ಯಲಬುರ್ಗಾ: ನಾಟಕ, ರಂಗಕಲೆ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಮುಖಂಡ ಮಲ್ಲಿಕಾರ್ಜುನ ನಿಟ್ಟಾಲಿ ಹೇಳಿದರು.
ಹಬ್ಬ ಹರಿದಿನಗಳಲ್ಲಿ ಹಾಗೂ ಜಾತ್ರೆಗಳಲ್ಲಿ ಏರ್ಪಡಿಸುವ ಸಾಮಾಜಿಕ ನಾಟಕಗಳು ಸಾಮರಸ್ಯ ಸಾರುವ ಪ್ರತೀಕವಾಗಿವೆ. ಹಳ್ಳಿಗಳಲ್ಲಿ ರಂಗಭೂಮಿ ಕಲೆ ಜೀವಂತವಾಗಿರಲು ಕಲಾವಿದರ ಶ್ರಮ ಸಾಕಷ್ಟಿದೆ. ಕಲೆ ಉಳಿಸುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದರು.
ಉಳಿವೇಂದ್ರಸ್ವಾಮಿ ಮೌನೇಶ್ವರಮಠ ಮಾತನಾಡಿ, ನಾಟಕ ಮನರಂಜನೆ ನೀಡುವುದಲ್ಲದೆ ಬದುಕಿನಲ್ಲಿ ಒಳ್ಳೆಯ ಮತ್ತು ಕೆಟ್ಟದ್ದನ್ನು ತೋರಿಸುತ್ತದೆ. ಎಲ್ಲರ ಮನಮುಟ್ಟುವ ನಾಟಕದ ಉದ್ದೇಶ ಸಮಾಜ ಸರಿದಾರಿಗೆ ತರುವುದಾಗಿದೆ ಎಂದರು.ದಮ್ಮೂರಿನ ಭೀಮಾಂಭಿಕಾದೇವಿ ಮಠದ ಒಡೆಯ ಹನುಮಂತಪ್ಪಜ್ಜ ದರ್ಮರಮಠ, ಶಿವನಾಗಯ್ಯ, ಶಂಭುಲಿಂಗಯ್ಯ ಹಿರೇಮಠ, ಹಜರತ್‌ಅಲಿ ನೆರೆಬೆಂಚಿ, ಗುರುಪಾದಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಗುತ್ತಿಗೆದಾರ ಹನುಮಗೌಡ ಸಾಲಭಾವಿ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭ ದೇವೇಂದ್ರಗೌಡ ಪಾಟೀಲ್, ಸುಧೀಂದ್ರ ದೇಸಾಯಿ, ಯಮನೂರ ಲಿಂಗದಳ್ಳಿ, ಮಳಿಯಪ್ಪ ಕಳ್ಳಿಮರದ, ಶರಣಪ್ಪ ಅಂಗಡಿ, ಸಣ್ಣೆಪ್ಪ ದೊಡ್ಡಮನಿ, ಹಿರೇಪರಪ್ಪ ಅಂಗಡಿ, ದೇವಪ್ಪ ಕಳ್ಳಿಮರದ, ದೇವಿಂದ್ರಪ್ಪ ಬಡಿಗೇರ, ರಾಮಣ್ಣ ಹುಡೇದ, ಬಾಲಪ್ಪ ಜರಕುಂಟಿ, ಭೀಮಣ್ಣ ಜರಕುಂಇಟ, ಹನುಮಪ್ಪ ಪುರ್ತಗೇರಿ, ಉಮೇಶ ಹುಡೇದ, ಉಳಿಯಪ್ಪ ಹೊಸಮನಿ, ಮೌನೇಶ ನಂದಿಹಾಳ, ಮಾನಪ್ಪ ತಲ್ಲೂರು, ಹಿರೇಹನುಮಪ್ಪ ಬೇವಿನಗಿಡದ, ಮೌನೇಶ ಬೇವಿನಗಿಡದ ಸೇರಿದಂತೆ ಮತ್ತಿತರರು ಇದ್ದರು.