳ ಸಂವಿಧಾನಬದ್ಧ ಹಕ್ಕು ಹಾಗೂ ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆ ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ಗಾಳಿಗೆ ತೂರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಕುರಿತಂತೆ ಪುನೀತ್ ಕೆರೆಹಳ್ಳಿ ಮತ್ತವರ ಸಹಚರರ ಮೇಲೆ ಏಕಪಕ್ಷೀಯವಾಗಿ ಸುಳ್ಳು ಎಫ್.ಐ.ಆರ್.ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿ ಸುರಕ್ಷಿತವಾಗಿರಿಸಿಕೊಂಡು,ಸಾಕ್ಷ್ಯ ನಾಶಪಡಿಸಲೆತ್ನಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕರ್ತವ್ಯ ಲೋಪವೆಸಗಿರುವ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕಳೆದ ೧೫ ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿರುವ ಪುನೀತ್ ಕೆರೆಹಳ್ಳಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ವತಂತ್ರ ವೈದ್ಯಕೀಯ ತಂಡದಿಂದ ತಪಾಸಣೆ ನಡೆಸಿ ಪುನೀತ್ ಜೀವರಕ್ಷಣೆಗೆ ಸರ್ಕಾರ ಮುಂದಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣದಲ್ಲಿ ಭರತ್ ಕುಂಡ್ಮೇಲ್ ಸಹಿತ ಇತರರ ಮೇಲೆ ಕಠಿಣ ಕೋಕಾ ಹಾಗೂ ಗೂಂಡಾ ಕಾಯಿದೆಯಡಿ ನಿರ್ಭಂದನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಕಾನೂನುಗಳ ದುರುಪಯೋಗವಾಗಿದೆ. ರಾಜ್ಯಾದ್ಯಂತ ಹಿಂದೂ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಗಡೀಪಾರು ಮತ್ತು ಗೂಂಡಾ ಕಾಯಿದೆ ನೊಟೀಸ್‌ ರಾಜಕೀಯ ಸ್ವೇಚ್ಛಾಚಾರಕ್ಕೆ ದುರ್ಬಳಕೆಯಾಗುತ್ತಿವೆ ಎಂದು ಆರೋಪಿಸಿದರು.

ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ವ್ಯಕ್ತಿ ರಾಜಕೀಯ ಮತ್ತು ಸೈದ್ಧಾಂತಿಕ ಕಾರಣಗಳಿಗೆ ಗುರಿಯಾಗಿಸದೇ ಎಲ್ಲರಿಗೂ ಸಮಾನ ಕಾನೂನಿನ ಮಾನದಂಡ ಅನ್ವಯಿಸುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕರಿಬಸವರಾಜ ಬಾದಾಮಿ, ಜಿ.ಎಂ. ಜಗದೀಶ್, ಶಿವಕುಮಾರ್, ಮಲ್ಲಿಕಾರ್ಜುನ, ಹಿರಾಳ್ ಶರಣಪ್ಪ, ನಾಗಭೂಷಣ ಗದ್ದಿಕೇರಿ, ಸತೀಶ್ ಪಾಟೀಲ್, ಎಸ್. ವಿಶ್ವನಾಥ್, ಬ್ಯಾಟಿ ರಾಮಣ್ಣ, ಪೊಲೀಸ್ ಮಲ್ಲಣ್ಣ, ಕೊಟ್ರಪ್ಪ, ಚಂದ್ರಮೌಳಿ, ರಾಮಚರಣ ಹಾಗೂ ಶಾಂತಲಾ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡಾಕೂಟದಲ್ಲಿ ನಿರ್ಣಾಯಕರ ಪಾತ್ರ ಮಹತ್ವದ್ದು: ತಹಸೀಲ್ದಾರ್
ಜಿಪಂ ಆವರಣದಲ್ಲಿ ಸ್ವಚ್ಛತಾ ಕಾರ್ಯ