ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು, ಕಾಮಗಾರಿ ಮಾಡುತ್ತಿರುವ ಸ್ಥಳಗಳಲ್ಲಿ ದಾಳಿಮಾಡಿ ಬಾಲ ಕಾರ್ಮಿಕರ ರಕ್ಷಣೆ ಮಾಡಿ ಸೂಕ್ತ ಕ್ರಮ ಕೈಗೊಂಡು ಕೋಲಾರವನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಾಲಕಾರ್ಮಿಕರ ನಿಷೇಧ ಕಾಯ್ದೆ, ಬಾಲಕಾರ್ಮಿಕರ ಹಾಗೂ ಕಿಶೋರ ಕಾರ್ಮಿಕರನ್ನು ಅಪಾಯಕಾರಿಯಾದ ಮತ್ತು ಎಲ್ಲಾ ರೀತಿಯ ಉದ್ಯೋಗಗಳಲ್ಲಿ ಮತ್ತು ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದರು.
ಬಾಲ ಕಾರ್ಮಿಕ ಪದ್ಧತಿ ನಿಷೇಧಬಾಲ ಕಾರ್ಮಿಕ ಎಂದರೆ ೧೪ ವರ್ಷ ಪೂರ್ಣವಾಗದೆ ಇರುವವರು ಅಥವಾ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ೨೦೦೯ರಲ್ಲಿ. ನಿಗಧಿಪಡಿಸಿರುವ ವಯಸ್ಸಿಗೆ ಒಳಪಟ್ಟವರು. ಕಿಶೋರ ಕಾರ್ಮಿಕ ಎಂದರೆ ೧೪ ವರ್ಷ ಪೂರ್ಣಗೊಂಡಿರುವ ಮತ್ತು ೧೮ ವರ್ಷ ಪೂರ್ಣಗೊಳಿಸದವರು. ಇಂತಹ ಮಕ್ಕಳನ್ನು ಹೋಟೆಲ್, ಕೈಗಾರಿಕೆಗಳು, ಡಾಬಾ, ಬಾರ್ ರೆಸ್ಟೋರೆಂಟ್, ಇಟ್ಟಿಗೆ ಗೂಡುಗಳು, ಕ್ರಷರ್, ಗಣಿಗಾರಿಕೆ, ಪೌಲ್ಟ್ರಿ ಫಾರಂ ಹಾಗೂ ಇತರೆ ಪ್ರಕ್ರಿಯೆಗಳಲ್ಲಿ ಕೆಲಸಕ್ಕೆ ನೇಮಿಸುವುದುನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳನ್ನು ಉದ್ಯೋಗ ಅಥವಾ ಕೆಲಸಗಳಲ್ಲಿ ತೊಡಗಿಸಿಕೊಂಡ ಮಾಲೀಕರಿಗೆ ೬ ತಿಂಗಳಿಗಿಂತ ಕಡಿಮೆ ಇಲ್ಲದಂತೆ ೨ ವ?ಗಳ ವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ೨೦,೦೦೦ ರೂಗಿಂತ ಕಡಿಮೆ ಇರದ ಹಾಗೂ ೫೦,೦೦೦ ಸಾವಿರದವರೆಗೆ ವಿಸ್ತರಿಸ ಬಹುದಾದ ದಂಡ ಅಥವಾ ಎರಡೂ ವಿಧಿಸಲಾಗುವುದು ಎಂದರು.ಮಾಲೀಕರಿಗೆ ದಂಡಬಾಲಕಾರ್ಮಿಕರ ಹಾಗೂ ಕಿಶೋರ ಕಾರ್ಮಿಕರ ಪುನರ್ವಸತಿ ನಿಧಿ ಸ್ಥಾಪಿಸಿದೆ, ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರಿಂದ ರೂ.೨೦,೦೦೦ಗಳ ಮೊತ್ತವನ್ನು ಪುನರ್ವಸತಿ ನಿಧಿ ವಸೂಲಿ ಮಾಡಲಾಗುವುದು. ಸರ್ಕಾರವು ಬಾಲ ಹಾಗೂ ಕಿಶೋರ ಕಾರ್ಮಿಕರ ಹೆಸರಿಗೆ ೧೫,೦೦೦ ರೂಗಳನ್ನು ಜಮೆಮಾಡಿ ಮಗುವಿನ ಹೆಸರಿನಲ್ಲಿ ರೂ.೩೫೦೦೦ಗಳ ಮೊತ್ತವನ್ನು ಸ್ಥಿರ ಠೇವಣಿ ಮಾಡಲಾಗುವುದು ಎಂದರು. ಕಾಯ್ದೆಯ ಕಲಂ ೧೬-೧೭ ರ ನಿರೀಕ್ಷಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಏಪ್ರಿಲ್ ೨೦೨೪ ರಿಂದ ಫೆಬ್ರವರಿ ೨೦೨೫ ರವರೆಗೆ ಜಿಲ್ಲೆಯಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ಜಂಟಿ ದಾಳಿಯಲ್ಲಿ ಒಟ್ಟು ೧೭ ಮಕ್ಕಳನ್ನು ರಕ್ಷಣೆ ಮಾಡಿದೆ, ಸಾರ್ವಜನಿಕರಿಂದ ಬಂದ ದೂರಿನ ಮೂಲಕ ೨ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಅವರಲ್ಲಿ ಒಂದು ಹೆಣ್ಣು ಮತ್ತು ೧೬ ಗಂಡು ಮಕ್ಕಳು ಪತ್ತೆಹಚ್ಚಲಾಗಿದೆ ಎಂದರು.
ಅರಿವು ಮೂಡಿಸಲು ಪ್ರಚಾರಪರಿಶಿಷ್ಟಜಾತಿ ಪರಿಶಿಷ್ಟ ಪಂಗಡ ಯೋಜನೆಯಡಿ ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ನಿಯಂತ್ರಣ ಕುರಿತು ಎಸ್ಸಿ ಎಸ್ಟಿ ಕಾಲೋನಿಗಳಲ್ಲಿ ಅರಿವು ಕಾರ್ಯಕ್ರಮ ಕೋಲಾರ ಜಿಲ್ಲಾದ್ಯಂತ ೩೩ ಗೋಡೆ ಬರಹ ಮತ್ತು ೫ ಹೋಡಿಂಗ್ ಅಳವಡಿಕೆ ಮೂಲಕ ಮಾಡಲಾಗಿದೆ ಎಂದು ತಿಳಿಸಿದರು.
ಬಾಲ ಕಾರ್ಮಿಕರ ಮತ್ತು ಕಿಶೋರ ಕಾರ್ಮಿಕರ ಜಂಟಿ ದಾಳಿಯನ್ನು ಕೈಗೊಳ್ಳುವಾಗ ನಿರೀಕ್ಷಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು, ಪೊಲೀಸ್ ಇಲಾಖೆಯಿಂದ ರಕ್ಷಣೆ ಒದಗಿಸಬೇಕು, ಆರೋಗ್ಯ ಇಲಾಖೆಯ ಸರ್ಕಾರಿ ವೈದ್ಯಾಧಿಕಾರಿಗಳು ವಯಸ್ಸಿನ ದೃಢೀಕರಣ ನೀಡಲು ಸಹಕರಿಸಬೇಕು, ದಾಳಿಯಲ್ಲಿ ಕಂಡುಬಂದ ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು, ಒಟ್ಟಾರೆ ಎಲ್ಲಾ ಅಧಿಕಾರಿಗಳು ಸೇರಿ ಕೋಲಾರವನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಗುರಿಯಾಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಈ ವೇಳೆ ಜಿಪಂ ಸಿಇಓ ಡಾ.ಪ್ರವೀಣ್.ಪಿ.ಬಾಗೇವಾಡಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನ ನಿರ್ದೇಶಕಿ ಶೃತಿ ಇದ್ದರು..