ಅರಿವು ಕೇಂದ್ರ ಜ್ಞಾನಕೇಂದ್ರವನ್ನಾಗಿಸಲು ಶ್ರಮಿಸಿ

KannadaprabhaNewsNetwork |  
Published : Jun 19, 2025, 11:50 PM ISTUpdated : Jun 19, 2025, 11:51 PM IST
೧೯ಕೆಎಲ್‌ಆರ್-೪ಕೋಲಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಮೈಸೂರಿನ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಾಗಿರುವ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ತಾಪಂನ ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಪ್ರಸಾದ್ ಚಾಲನೆ ನೀಡಿದರು. | Kannada Prabha

ಸಾರಾಂಶ

೨೦೧೯ ರಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ೫೬೨೩ ಗ್ರಂಥಾಲಯಗಳನ್ನು ಪಂಚಾಯತ್ ರಾಜ್ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಇವುಗಳನ್ನು ೨೦೨೧ ರಲ್ಲಿ ಅರಿವು ಕೇಂದ್ರಗಳಾಗಿ ಬದಲಾವಣೆ ಮಾಡಿ ನಾಮಕರಣ ಮಾಡಲಾಗಿದೆ. ಇದರ ಜತೆಗೆ ೭೦೦ ವಿಶೇಷಚೇತನರ ಸ್ನೇಹಿ ಗ್ರಂಥಾಲಯಗಳು ಕೆಲಸ ಮಾಡುತ್ತಿವೆ

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯಾದ್ಯಂತ ೬೫೯೯ ಗ್ರಾಮಗಳಲ್ಲಿ ಗ್ರಂಥಾಲಯಗಳ ಸ್ಥಾಪನೆಗೆ ಸರ್ಕಾರ ಅನುನೋದನೆ ನೀಡಿದ್ದು, ಈ ಅರಿವು ಕೇಂದ್ರಗಳನ್ನು ಜ್ಞಾನಕೇಂದ್ರಗಳನ್ನಾಗಿಸಲು ಗ್ರಾಮ ಪಂಚಾಯಿತಿ ಸಲಹಾ ಸಮಿತಿ ಸದಸ್ಯರು ಕ್ರಮವಹಿಸಬೇಕು ಎಂದು ತಾಪಂನ ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಪ್ರಸಾದ್ ಕರೆ ನೀಡಿದರು.ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿನ ಸಾಮರ್ಥ್ಯ ಸೌಧದಲ್ಲಿ ಮೈಸೂರಿನ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಾಗಿರುವ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಗ್ರಂಥಾಲಯ ಹೆಸರು ಬದಲಾವಣೆ

೨೦೧೯ ರಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ೫೬೨೩ ಗ್ರಂಥಾಲಯಗಳನ್ನು ಪಂಚಾಯತ್ ರಾಜ್ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಇವುಗಳನ್ನು ೨೦೨೧ ರಲ್ಲಿ ಅರಿವು ಕೇಂದ್ರಗಳಾಗಿ ಬದಲಾವಣೆ ಮಾಡಿ ನಾಮಕರಣ ಮಾಡಲಾಗಿದೆ. ಇದರ ಜತೆಗೆ ೭೦೦ ವಿಶೇಷಚೇತನರ ಸ್ನೇಹಿ ಗ್ರಂಥಾಲಯಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.ಕೇವಲ ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಸೀಮಿತವಾಗಿದ್ದ ಈ ಅರಿವು ಕೇಂದ್ರಗಳನ್ನು ಇದೀಗ ರಾಜ್ಯದಲ್ಲಿ ಗ್ರಾಮಗಳಿಗೂ ವಿಸ್ತರಿಸಿದ್ದು, ಈಗಾಗಲೇ ೬೫೯೯ ಗ್ರಾಮಗಳಲ್ಲಿ ಸ್ಥಾಪನೆಗೆಸರ್ಕಾರ ಅನುಮೋದನೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಗ್ರಂಥಾಲಯಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೆಲಸಮಾಡಿದ್ದನ್ನು ಸ್ಮರಿಸಿದ ಅವರು, ಸಾರ್ವಜನಿಕರಿಂದ ಪುಸ್ತಕಗಳನ್ನು ಬಳುವಳಿಯಾಗಿ ನೀಡಲು ಪುಸ್ತಕ ಜೋಳಿಗೆ ಕಾರ್ಯಕ್ರಮವನ್ನು ನಡೆಸಿದ್ದು ಇದರಿಂದ ಅನೇಕ ಗ್ರಂಥಾಲಯಗಳಿಗೆ ಅಮೂಲ್ಯ ಪುಸ್ತಕಗಳು ದೊರಕಿವೆ ಎಂದರು.

ಜ್ಞಾನದಾಹ ತೀರಿಸುವ ಕೇಂದ್ರ

ಸಂಪನ್ಮೂಲ ವ್ಯಕ್ತಿಯಾಗಿದ್ದ ಮಾಲೂರು ತಾಲೂಕು ವಿಕೇಂದ್ರಿಕೃತ ತರಬೇತಿ ಸಂಯೋಜಕ ಎಸ್.ವಿ.ಮಂಜುನಾಥ್ ಮಾತನಾಡಿ, ಗ್ರಂಥಾಲಯಗಳು ಸಾರ್ವಜನಿಕರು, ವಿದ್ಯಾರ್ಥಿಗಳ ಜ್ಞಾನದಾಹ ತೀರಿಸುವ ಕೇಂದ್ರಗಳಾಗಿದ್ದು, ಇದೀಗ ಅರಿವು ಕೇಂದ್ರಗಳಾಗಿವೆ, ಇದರ ಅಭಿವೃದ್ದಿಗೆ ಸಲಹಾ ಸಮಿತಿ ಸದಸ್ಯರು ಮತ್ತಷ್ಟು ಸಲಹೆ ನೀಡಲು ಅನುವಾಗುವಂತೆ ಈ ತರಬೇತಿ ಆಯೋಜಿಸಿದ್ದು, ಇದರ ಪ್ರಯೋಜನ ಪಡೆಯಲು ಕೋರಿದರು.ಈಗಾಗಲೇ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಾಗಿರುವ ಇಲ್ಲಿ ಮಕ್ಕಳಿಗೆ, ಮಹಿಳೆಯರು, ಸಾರ್ವಜನಿಕರಿಗೆ ಪ್ರತ್ಯೇಕ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಅಗತ್ಯವಾದ ಪುಸ್ತಕಗಳು, ಮಕ್ಕಳಿಗೆ ಒಳಾಂಗಣ ಕ್ರೀಡೆಗಳಿಗೆ ಅಗತ್ಯವಾದ ಸಲಕರಣೆ, ಅಗತ್ಯ ಪ್ರಮಾಣದಲ್ಲಿ ಡಿಜಿಟಲ್ ಸೇವೆ ಒದಗಿಸಲು ಕಂಪ್ಯೂಟರ್ ಮತ್ತಿತರ ಉಪಕರಣಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.ಗ್ರಂಥಾಲಯ ಆಧುನೀಕರಿಸಿ

ಶನಿವಾರ ಮತ್ತು ಭಾನುವಾರವೂ ತೆರೆದಿರುವ ಈ ಕೇಂದ್ರಗಳ ಅಭಿವೃದ್ದಿಗೆ ಸಲಹಾ ಸಮಿತಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ಶಾಲಾ ಮಕ್ಕಳು, ಗ್ರಾಮೀಣ ಜನತೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಗತ್ಯಮಾರ್ಗದರ್ಶನ ನೀಡಬೇಕು. ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಈ ಕೇಂದ್ರಗಳ ಅಭಿವೃದ್ದಿಗೆ ಗ್ರಾಪಂ ತೆರಿಗೆ ಸೆಸ್ ಜತೆಗೆ ದಾನಿಗಳ ನೆರವು, ಸಿಎಸ್‌ಆರ್ ನಿಧಿ ಬಳಸಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಿ ಆಧುನಿಕರಿಸಿ ಜನರ ಆಕರ್ಷಣೆಯ ಕೇಂದ್ರವಾಗಿಸಲು ತಿಳಿಸಿದರು.

ಕೇಂದ್ರದ ಮೇಲ್ವಿಚಾರಕರು ಪುಸ್ತಕಗಳ ದಾಸ್ತಾನು, ಅವುಗಳ ಶೀರ್ಷಿಗೆಗೆ ಅನುಗುಣವಾಗಿ ಪ್ರತ್ಯೇಕ ನಿರ್ವಹಣೆ, ಮಕ್ಕಳಿಗೆ ಎಟುಕುವಂತೆ ಕೆಳ ಭಾಗದಲ್ಲಿ ಪುಸ್ತಕಗಳ ಜೋಡಣೆ, ಕೇಂದ್ರ ಆರಂಭಕ್ಕೆ ಸಮಯಪಾಲನೆ ಎಲ್ಲವನ್ನು ಅನುಸರಿಸಿಬೇಕು ಎಂದರು.ಕಾರ್ಯಾಗಾರದಲ್ಲಿ ಸಲಹಾ ಸಮಿತಿ ಸದಸ್ಯರಾದ ಅರಾಭಿಕೊತ್ತನೂರು, ಅಣ್ಣಿಹಳ್ಳಿ, ಅರಹಳ್ಳಿ ಅಮ್ಮನಲ್ಲೂರು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಒಗಳು, ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ತಾಪಂ ಅಧೀಕ್ಷಕಿ ಇಂದಿರಮ್ಮ ತಾಪಂನ ಕರಿಬಸಪ್ಪ, ಅರಾಭಿಕೊತ್ತನೂರು ಗ್ರಾ.ಪಂ ಅಧ್ಯಕ್ಷೆ ರೇಣುಕಾಂಬ, ಪಿಡಿಒ ಶಾಲಿನಿ, ಅಮ್ಮನಲ್ಲೂರು ಗ್ರಾ.ಪಂ ಅಧ್ಯಕ್ಷೆ ವಿಮಲ, ಪಿಡಿಒ ಬೈರೆಡ್ಡಿ, ಅರಹಳ್ಳಿ ಗ್ರಾ.ಪಂ ಅಧ್ಯಕ್ಷೆ ಗಾಯತ್ರಮ್ಮ, ಅಣ್ಣಿಹಳ್ಳಿ ಪಿಡಿಒ ಸವಿತಾ, ಪ್ರೌಢಶಾಲೆ ಮುಖ್ಯಶಿಕ್ಷಕಿ ಬಿ.ಎಂ.ಪುಷ್ಪ, ಅರಾಭಿಕೊತ್ತನೂರು ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ನಾಗರಾಜ್,ಅರಹಳ್ಳಿ ಮುಖ್ಯಶಿಕ್ಷಕ ಆರ್.ಮುರಳಿ ಮತ್ತಿತರರಿದ್ದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ