ತುಮಕೂರು: ಸಹಕಾರ ಸಂಸ್ಥೆಗಳು ಸಮುದಾಯದ ಬೆಳವಣಿಗೆಗೆ ನೆರವಾಗುತ್ತವೆ. ಇಂತಹ ಸಂಸ್ಥೆಗಳನ್ನು ಸಮರ್ಥವಾಗಿ ಕಟ್ಟಿ ಬೆಳೆಸಿ ಹೆಚ್ಚು ಜನರಿಗೆ ಅದರ ಪ್ರಯೋಜನವಾಗುವಂತೆ ಮಾಡಬೇಕು ಎಂದು ಹಿರೇಮಠ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಸಮುದಾಯಕ್ಕಾಗಿ ನಾವು ಮಾಡುವ ಕೆಲಸವನ್ನು ಇತರರು ಸ್ಮರಿಸುವಂತೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಸೊಸೈಟಿಯ ಅಧ್ಯಕ್ಷ ಪಿ.ಆರ್. ದೇವರಾಜು ಮಾತನಾಡಿ, 42 ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆ ಹಲವರ ಸೇವೆ ಶ್ರಮದಿಂದ ದೊಡ್ಡದಾಗಿ ಬೆಳೆದಿದೆ. ಇದನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲರೂ ಸಹಕಾರ ನೀಡಬೇಕು. ಷೇರು ಬಂಡವಾಳವನ್ನು ಒಂದು ಕೋಟಿ ರು.ಗೆ ಹೆಚ್ಚಿಸುವುದು, 8 ಕೋಟಿ ರು.ವರೆಗೆ ಠೇವಣಿ ಸಂಗ್ರಹ ಮಾಡುವುದು, ನಿವ್ವಳ ಲಾಭವನ್ನು 15 ಲಕ್ಷ ರು.ಗೆ ಹೆಚ್ಚಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದರು.ಸಂಘದ ಉಪಾಧ್ಯಕ್ಷ ಪಿ.ಎನ್.ದೇವರಾಜು, ನಿರ್ದೇಶಕ ಎಸ್.ಲಕ್ಷ್ಮೀನಾರಾಯಣ, ಹೆಚ್.ಬಿ.ಲಕ್ಷ್ಮೀಕಾಂತ್, ಶ್ರೀನಿವಾಸಪ್ರಸಾದ್, ಜಯಪ್ರಕಾಶ್, ಟಿ.ಎನ್.ರೇಣುಕುಮಾರ್, ಟಿ.ಆರ್.ಸತೀಶ್‌ಕುಮಾರ್, ಮನೋಹರಗೌಡ, ಎ.ವೈ.ಹನುಮಂತರಾಯಪ್ಪ, ಜಿ.ಶಶಿಕಲಾ, ಜಿ.ನೇತ್ರಾವತಿ, ಹೆಬ್ಬೂರು ಶ್ರೀನಿವಾಸಮೂರ್ತಿ, ಜಿ.ವೆಂಕಟೇಶ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಪಿ. ಸಂದೇಶ್ ಭಾಗವಹಿಸಿದ್ದರು.
ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.