ಹೊಸಕೋಟೆ: ದೇಶದ ಅಭಿವೃದ್ಧಿ ಕನಸು ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಫಲಾನುಭವಿಗಳ ಪ್ರಕೋಷ್ಠದ ತಾಲೂಕು ಅಧ್ಯಕ್ಷ ತಾರಾ ವೆಂಕಟೇಶ್ ತಿಳಿಸಿದರು.
ಜನಪರ ಯೋಜನೆಗಳನ್ನ ತಿಳಿಸಿ: ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಣ ಆರೋಗ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಾಮಾನ್ಯ ವರ್ಗದ ಜನರಿಗೂ ತಲುಪಿಸುವ ದೃಷ್ಟಿಯಿಂದ ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿದ್ದಾರೆ. ಪ್ರತಿಯೊಂದು ಯೋಜನೆಗಳನ್ನು ಪ್ರತಿ ಮನೆಮನೆಗೂ ತಿಳಿಸುವ ಕಾರ್ಯ ಮಾಡಬೇಕು. ಪ್ರಮುಖವಾಗಿ ಫಲಾನುಭವಿಗಳನ್ನು ಒಗ್ಗೂಡಿಸಿ ಫಲಾನುಭವಿಗಳ ಮೂಲಕ ಮತ್ತಷ್ಟು ಜನರನ್ನ ತಲುಪುವ ಕಾರ್ಯ ಮಾಡಬೇಕು ಎಂದು ಹೇಳಿದರು.ಬಾಕ್ಸ್...........
ಆರೋಗ್ಯ ಸಚಿವರಾಗಿ ಸುಧಾಕರ್ ಉತ್ತಮ ಸೇವೆ:ಡಾ.ಕೆ ಸುಧಾಕರ್ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದು ತಾರಾ ವೆಂಕಟೇಶ್ ಹೇಳಿದರು.
ಪ್ರಮುಖವಾಗಿ ಹೊಸಕೋಟೆಗೆ ತಾಯಿ ಮಗುವಿನ ಆಸ್ಪತ್ರೆಯನ್ನ ಮಂಜೂರು ಮಾಡಿಕೊಟ್ಟಿದ್ದಾರೆ. ಈಗ ಅವರು ಚಿಕ್ಕಬಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದು ಬಹುಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಕೇಂದ್ರದಲ್ಲಿ ಸಚಿವರಾದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.ಫೋಟೋ : 31 ಹೆಚ್‌ಎಸ್‌ಕೆ 1ತಾರಾ ವೆಂಕಟೇಶ್ ಭಾವ ಚಿತ್ರ