ರಸ್ತೆ ಬದಿಗೆ ಎಸೆದ ಶಿಶು ಎಳೆದಾಡಿ ಕೊಂದ ಬೀದಿನಾಯಿಗಳು

KannadaprabhaNewsNetwork |  
Published : Mar 29, 2026, 02:45 AM IST
ಬ್ಲರ್‌ ಮಾಡಿ | Kannada Prabha

ಸಾರಾಂಶ

ಅಕ್ರಮವಾಗಿ ಜನಿಸಿದ ನವಜಾತ ಶಿಶುವನ್ನು ತಾಯಿ ರಸ್ತೆ ಬದಿಯ ಖುಲ್ಲಾ ಜಾಗದಲ್ಲಿ ಎಸೆದು ಹೋಗಿದ್ದು, ಬೀದಿ ನಾಯಿಗಳು ಶಿಶುವನ್ನು ಎಳೆದಾಡಿ ಬಲಗಾಲು ತಿಂದುಹಾಕಿದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಅಕ್ರಮವಾಗಿ ಜನಿಸಿದ ನವಜಾತ ಶಿಶುವನ್ನು ತಾಯಿ ರಸ್ತೆ ಬದಿಯ ಖುಲ್ಲಾ ಜಾಗದಲ್ಲಿ ಎಸೆದು ಹೋಗಿದ್ದು, ಬೀದಿ ನಾಯಿಗಳು ಶಿಶುವನ್ನು ಎಳೆದಾಡಿ ಬಲಗಾಲು ತಿಂದುಹಾಕಿದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಪಟ್ಟಣದ ಹಳೆಯ ನೀರಿನ ಟಾಕಿ ಹತ್ತಿರದ ವೀರಶೈವ ಕೈಲಾಸ ಧಾಮದ ಬಳಿ ನವಜಾತ ಗಂಡು ಶಿಶುವನ್ನು ರಸ್ತೆ ಬದಿಯ ಖುಲ್ಲಾ ಜಾಗದಲ್ಲಿ ಬಿಸಾಕಿ ಹೋಗಿದ್ದು, ಶನಿವಾರ ಮಧ್ಯಾಹ್ನ ೧೨ ಗಂಟೆಯ ವೇಳೆಗೆ ನಾಯಿಯೊಂದು ಎಳೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಬಡಾವಣೆಯ ನಾಗರಿಕರು ನಾಯಿಯನ್ನು ಓಡಿಸಿ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಮಗುವಿನ ಹೊಕ್ಕುಳ ಬಳ್ಳಿ ಹಾಗೆಯೇ ಇದ್ದು, ಅದಕ್ಕೆ ಇರುವೆಗಳು ಹತ್ತಿದ್ದವು. ಅಕ್ರಮ ಸಂಬಂದದಿಂದ ಮಗು ಜನಿಸಿರಬಹುದು, ಜನಿಸಿ ಕೇವಲ ಒಂದು ದಿನವಾಗಿರಬಹುದೆಂದು ಶಂಕಿಸಲಾಗಿದೆ.

ಸ್ಥಳಕ್ಕೆ ಅಪರಾಧ ವಿಭಾಗ ಪಿಎಸ್ ಐ ಎಸ್.ಎಂ.ಪಡಶೇಟ್ಟಿ ಭೆಟ್ಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಎನ್ನುವುದು ಜೀವನ ಸ್ವಭಾವ, ಆಚರಣೆಯಲ್ಲ
ಬಂಟ್ವಾಳ ಶಾಸಕರು ಮಂಡಿಸಿದ ಹಕ್ಕುಚ್ಯುತಿಯಿಂದ ನೋವಾಗಿದೆ: ರಮಾನಾಥ ರೈ