ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಕರಣದ ವಿಚಾರಣೆಗೆ ಸೋಮವಾರ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಪಶ್ಚಿಮ ಪಾಲಿಕೆಯ ವಲಯ-1ರಲ್ಲಿ 32 ಪ್ರಕರಣಗಳು ಹಾಗೂ ವಲಯ-2ರಲ್ಲಿ 31 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿರುವ ಮಾಹಿತಿಯನ್ನು ಲೋಕಾಯುಕ್ತರಿಗೆ ಒದಗಿಸಿದರು. ಇವುಗಳಲ್ಲಿ ಗಂಭೀರ ತರಹದ ಯಾವುದೇ ಪ್ರಕರಣಗಳು ಇರುವುದಿಲ್ಲ. ನಾಯಿ ಕಡಿತದಿಂದ ತೊಂದರೆಗೊಳಗಾದವರಿಗೆ ಎಲ್ಲಾ ರೀತಿಯ ಸಹಕಾರವನ್ನು ಪಾಲಿಕೆ ವತಿಯಿಂದ ನೀಡಲಾಗುತ್ತಿದೆ ಎಂದು ಮಾಹಿತಿ ಸಲ್ಲಿಸಿದರು.ಉತ್ತರ ಪಾಲಿಕೆಯ ಪಶುಸಂಗೋಪನೆಯ ಸಹಾಯಕ ನಿರ್ದೇಶಕರು ಕಳೆದ ಮೂರು ತಿಂಗಳಲ್ಲಿ 44 ನಾಯಿ ಕಚ್ಚಿದ ಪ್ರಕ್ರಣಗಳು ವರದಿಯಾಗಿರುತ್ತದೆ ಎಂಬ ಮಾಹಿತಿ ಒದಗಿಸಿದರು. ಇವುಗಳ ಪೈಕಿ ರೇಬಿಸ್‌ನಿಂದ ತೊಂದರೆಗಳಗಾದ ಯಾವುದೇ ಪ್ರಕರಣಗಳು ಇರುವುದಿಲ್ಲವೆಂಬ ಮಾಹಿತಿ ಒದಗಿಸಿದರು. ವೀರೇಶ್ ಎಂಬ ವ್ಯಕ್ತಿಗೆ ಅನೇಕ ಕಡೆ ನಾಯಿ ಕಚ್ಚಿದ್ದರಿಂದ, ಅವನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿದ್ದು, ಪ್ರಸ್ತುತ ವ್ಯಕ್ತಿಯು ಸಂಪೂರ್ಣ ಗುಣಮುಖರಾಗಿದ್ದಾರೆ ಎಂಬ ಮಾಹಿತಿ ಸಲ್ಲಿಸಿದರು. ನಾಯಿ ಕಚ್ಚಿದವರಿಗೆ ಆಸ್ಪತ್ರೆಯ ವೆಚ್ಚವನ್ನು ಪಾಲಿಕೆಯಿಂದ ಹಿಂತಿರುಗಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಮಾಹಿತಿ ಒದಗಿಸಿದರು.
ದಕ್ಷಿಣ ಪಾಲಿಕೆಯ ವಲಯ-2ರ ಪಶುಸಂಗೋಪನೆಯ ಸಹಾಯಕ ನಿರ್ದೇಶಕರು ಕಳೆದ ಮೂರು ತಿಂಗಳಲ್ಲಿ 26 ನಾಯಿ ಕಚ್ಚಿದ ಪ್ರಕರಣಗಳು ವರದಿಯಾಗಿರುತ್ತವೆ ಎಂದು ತಿಳಿಸಿದರು.
ಕೇಂದ್ರ ಪಾಲಿಕೆಯಲ್ಲಿ 32 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿರುತ್ತವೆ. ಅವುಗಳಲ್ಲಿ ಯಾವುದೇ ಗಂಭೀರ ಸ್ವರೂಪದ ಪ್ರಕರಣಗಳು ಇರುವುದಿಲ್ಲ. ಶೆಲ್ಟರ್ ಹೋಂಗಳನ್ನು ನಿರ್ಮಿಸಲು ಮೂರು ಸ್ಥಳಗಳನ್ನು ಗುರುತಿಸಿರುವ ಅಂಶವನ್ನು ತಿಳಿಸಿದರು.
ಹಾಜರಿದ್ದ ಎಲ್ಲ ಅಧಿಕಾರಿಗಳಿಗೂ ತಾವು ಕೈಗೊಂಡ ಕ್ರಮದ ಬಗ್ಗೆ ವಿಸ್ತ್ರತ ವರದಿಯನ್ನು ಸಲ್ಲಿಸುವಂತೆ ತಿಳಿಸಿ. ಮುಂದಿನ ವಿಚಾರಣೆಯನ್ನು ಫೆ.26 ನಿಗದಿಪಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.