ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷನ್ನು ಪ್ರಾಥಮಿಕ ಹಂತದಿಂದ ಕಲಿಸಬೇಕು. ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಪಾಠ ಮಾಡಿ ಫಲಿತಾಂಶ ಸುಧಾರಣೆಗೆ ಗಂಭೀರವಾಗಿ ಆಲೋಚಿಸಬೇಕು.
ಇಂಗ್ಲಿಷ್ ಉಪನ್ಯಾಸಕರಿಗೆ ಪುನಃಶ್ಚೇತನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಗದಗ
ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷನ್ನು ಪ್ರಾಥಮಿಕ ಹಂತದಿಂದ ಕಲಿಸಬೇಕು. ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಪಾಠ ಮಾಡಿ ಫಲಿತಾಂಶ ಸುಧಾರಣೆಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಶಾಲಾ ಶಿಕ್ಷಣ (ಪಪೂ) ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗ ಬಂಡು ಮಸನಾಯಕ ಹೇಳಿದರು.
ನಗರದ ಮನೋರಮಾ ಪಪೂ ಕಾಲೇಜಿನಲ್ಲಿ ಪಪೂ ಶಿಕ್ಷಣ ಇಲಾಖೆ ಹಾಗೂ ಆಂಗ್ಲ ಭಾಷಾ ಉಪನ್ಯಾಸಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ಇಂಗ್ಲಿಷ್ ಉಪನ್ಯಾಸಕರಿಗೆ ಪುನಃಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಇಂಗ್ಲಿಷ್ ಭಾಷೆ ಓದು, ಬರಹ ಕಲಿಸುವುದರೊಂದಿಗೆ ಕಂಠಪಾಠ ಮಾಡಿಸಬೇಕು. ಉಚ್ಛಾರಣೆ ಹಾಗೂ ಶಬ್ದ ಗ್ರಹಿಕೆ ಬಗ್ಗೆ ಪೂರಕವಾಗುವಂತೆ ಪಾಠ ಮಾಡಬೇಕು. ನಿತ್ಯ ಜೀವನದಲ್ಲಿ ಬಳಕೆ ಮಾಡುವ ವಸ್ತುಗಳ ಹೆಸರನ್ನು ಅರ್ಥೈಸಿಕೊಂಡು ಇಂಗ್ಲೀಷ್‌ನಲ್ಲಿ ಬರೆಸುವುದರಿಂದ ವಿದ್ಯಾರ್ಥಿಗಳಲ್ಲಿ ಭಾಷೆ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ಟಲು ಸಹಕಾರಿ ಆಗುತ್ತದೆ ಎಂದರು.
ಮನೋರಮಾ ಪಪೂ ಕಾಲೇಜಿನ ಚೇರಮನ್ ನರಸಿಂಹ ಕುಡತರಕರ ಮಾತನಾಡಿ, ಶಿಕ್ಷಣ ಗುಣಮಟ್ಟ ಮೂಲಭೂತ ಸೌಲಭ್ಯ, ಪಠ್ಯಕ್ರಮಕ್ಕಿಂತ ಶಿಕ್ಷಕರ ಬೋಧನೆ ಮತ್ತು ಅವರ ವೃತ್ತಿಪರತೆ ಮತ್ತು ಹೃದಯಾಳದಿಂದ ಪಾಲ್ಗೊಳ್ಳುವಿಕೆಯಲ್ಲಿದೆ. ಉಪನ್ಯಾಸಕರು ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದರೆ ಫಲಿತಾಂಶ ಮತ್ತು ಗುಣಮಟ್ಟದಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ ಎಂದು ತಿಳಿಸಿದರು.
ರಮಾಕಾಂತ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಇಂಗ್ಲಿಷ್ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯರಾಗಿ ಪದೊನ್ನತಿ ಹೊಂದಿದ ಸರಸ್ವತಿ ಹುಲ್ಲಣ್ಣವರ, ನಿವೃತ್ತ ಪ್ರಾ. ಶ್ರೀಧರ್ ದೇಶಪಾಂಡೆ ಹಾಗೂ ಸಿ.ಎಚ್. ಬನಪ್ಪಗೌಡರ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನ ಪ್ರಾ. ಬಸವರಾಜ ಗಿರಿತಿಮ್ಮಣ್ಣವರ ವಹಿಸಿದ್ದರು. ಆಡಳಿತ ಅಧಿಕಾರಿ ಕಿಶೋರ್ ಮುದಗಲ್, ಪ್ರಾ. ಬಿ.ಎಸ್. ಹಿರೇಮಠ, ಸುರೇಶ ಸಣ್ಣೇಲಿ, ಅರುಣ ಕುಲಕರ್ಣಿ ಸೇರಿ ಇತರರು ಇದ್ದರು. ವಿ.ಎಂ. ಪಾಟೀಲ ಸ್ವಾಗತಿಸಿದರು. ಶ್ರೀನಿವಾಸ ಬಡಿಗೇರ ಹಾಗೂ ಲಿಂಗರಾಜ ಯತ್ನಳ್ಳಿ ನಿರೂಪಿಸಿದರು. ಶಶಿಧರ ಕುರಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.